ಫೈಟರ್ಸ್ ಟೇಕ್ವಾಂಡೋ ಅಕಾಡೆಮಿ: ಬೆಲ್ಟ್ ಪರೀಕ್ಷೆಯಲ್ಲಿ ಗೆದ್ದ ಮಕ್ಕಳಿಗೆ ಪ್ರಶಸ್ತಿ ಪ್ರದಾನ

ಮಾ.10ರಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಟೇಕ್ವಾಂಡೋ ಸಂಸ್ಥೆಯ ವತಿಯಿಂದ ಮಾರಸಂದ್ರ ಫೈಟರ್ಸ್ ಟೇಕ್ವಾಂಡೋ ಅಕಾಡೆಮಿಯಲ್ಲಿ ಬೆಲ್ಟ್ ಪರೀಕ್ಷೆಯನ್ನು ಹಮ್ಮಿಕೊಳ್ಳಲಾಗಿತ್ತು.

ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮಕ್ಕಳಿಗೆ ಅರಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮುನಿಲಕ್ಷ್ಮಮ್ಮ ಪರಶುರಾಮ್.ಎಂ ಹಾಗೂ ಮಂಜುನಾಥ್ ಎಸ್.ಎಂ ಅವರು ಬೆಲ್ಟ್ ಮತ್ತು ಪ್ರಶಸ್ತಿ ಪತ್ರವನ್ನು ವಿತರಿಸಿದರು.

ಈ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಟೇಕ್ವಾಂಡೋ ಸಂಸ್ಥೆ ಕಾರ್ಯದರ್ಶಿ ವಿ.ನಾರಾಯಣಸ್ವಾಮಿ ಹಾಗೂ ತರಬೇತುದಾರರಾದ ಗಿರೀಶ್ ಜೆ.ಸಿ ಮತ್ತು ಬಿ.ತೇಜಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *