ಕೋಲಾರ: ವ್ಯಾಪಾರ ಮಾಡಿ ಲಾಭಗಳಿಸುವ ಬದಲು ಸಮಾಜದಲ್ಲಿನ ಬಡವರಿಗೆ, ಹಿರಿಯರಿಗೆ ಸಹಾಯ ಮಾಡಿದಾಗ ಮಾತ್ರವೇ ಹೆಸರು ಶಾಶ್ವತವಾಗಿ ಉಳಿಯಲು ಸಾಧ್ಯವಾಗುತ್ತದೆ ಅನಿಟ್ಟಿನಲ್ಲಿ ಸಮಾಜದಲ್ಲಿ ಪ್ರತಿಯೊಬ್ಬರೂ ಚಿಂತಿಸಬೇಕಾಗಿದೆ ಎಂದುಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ತಿಳಿಸಿದರು
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಮಲ್ ಬಾರ್ ಚಾರಿಟೇಬರ್ ಟ್ರಸ್ಟ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಪಿಯುಸಿ ವಿದ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಲ ಬಾರ್ ವತಿಯಿಂದ ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ, ಅಜ್ಜಿಮನೆ ಪರಿಕಲ್ಪನೆಯಡಿ ನಿರಾಶ್ರಿತರ ಕೇಂದ್ರ ಸ್ಥಾಪನೆ ಮಾಡಿರುವುದು ಇತರರಿಗೆ ಮಾದರಿಯಾಗಿದೆ ನಿರಂತರವಾಗಿ ನಿರ್ವಹಣೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದ್ದಾರೆ ಎಂದರು
ಸಮಾಜದಲ್ಲಿ ಶಿಕ್ಷಣ, ಆರೋಗ್ಯ, ಕೃಷಿ ಹಾಗೂ ಉದ್ಯೋಗ ಸಮರ್ಪಕವಾಗಿ ಜನತೆಗೆ ಸರ್ಕಾರಗಳು ಕಲ್ಪಿಸಿದಾಗ ಮುಂದೆ ಎದುರಾಗುವ ಅನೇಕ ಸಮಸ್ಯೆಗಳಿಗೆ ಪರಿಹಾರವಾಗುತ್ತದೆ ಜೊತೆಗೆ ಯುವಕರು ಸಹ ಸ್ವಾಭಿಮಾನದ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಸಮಾಜಿಕ ಸೇವೆ ಎಂಬುದು ಬಹಳ ಇಷ್ಟ, ಒಳ್ಳೆಯ ಕೆಲಸ ಮಾಡುವವರನ್ನು ಸದಾ ಪ್ರೋತ್ಸಾಹಿಸಬೇಕು ಮಲಬಾರ್ ವತಿಯಿಂದ ಜಿಲ್ಲೆಯಲ್ಲಿ 615 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ 55 ಲಕ್ಷರೂ ವಿದ್ಯಾರ್ಥಿವೇತನ ವಿತರಣೆ ಮಾಡುತ್ತಿದ್ದಾರೆ ಸರ್ಕಾರದೊಂದಿಗೆ ಸಮಾಜಸೇವಕರು ಸಹ ಸಮಾಜದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಲಾಗಿದ್ದು ಇದರ ಪ್ರಯೋಜನೆಯಾಗಬೇಕು ಎಂದು ಕಿವಿಮಾತು ಹೇಳಿದರು.
ಸಮಾಜದಲ್ಲಿ ಏನೇ ಕಾರ್ಯಕ್ರಮ ಮಾಡಿದರು ಶಾಶ್ವತವಾಗಿ ಉಳಿಯುವುದು ಒಳ್ಳೆಯ ಕೆಲಸದಿಂದ ಮಾತ್ರ. ಟಿ.ಚನ್ನಯ್ಯ, ಡಿಜಿವಿ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಎಂವಿ ಕೃಷ್ಣಪ್ಪ ಮುಂತಾದ ಮಹಾನಿಯರ ಸಾಲಿಗೆ ಮಲಬಾರ್ ಚಾರಿಟಬಲ್ ಟ್ರಸ್ಟ್ ಸಂಸ್ಥೆ ಬರಬೇಕು ಎಂದು ತಿಳಿಸಿದರು
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಎಲ್ಅನಿಲ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಸಾಕಷ್ಟು ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿವೆ, ಅವರಿಗೆ ಬರುವ ಲಾಭದಲ್ಲಿ ಶೇ.5ರಷ್ಟು ಸಿಎಸ್ಆರ್ ಚಟುವಟಿಕೆ ಮಾಡಬೇಕು. ಮಾತು ಹೇಳುತ್ತಿದ್ದಾರೆ ಹೊರತು ಕಣ್ಣಿಗೆ ಕಾಣುತ್ತಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.
ಸಿಎಸ್ಆರ್ ಪ್ರಗತಿ ಪರಿಶೀಲನೆ ಮಾಡಲು ಕೈಗಾರಿಕೆಗಳ ಮುಖ್ಯಸ್ಥ ಸಭೆ ಕರೆಯಲು ಡಿಸಿ ಅವರಿಗೆ ಸೂಚಿಸಲಾಗಿದೆ. ಮಲ್ ಬಾರ್ ಸಂಸ್ಥೆಯವರು ಲಾಭದ ಹಣವನ್ನು ಸಮಾಜಿಕ ಕೆಲಸಕ್ಕೆ ರಾಜ್ಯದಲ್ಲಿ 26 ಕೋಟಿ ವೆಚ್ಚ ಮಾಡುತ್ತಿದ್ದಾರೆ. ಶೈಕ್ಷಣಿಕ, ಆರೋಗ್ಯ, ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡುತ್ತಿದ್ದಾರೆ. ಅಜ್ಜಿ ಮನೆಯಲ್ಲಿ ವಯೋವೃದ್ಧರನ್ನು ಪೋಷಿಸುತ್ತಿರುವುದು ಶ್ಲಾಘನೀಯ, ಮಕ್ಕಳಿಂದ ವಂಚನೆಗೆ ಒಳಗಾದವರನ್ನು ಹಾರೈಕೆ ಇತರರಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಮಲ್ ಬಾರ್ ಚಾರಿಟೇಬಲ್ ಟ್ರಸ್ಟ್ನ ಜೋನಲ್ ಹೆಡ್ ಶರಫುದ್ದಿನ್ ಮಾತನಾಡಿ, ಮಲ್ಬಾರ್ ಚಾರಿಟೇಬಲ್ ಟ್ರಸ್ಟ್ 1993ರಲ್ಲಿ ಪ್ರಾರಂಭವಾಗಿದ್ದು ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು ತನ್ನದೆ ಆದ ಛಾಪು ಮೂಡಿಸುತ್ತಿದೆ ಸರ್ಕಾರಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ರಾಜ್ಯದಲ್ಲಿ 22 ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಗಿದೆ. ಅದೇ ರೀತಿ ಜಿಲ್ಲೆಯ 18 ಕಾಲೇಜುಗಳ 615 ವಿದ್ಯಾರ್ಥಿಗಳಿಗೆ 55 ಲಕ್ಷ ವಿತರಣೆ ಹಮ್ಮಿಕೊಳ್ಳಲಾಗಿರುವುದು ಖುಷಿ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಪಿಯು ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಾಮಚಂದ್ರಪ್ಪ, ಮಲಬಾರ್ ಮಳಿಗೆಯ ಹೆಡ್ಗಳಾದ ಸಂತೋಷ್, ಜಿತೇಶ್, ಸಾಧಿಕ್, ಪ್ರಾಂಶುಪಾಲರ ಸಂಘ ಅಧ್ಯಕ್ಷ ಬಾಲಕೃಷ್ಣ, ಬಂಗಾರಪೇಟೆ ಬಾಲಕಿಯ ಕಾಲೇಜಿನ ಪ್ರಾಂಶುಪಾಲ ಸುಬ್ರಮಣಿ, ಉಪನ್ಯಾಸಕ ಅಶ್ವಥ್ ಗೌಡ ಮುಂತಾದವರು ಇದ್ದರು