ಫೆ.15-16ರಂದು ಕೂರ್ಮಾಸನ ಭಾರ ಹೊರುವ ಸ್ಪರ್ಧೆ ಹಾಗೂ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆ ಆಯೋಜನೆ

ಶ್ರೀ ಹರ್ಷಿಣಿ ಗ್ರೂಪ್ ಆಫ್ ಯೋಗ ಇನ್ ಕೂರ್ಮಾಸನ, ಶ್ರೀ ಯೋಗ ದೀಪಿಕಾ ಯೋಗ ಕೇಂದ್ರ ಟ್ರಸ್ಟ್, ಶ್ರೀ ರಾಮಕೃಷ್ಣ ಯೋಗ ಶಿಕ್ಷಣ ಕೇಂದ್ರ ವತಿಯಿಂದ ಪ್ರಥಮ ವಿಶ್ವಮಟ್ಟದ ಕೂರ್ಮಾಸನ ಭಾರ ಹೊರುವ ಸ್ಪರ್ಧೆ ಹಾಗೂ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯನ್ನು ಫೆ.15 ರಿಂದ 16ರವರೆಗೆ ನಗರದ ನ್ಯಾಷನಲ್ ಪ್ರೈಡ್ ಸ್ಕೂಲ್ ನಲ್ಲಿ ಆಯೋಜನೆ ಮಾಡಲಾಗಿದೆ ಎಂದು ಕೂರ್ಮಾಸನ ತಜ್ಞ ಎಚ್.ಎಸ್ ರಾಮಕೃಷ್ಣ ತಿಳಿಸಿದರು.

ನಗರದ ನ್ಯಾಷನಲ್ ಪ್ರೈಡ್ ಸ್ಕೂಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೂರ್ಮಾಸನ ಮಾಡುವುದರಿಂದ ಹೃದಯ ಸಂಬಂಧಿ ರೋಗಗಳು, ಉಸಿರಾಟ ತೊಂದರೆ ನಿವಾರಣೆಯಾಗುತ್ತದೆ. ಸ್ಪರ್ಧೆಯಲ್ಲಿ ಸುಮಾರು 500-700 ಯೋಗಾಪಟುಗಳು ಭಾಗಿಯಾಗಲಿದ್ದಾರೆ. ಸ್ಪರ್ಧೆಯಲ್ಲಿ ಭಾಗಿಯಾಗುವವರಿಗೆ ಊಟ ಹಾಗೂ ವಸತಿ ಆಯೋಜನೆ ಮಾಡಲಾಗಿದೆ ಎಂದು ಹೇಳಿದರು.

8-50ವರ್ಷದ ವಯೋಮಾನದವರಿಗೆ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಇರುತ್ತದೆ. ಸ್ಪರ್ಧೆಯಲ್ಲಿ ವಿದೇಶಿ ಯೋಗಪಟುಗಳು ಸಹ ಭಾಗಿಯಾಗುವ ಸಾಧ್ಯತೆ ಇದೆ.

ಸ್ಪರ್ಧೆಯಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಯೋಗ ಉಡುಪುಗಳನ್ನು ಧರಿಸಬೇಕು. ಎರಡು ಫೋಟೋ, ಆಧಾರ್ ಕಾರ್ಡ್ ಅಥವಾ ಶಾಲಾ ಗುರುತಿನ ಚೀಟಿ, ವೈದ್ಯಕೀಯ ಪರೀಕ್ಷೆ ಪತ್ರ,ವನ್ನು ಲಗತ್ತಿಸಬೇಕು. 500ರೂ. ಪ್ರವೇಶ ಶುಲ್ಕ ಪಾವತಿಸಬೇಕು. ಕೂರ್ಮಾಸನದಲ್ಲಿ ಭಾರ ಹೊತ್ತ ನಂತರ ಆಸನಗಳು, ಎರಡು ಐಚ್ಛಿಕ ಆಸನಗಳನ್ನು ಮಾಡಬೇಕು ಎಂದು ಹೇಳಿದರು.

ಈ ವೇಳೆ ನಗರಸಭಾ ಸದಸ್ಯ ಶಿವಶಂಕರ್ (ಶಂಕ್ರಿ), ಶಿವಕುಮಾರ್, ಮಂಜುನಾಥ್ (ಸಂತೆ), ವೆಂಕಟಾಚಲಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!