ನಗರದ ಹೊರವಲಯದಲ್ಲಿರುವ ಪಾಲನಜೋಗಿಹಳ್ಳಿಯ ಪ್ಲಾಸ್ಟಿಕ್ ಗೋಡೋನಿಗೆ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿದೆ.
ರೋಜಿಪುರ ನಿವಾಸಿ ನವೀನ್ ಎನ್ನುವವರಿಗೆ ಸೇರಿದ ಪ್ಲಾಸ್ಟಿಕ್ ಗೋಡನ್ ಇದಾಗಿದ್ದು, ಗೋಡನ್ ಹಿಂಭಾಗದಲ್ಲಿನ ಜಮೀನಿನಲ್ಲಿದ್ದ ಹುಲ್ಲಿಗೆ ತಗುಲಿದ್ದ ಬೆಂಕಿ, ಗೋಡನ್ ಗೆ ವ್ಯಾಪಿಸಿ ಸುಮಾರು 20 ರಿಂದ 25 ಲಕ್ಷ ರೂ. ಮೌಲ್ಯದ ವಸ್ತುಗಳು ಬೆಂಕಿಗೆ ಭಸ್ಮವಾಗಿದೆ.
ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ದೌಡಾಯಿಸಿ, ಸ್ಥಳೀಯರ ನೆರವಿನೊಂದಿಗೆ ಬೆಂಕಿ ನಂದಿಸಲು ಶ್ರಮಿಸಿ ಬೆಂಕಿ ನಂದಿಸಿದ್ದಾರೆ.
ಸ್ಥಳೀಯರು ಗೋಡನ್ ಒಳಗಿಂದ ಹೊಗೆ ಬರುತ್ತಿರುವುದು ಕಂಡು ಮಾಲೀಕರಿಗೆ ಸುದ್ದಿ ಮುಟ್ಟಿಸಿದ್ದು, ಮಾಲೀಕ ನವೀನ್ ಸ್ಥಳಕ್ಕೆ ಬರುವ ವೇಳೆಗೆ ಬೆಂಕಿಯ ತೀವ್ರವಾಗಿ ವ್ಯಾಪಿಸಿದೆ.
ಘಟನೆಯಲ್ಲಿ ಎರಡು ಸಾವಿರ ಪ್ಲಾಸ್ಟಿಕ್ ಡ್ರಮ್, 1500 ಪ್ಲಾಸ್ಟಿಕ್ ಕ್ರೇಟ್, ಅಕ್ರಾಲಿಕ್ ಶೀಟ್ ಸುಟ್ಟು ಭಸ್ಮ ಆಗಿರುವುದರಿಂದ ಅಂದಾಜು 20-25 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ವಸ್ತುಗಳು ನಷ್ಟವಾಗಿದೆ ಎನ್ನಲಾಗುತ್ತಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಆರು ತಿಂಗಳಷ್ಟೆ ತನ್ನ ಸ್ನೇಹಿತ ಬಳಿ ಅಂಗಡಿಯನ್ನು ಖರೀದಿಸಿ ವ್ಯಾಪಾರ ನಡೆಸುತ್ತಿದ್ದ ನವೀನ್, ನಾಳೆ ಗೋದಾಮಿನಲ್ಲಿದ್ದ ಸ್ಟಾಕ್ ಲೋಡ್ ಮಾಡಿ ಮಾರ್ಕೆಟ್ ಗೆ ತೆಗೆದುಕೊಂಡು ಹೋಗಲು ಸಿದ್ಧತೆ ನಡೆಸಲಾಗಿತ್ತು. ಅಷ್ಟರಲ್ಲಿ ಈ ಘಟನೆ ಸಂಭವಿಸಿದೆ. ಇದರಿಂದ ತೀವ್ರ ನಷ್ಟಕ್ಕೆ ಒಳಗಾಗಿರುವ ಗೋದಾಮಿನ ಮಾಲೀಕ