FeminaMissIndia2023: ಇಂಫಾಲ್‌ನಲ್ಲಿ ನಡೆದ ಫೆಮಿನಾ ಮಿಸ್ ಇಂಡಿಯಾ 2023 ಗ್ರ್ಯಾಂಡ್ ಫಿನಾಲೆಯ 59ನೇ ಆವೃತ್ತಿಯಲ್ಲಿ ರಾಜಸ್ಥಾನದ ನಂದಿನಿ ಗುಪ್ತಾ ಅವರು ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2023 ಕಿರೀಟವನ್ನು ಪಡೆದರು.
ದೆಹಲಿಯ ಶ್ರೇಯಾಪೂಂಜಾ ಮೊದಲ ರನ್ನರ್ ಅಪ್ ಮತ್ತು ಮಣಿಪುರದ ತೌನಾಜಾಮ್ ಸ್ಟ್ರೆಲಾಲುವಾಂಗ್ ಎರಡನೇ ರನ್ನರ್ ಅಪ್ ಎಂದು ಘೋಷಿಸಲಾಯಿತು.
ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿರುವ ಗ್ರ್ಯಾಂಡ್ ಮಿಸ್ ವರ್ಲ್ಡ್ ಸ್ಪರ್ಧೆಯ 71ನೇ ಆವೃತ್ತಿಯಲ್ಲಿ ಭಾರತವನ್ನು ನಂದಿನಿ ಗುಪ್ತಾ ಪ್ರತಿನಿಧಿಸಲಿದ್ದಾರೆ. ನಂದಿನಿ ಗುಪ್ತಾ ಅವರು ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದುಕೊಂಡಿದ್ದಾರೆ.