Categories: ಲೇಖನ

ಫಿಕ್ಸಿಂಗ್ ಮತ್ತು ದಂಧೆ…….

ಕ್ರಿಕೆಟ್ ನಲ್ಲಿ ಫಿಕ್ಸಿಂಗ್,
ಕುದುರೆ ರೇಸ್ ನಲ್ಲಿ ಫಿಕ್ಸಿಂಗ್,
ರಾಜಕೀಯದಲ್ಲಿ ಫಿಕ್ಸಿಂಗ್,
ಸಿನಿಮಾ ಪ್ರಶಸ್ತಿಗಳಲ್ಲಿ ಫಿಕ್ಸಿಂಗ್,
ಅಕಾಡೆಮಿಗಳ ಅಧಿಕಾರ ಮತ್ತು ಪ್ರಶಸ್ತಿಗಳಲ್ಲಿ ಫಿಕ್ಸಿಂಗ್,
ಶಾಲಾ ಕಾಲೇಜು ಪರೀಕ್ಷೆಗಳಲ್ಲಿ ಫಿಕ್ಸಿಂಗ್,
ಸರ್ಕಾರಿ ಉದ್ಯೋಗ ಪಡೆಯುವಲ್ಲಿ ಫಿಕ್ಸಿಂಗ್,
ಮಹಾನಗರ ಪಾಲಿಕೆ, ಪುರಸಭೆ, ಪಂಚಾಯತಿಗಳಲ್ಲಿ ಜಾತಿ ಆಧಾರಿತ ಮೀಸಲಾತಿ ನಿಗದಿಯಲ್ಲಿ ಫಿಕ್ಸಿಂಗ್,
ರಿಯಾಲಿಟಿ ಶೋಗಳಲ್ಲಿ ವಿಜೇತರ ಫಿಕ್ಸಿಂಗ್,
ಮತದಾನದಲ್ಲಿ ಜಾತಿಗಳ ಫಿಕ್ಸಿಂಗ್
ಇಡೀ ಸಮಾಜವೇ,

ಫಿಕ್ಸಿಂಗ್ ಫಿಕ್ಸಿಂಗ್ ಫಿಕ್ಸಿಂಗ್…….

ಎತ್ತ ಸಾಗುತ್ತಿದ್ದೇವೆ ನಾವು…

ಈ ಎಲ್ಲಾ ಫಿಕ್ಸಿಂಗ್ ಗಳು ಬಹುತೇಕ ಹಣ ಅಧಿಕಾರಕ್ಕಾಗಿ ನಡೆಯುತ್ತಿರುವುದು ಸ್ಪಷ್ಟವಾಗಿ ಕಾಣಬಹುದು.

ಹಾಗಾದರೆ ಈ ಸಮಾಜದಲ್ಲಿ ಬದುಕಿನ ಮೂಲ ಆಶಯವೇ ಹಣ ಅಧಿಕಾರ ಎಂದಾಯಿತು. ಅದಿಲ್ಲದೇ ಬದುಕೇ ಇಲ್ಲವೇ.

ಹಣ ಮತ್ತು ಅಧಿಕಾರ ಕೆಲವರಿಗೆ ಮಾತ್ರ ಸಿಗುತ್ತದೆ. ಉಳಿದ ಬಹಳಷ್ಟು ಜನರ ಜೀವನದ ಅರ್ಥವೇನು ?

ಸಿನಿಮಾಗಳಲ್ಲಿ ಚಿತ್ರಿಸುವಂತೆ ವಕೀಲರು, ಪೋಲೀಸರು, ರಾಜಕಾರಣಿಗಳು, ಪತ್ರಕರ್ತರು ಎಲ್ಲರೂ ಫಿಕ್ಸಿಂಗ್ ನಲ್ಲಿ ಭಾಗಿಯಾದರೆ ಮುಂದಿನ ಮಕ್ಕಳ ಭವಿಷ್ಯವೇನು ?

ಒಮ್ಮೆ ಬಯಲಾಗಿತ್ತು ಮೆಡಿಕಲ್ ಸೀಟ್ ದಂಧೆ……

ಹಿಂದೆ ಬಯಲಾಗಿತ್ತು ಕ್ಯಾಪಿಟೇಷನ್ ದಂಧೆ…….

ಆಗೊಮ್ಮೆ ಬಯಲಾಗಿತ್ತು ವೇಶ್ಯಾವಾಟಿಕೆ ದಂಧೆ…..

ಹಿಂದೊಮ್ಮೆ ಬಯಲಾಗಿತ್ತು ಕಿಡ್ನಿ ಮಾರಾಟ ದಂಧೆ….

ಮತ್ತೊಮ್ಮೆ ಬಯಲಾಗಿತ್ತು ಮಾನವ ಕಳ್ಳ ಸಾಗಾಣಿಕೆ ದಂಧೆ……….

ಮಗದೊಮ್ಮೆ ಬಯಲಾಗಿತ್ತು ಮಾದಕವಸ್ತು ಮಾರಾಟ ದಂಧೆ……

ಮತ್ತೆ ಮತ್ತೆ ಬಯಲಾಗುತ್ತಿದೆ ಚಿನ್ನದ ಕಳ್ಳ ಸಾಗಾಣಿಕೆ ದಂಧೆ….

ಈಗಲೂ ಬಯಲಾಗುತ್ತಿದೆ ಆಹಾರ ಕಲಬೆರಕೆ ದಂಧೆ…

ಯಾವಾಗಲೂ ಬಯಲಾಗುತ್ತದೆ ಸರ್ಕಾರದ ಪ್ರಶಸ್ತಿ ಮಾರಾಟದ ದಂಧೆ…..

ಬಯಲಾಗುತ್ತಲೇ ಇದೆ ಕಪ್ಪು ಹಣದ ದಂಧೆ….

ದಿನವೂ ಬಯಲಾಗುತ್ತಿದೆ ಬೆಟ್ಟಿಂಗ್ ದಂಧೆ…..

ಹೆಚ್ಚಾಗುತ್ತಲೇ ಇದೆ ಬ್ಯಾಂಕ್ ವಂಚನೆಯ ದಂಧೆ…….

ಮುಂದೊಮ್ಮೆ ಬಯಲಾಗುತ್ತದೆ ಮಾನವ ಮೌಲ್ಯಗಳ ವಿನಾಶದ ದಂಧೆ…….

ಹೀಗೆ ದಂಧೆಗಳ ಬಗ್ಗೆ ಹೇಳುತ್ತಾ ಹೋದರೆ ಬಹುತೇಕ ನಮ್ಮ ಸಮಾಜದ ಎಲ್ಲಾ ಕ್ಷೇತ್ರಗಳನ್ನು ಒಳಗೊಳ್ಳುತ್ತದೆ.
ಅದಕ್ಕಾಗಿ ಒಂದು ದಿನಪತ್ರಿಕೆ ಅಥವಾ 24×7 ಟಿವಿ ವಾಹಿನಿ ಮತ್ತು ಒಂದು ದೊಡ್ಡ ಪ್ರತ್ಯೇಕ ಇಲಾಖೆಯೇ ಸ್ಥಾಪಿಸಬೇಕಾಗಬಹುದು.

ಮೊದಲು ವ್ಯವಸ್ಥೆ ಇಷ್ಟೊಂದು ಹದಗೆಟ್ಟಿರಲಿಲ್ಲ. ಕೆಟ್ಟವರು ವಂಚಕರು ವಿರಳವಾಗಿಯೂ ಪ್ರಾಮಾಣಿಕರು ಬಹುಸಂಖ್ಯಾತರಾಗಿಯೂ ಇದ್ದರು‌.
ಆದರೆ ಈಗ ಎಲ್ಲವೂ ಉಲ್ಟಾ ಆಗಿದೆ.

ಆಧುನಿಕತೆ ಬೆಳೆದಂತೆಲ್ಲಾ, ಅಕ್ಷರಸ್ಥರ ಪ್ರಮಾಣ ಹೆಚ್ಚಾದಂತೆಲ್ಲಾ, ಜನರ ಮಾಹಿತಿ ತಿಳಿವಳಿಕೆಯ ಮಟ್ಟ ಉತ್ತಮವಾದಂತೆಲ್ಲಾ ಈ ದಂಧೆಗಳ ಪ್ರಮಾಣವು ಎಲ್ಲವನ್ನೂ ಎಲ್ಲರನ್ನೂ ಆಕ್ರಮಿಸುತ್ತಿದೆ.

ಬಹುಶಃ ಆಳವಾದ ಮತ್ತು ಪ್ರಾಮಾಣಿಕವಾದ ತನಿಖೆ ನಡೆದರೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಈ ದೇಶದ ಬಹುತೇಕ ಕೋಟ್ಯಾಧಿಪತಿಗಳು ಒಂದಲ್ಲ ಒಂದು ರೀತಿಯಲ್ಲಿ ಈ ದಂಧೆಗಳಲ್ಲಿ ಸಿಲುಕಬಹುದು.

ಕೆಲವರದು ಅನೈತಿಕ ದಂಧೆ, ಹಲವರದು ಕಾನೂನಿನ ಅಕ್ರಮ ದಂಧೆ, ಮತ್ತಷ್ಟು ಜನರದು ನೈತಿಕ ಮತ್ತು ಕಾನೂನಿನ ಸುಳಿಗೆ ಸಿಲುಕದ ಪ್ರಾಮಾಣಿಕ ಮುಖವಾಡದ ದಂಧೆ ಹೀಗೆ…..

ಹಣಕ್ಕೆ ಸಿಕ್ಕಾಪಟ್ಟೆ ಮಹತ್ವ ಬಂದ ಕಾರಣದಿಂದಾಗಿ, ಹಣವಿಲ್ಲದೆ ಬದುಕೇ ಅಸಾಧ್ಯ ಎನ್ನುವ ಪರಿಸ್ಥಿತಿಯಲ್ಲಿ ದಂಧೆಗಳು ವ್ಯಾಪಕವಾಗಿವೆ. ಏನಾದರೂ ಮಾಡಿ ಹಣ ಮಾಡುವುದು, ಹಣ ಹೆಚ್ಚಾದಾಗ ಆಸ್ತಿ ಅಧಿಕಾರ ಜನಪ್ರಿಯತೆ ಪಡೆಯಲು ಪ್ರಯತ್ನಿಸುವುದು, ಒಂದು ವೇಳೆ ಅದು ದೊರೆತರೆ ಅದನ್ನು ಉಳಿಸಿಕೊಳ್ಳಲು ಮತ್ತು ಬೆಳೆಸಿಕೊಳ್ಳಲು ಹಣವನ್ನೇ ಉಪಯೋಗಿಸಿ ಮತ್ತಷ್ಟು ದಂಧೆಗೆ ಕೈ ಹಾಕುವುದು…..

ಇದೊಂದು ವಿಷ ಚಕ್ರ. ಇಲ್ಲಿ ಇನ್ನೂ ಒಂದು ಸೂಕ್ಷ್ಮವಾದ ವಿಷಯವಿದೆ. ದಂಧೆಯ ಲಾಭ ಕೇವಲ ಬೆರಳೆಣಿಕೆಯ ಕೆಲವೇ ಜನರಿಗೆ ಸಿಗುತ್ತದೆ. ಆದರೆ ದಂಧೆಯಲ್ಲಿ ಬದುಕಿನ ಮೂಲಭೂತ ಅವಶ್ಯಕತೆಗಳ ಕೊರತೆಯಿರುವ ಹಲವಾರು ಜನ ದಲ್ಲಾಳಿಗಳಾಗಿ ಕೆಲಸ ಮಾಡುತ್ತಿರುತ್ತಾರೆ. ಅವರಿಗೆ ತಮ್ಮ ಅಪರಾಧದ ಪರಿಣಾಮದ ಬಗ್ಗೆ ಸರಿಯಾದ ತಿಳಿವಳಿಕೆ ಇರುವುದಿಲ್ಲ ಮತ್ತು ಇದ್ದರೂ ಇದೊಂದು ಅನಿವಾರ್ಯ ಕೆಲಸ ಎಂದೇ ಭಾವಿಸುತ್ತಾರೆ. ದೊಡ್ಡ ದೊಡ್ಡ ಕುಳಗಳೇ ಇದರಲ್ಲಿ ಭಾಗಿಯಾಗಿರುವಾಗ ನಾವ್ಯಾವ ಮಹಾ ಎಂಬ ನಿರ್ಲಕ್ಷ್ಯ ಸಹ ಇಲ್ಲಿ ಕೆಲಸ ಮಾಡುತ್ತದೆ.

ಈ ದಂಧೆಗಳನ್ನು ಪ್ರತ್ಯೇಕ ಘಟನೆಗಳಾಗಿ ನೋಡಬಾರದು. ಇದು ಇಡೀ ವ್ಯವಸ್ಥೆಯ ವಿಫಲತೆಯ ಸಂಕೇತ. ಎಲ್ಲವೂ ಒಂದಕ್ಕೊಂದು ಪೂರಕ. ಜನರು ಸಹ ಇದೆಲ್ಲ ಸಾಮಾನ್ಯ. ವ್ಯವಸ್ಥೆ ಇರುವುದೇ ಹೀಗೆ. ನಾವು ಇದರಲ್ಲೇ ಹೊಂದಾಣಿಕೆ ಮಾಡಿಕೊಂಡು ಬದುಕಬೇಕಿದೆ ಎಂಬ ಸಿನಿಕತನದ ಮನಸ್ಥಿತಿ ತಲುಪಿಯಾಗಿದೆ.

ನಾವೇ ನಮ್ಮ ಅಜ್ಞಾನ, ದುರಾಸೆ, ಸ್ವಾರ್ಥದ ಬಲದಿಂದ ಸೃಷ್ಟಿಸಿಕೊಂಡ ಬಲೆಯೊಳಗೆ ಬಂಧಿಯಾಗಿದ್ದೇವೆ. ಈ ದಂಧೆಗಳ ಭಾಗವಾಗಿದ್ದೇವೆ. ಆತ ರಾಜಕಾರಣಿಯಾಗಿರಬಹುದು, ಅಧಿಕಾರಿಯಾಗಿರಬಹುದು, ಧಾರ್ಮಿಕ ಮುಖಂಡನಾಗಿರಬಹುದು, ವೃತ್ತಿಪರನೇ ಆಗಿರಬಹುದು, ಜನಸಾಮಾನ್ಯನೇ ಆಗಿರಬಹುದು ದಂಧೆಗಳ ಒಳಗೆ ಅರಿತೋ, ಅರಿಯದೆಯೋ ಸಿಲುಕಿಕೊಂಡಿದ್ದಾನೆ. ಇದು ಬ್ರೇಕಿಂಗ್ ನ್ಯೂಸ್‌ ಆಗಿ ಉಳಿದಿಲ್ಲ……..

ಇದೀಗ ನಮ್ಮ ಮುಂದಿರುವ ಬೃಹತ್ ಪ್ರಶ್ನೆ, ಇದರಿಂದ ಹೊರಬರುವ ಮಾರ್ಗಗಳ ಹುಡುಕಾಟ. ಮತ್ತೊಮ್ಮೆ ಮಾನವೀಯ ಮೌಲ್ಯಗಳ ಪುನರ್ ಸ್ಥಾಪನೆ. ಸಹಜ, ಸರಳ, ಸ್ವಾಭಾವಿಕ, ಸ್ವಾಭಿಮಾನಿ ಬದುಕಿನ
ರೀತಿ ನೀತಿಗಳ ಅಳವಡಿಕೆ. ನಮ್ಮ ಮಕ್ಕಳಲ್ಲಿ ಇದನ್ನು ಕಲಿಸುವುದು ಮತ್ತು ನಾವು ಕೂಡ ಇದನ್ನು ಅನುಸರಿಸುವುದು.
ಬಲಿತ ಮನಸ್ಸುಗಳಿಗೆ ಇದು ಕಷ್ಟವಾದರೂ ಅಸಾಧ್ಯವಲ್ಲ. ಪ್ರಯತ್ನಿಸೋಣ. ಇದರಲ್ಲಿ ನೆಮ್ಮದಿ ಮತ್ತು ಬದುಕಿನ ಸಾರ್ಥಕತೆ ಅಡಗಿದೆ……..

ಹಣವೇ ಮೌಲ್ಯಗಳಾಗಿ,
ಅಧಿಕಾರವೇ ಧರ್ಮವಾಗಿ,
ಪ್ರಚಾರವೇ ಸಂಪ್ರದಾಯವಾಗಿ,
ವಂಚನೆಯೇ ವೃತ್ತಿಯಾಗಿ,
ಮುಖವಾಡಗಳೇ ಸಹಜ ಗುಣಗಳಾಗಿ,
ಮಾರ್ಪಾಡಾಗುತ್ತಿರುವ ಈ ಹೊತ್ತಿನಲ್ಲಿ………

ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ಬಂದಿದೆ.

ಅದಕ್ಕಾಗಿ ಈ ಕ್ಷಣದಿಂದಲೇ ಮೌನವಾಗಿ ಪ್ರಾರಂಭಿಸೋಣ……….

ಹಣದ ಮೋಹ ಸ್ವಲ್ಪ ಕಡಿಮೆ ಮಾಡಿಕೊಳ್ಳೋಣ,

ಮಾನವೀಯ ಮೌಲ್ಯಗಳ ಪಾಲನೆ ಸ್ವಲ್ಪ ಹೆಚ್ಚು ಮಾಡಿಕೊಳ್ಳೋಣ,

ದ್ವೇಷವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳೋಣ,

ಪ್ರೀತಿಯನ್ನು ಸ್ವಲ್ಪ ಹೆಚ್ಚು ಮಾಡಿಕೊಳ್ಳೋಣ,

ಕೋಪವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳೋಣ,

ತಾಳ್ಮೆಯನ್ನು ಸ್ವಲ್ಪ ಹೆಚ್ಚು ಮಾಡಿಕೊಳ್ಳೋಣ,

ಸ್ವಾರ್ಥವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳೋಣ,

ತ್ಯಾಗವನ್ನು ಸ್ವಲ್ಪ ಹೆಚ್ಚು ಮಾಡಿಕೊಳ್ಳೋಣ,

ಗಲಾಟೆಗಳನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳೋಣ,

ಸ್ನೇಹಿತರನ್ನು ಸ್ವಲ್ಪ ಹೆಚ್ಚು ಮಾಡಿಕೊಳ್ಳೋಣ,

ಭ್ರಮೆಗಳನ್ನು ಸ್ವಲ್ಪ ದೂರ ಮಾಡೋಣ,

ವಾಸ್ತವಕ್ಕೆ ಸ್ವಲ್ಪ ಹತ್ತಿರವಾಗೋಣ,

ಬೂಟಾಟಿಕೆ ಸ್ವಲ್ಪ ಕಡಿಮೆ ಮಾಡೋಣ,

ನ್ಯೆಜತೆಗೆ ಸ್ವಲ್ಪ ಹೆಚ್ಚು ಒತ್ತು ಕೊಡೋಣ,

ಎಲ್ಲವನ್ನೂ ನಿಮ್ಮ ಕುಟುಂಬಕ್ಕಾಗಿ ಮಾಡಿ,

ಆದರೆ ಸಮಾಜಕ್ಕಾಗಿ ಸ್ವಲ್ಪವಾದರೂ ಕೊಡಿ,

ಎಲ್ಲವೂ ನಿಮಗಾಗಿ,
ನೀವು ಮಾತ್ರ ಇತರರಿಗಾಗಿ,

ಮುಖವಾಡ ಮನಸ್ಥಿತಿ ಕಡಿಮೆ ಮಾಡಿ,

ವಾಸ್ತವ ಮನಸ್ಥಿತಿಗೆ ಹೆಚ್ಚು ಹತ್ತಿರವಾಗಿ,

ಈಗಿನಿಂದಲೇ ಪ್ರಯತ್ನಿಸಿ,

ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ……

ಎಲ್ಲರಿಗೂ ಒಳ್ಳೆಯದಾಗಲಿ….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಹಿಂಬದಿಯಿಂದ ಬೈಕ್ ಡಿಕ್ಕಿ: ಪಾದಚಾರಿ ಸ್ಥಳದಲ್ಲೇ ಸಾವು

ದೊಡ್ಡಬಳ್ಳಾಪುರ: ತಾಲ್ಲೂಕಿನ ಕಾಡನೂರು ಕೈಮರ ಸಮೀಪದ ಆಂಜನಮೂರ್ತಿ ನಗರ ಬಳಿ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ…

7 hours ago

ಕುಮಾರಸ್ವಾಮಿ ಕೇಂದ್ರ ಸಚಿವರಲ್ಲ; ಕೇಂದ್ರದ ವಕ್ತಾರ, ಟೀಕಾ ಸಚಿವ – ಕೃಷಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ‌ ವ್ಯಂಗ್ಯ

ವಿರಾಜಪೇಟೆ(ಕೊಡಗು): ಎಚ್.ಡಿ.ಕುಮಾರಸ್ವಾಮಿ ಅವರು ಒಬ್ಬ ಜವಾಬ್ದಾರಿಯುತ ಕೇಂದ್ರ ಸಚಿವರಂತೆ ವರ್ತಿಸುತ್ತಿಲ್ಲ, ಕರ್ನಾಟಕದಲ್ಲಿ ಕೇಂದ್ರ ಸರ್ಕಾರದ ವಕ್ತಾರರಾಗಿ ಕೆಲಸ ಮಾಡುತ್ತಿದ್ದಾರೆ‌ ಎಂದು…

21 hours ago

ಕೆಮ್ಮಣ್ಣುಗುಂಡಿ ಸ್ಮಶಾನ ರಸ್ತೆ ಒತ್ತುವರಿ ತೆರವಿಗೆ ಆಗ್ರಹಿಸಿ ನ.25ರಿಂದ ಅನಿರ್ದಿಷ್ಟಾವಧಿ ಧರಣಿ

  ದೊಡ್ಡಬಳ್ಳಾಪುರ: ನಗರದ ವಿವಾದಿತ ಕೆಮ್ಮಣ್ಣುಗುಂಡಿ ಸಾರ್ವಜನಿಕ ಸ್ಮಶಾನದ ರಸ್ತೆಯನ್ನು ಪ್ರಭಾವಿಯೊಬ್ಬರು ಅತಿಕ್ರಮಿಸಿ ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸುವಂತೆ ಹಲವು ವರ್ಷಗಳಿಂದ…

21 hours ago

ಪಡಿತರ ಚೀಟಿದಾರರು ಇ-ಕೆವೈಸಿ ಮಾಡಿಸಲು ನ.30 ಕೊನೆ ದಿನ

ನವೆಂಬರ್ 30 ರೊಳಗೆ ಪಡಿತರ ಚೀಟಿದಾರರು ತಮ್ಮ ಹತ್ತಿರದ ಯಾವುದೇ ನ್ಯಾಯಬೆಲೆ ಅಂಗಡಿ ಅಥವಾ "ಅನ್ನ ಸೇವೆ" ಮೊಬೈಲ್ ಅಪ್ಲಿಕೇಶನ್…

22 hours ago

ಜ.20ರಂದು ಅಂತಿಮ ಮತದಾರರ ಪಟ್ಟಿ ಪ್ರಕಟ: ಜಿಲ್ಲೆಯಲ್ಲಿ 8.04 ಲಕ್ಷ ಮತದಾರರು: ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚು; ಕರಡು ಪಟ್ಟಿ ಡಿ.1ರಂದು ಪ್ರಕಟ

ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಸಂಬಂಧಿಸಿದಂತೆ ವಿವಿಧ ಹಂತಗಳ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ವೇಳಾಪಟ್ಟಿಯ ಪ್ರಕಾರ, ನವೆಂಬರ್ 23, 2026 ರೊಳಗೆ…

24 hours ago

ಇತ್ತೀಚಿನ ದಿನಗಳ ಬಹುದೊಡ್ಡ ಬ್ರೇಕಿಂಗ್ ನ್ಯೂಸ್ ರಸ್ತೆ ಅಪಫಾತಗಳದ್ದು….

ಮತ್ತೆ ನೆನಪಿಸುವೆ....... ಚಾಲನಾ ಕಲೆ ಮತ್ತು ಅಪಘಾತ......... ದಯವಿಟ್ಟು - ಮನಸ್ಸಿಟ್ಟು - ತಾಳ್ಮೆಯಿಂದ ಓದಿ....... ಜೀವ ಅಮೂಲ್ಯ....... ಅಲ್ಲಿ…

1 day ago