ದೊಡ್ಡಬಳ್ಳಾಪುರ: ಪ್ರೇಮಿಗಾಗಿ ಇಬ್ಬರು ಯುವಕರ(ಮಾಜಿ ಹಾಗೂ ಹಾಲಿ) ನಡುವೆ ನಗರದ ಶಾಂತಿನಗರ ಭಾರ್ಗವಿ ಬಾರ್‌ನಲ್ಲಿ ಸಿನಿಮೀಯ ರೀತಿಯಲ್ಲಿ ಮಚ್ಚು, ಲಾಂಗ್‌ಳಿಂದ ನಡೆದ ಹಲ್ಲೆ ಪ್ರಕರಣ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ನಗರದ ಸೋಮಶೇಖರ ಮೇಲೆ ನಾಹೀದ್ ಹಲ್ಲೆ ನಡೆಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಹಲವು ದಿನಗಳಿಂದ ಯುವತಿಯೊಬ್ಬಳನ್ನು ಸೋಮಶೇಖರ್ ಪ್ರೀತಿಸುತ್ತಿದ್ದನು. ಬಳಿಕ ಯುವತಿ ಸೋಮಶೇಖರ್ ನನ್ನು ಬಿಟ್ಟು ನಾಹೀದ್ ಎಂಬಾತನ ಜತೆ ಗೆಳೆತನ ಮಾಡಿದ್ದಳು ಎನ್ನಲಾಗಿದೆ. ಇದೇ ವಿಚಾರವಾಗಿ ಸೋಮಶೇಖರ್, ಯುವತಿಯನ್ನು ಪ್ರಶ್ನಿಸಿದಕ್ಕೆ ನಾಹೀದ್ ಗುಂಪು ಕಟ್ಟಿಕೊಂಡು ಲಾಂಗ್‌ನಿಂದ ಹಲ್ಲೆ ನಡೆಸಿದ್ದಾರೆ ಎಂದು ಬಾರ್‌ನಲ್ಲಿದ್ದ ಇತರ ಗ್ರಾಹಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಗುಂಪುಗಳ ನಡುವಿನ ಘರ್ಷಣೆ ಕಂಡು ಜನರು ಬೆಚ್ಚಿ ಬಿದ್ದಿದ್ದು. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನಲ್ಲೇನಿದೆ…
ನಾನು ಎರಡು ವರ್ಷಗಳಿಂದ ಒಬ್ಬ ಯುವತಿಯನ್ನು ಪ್ರೀತಿಸುತ್ತಿದ್ದೆ. ಕಳೆದ ಮೂರು ತಿಂಗಳಿಂದೆ ಆ ಯುವತಿ ನನ್ನ ಬಿಟ್ಟು ನಾಹಿದ್ ನನ್ನು ಪ್ರೀತಿ ಮಾಡೋದಕ್ಕೆ ಶುರು ಮಾಡಿದ್ದಳು. ಕಳೆದ ಒಂದು ತಿಂಗಳಿಂದೆ ಆ ಯುವತಿ ನನಗೆ ಫೋನ್ ಮಾಡಿ ನಿನ್ನ ಮದುವೆಯಾಗಲೂ ಇಷ್ಟ ಇಲ್ಲ ನೀನು ಯಾರನ್ನಾದರೂ ನೋಡಿಕೋ ಎಂದು ಹೇಳಿದ್ದು ನಾನು ಸಹ ಅದಕ್ಕೆ ಒಪ್ಪಿಕೊಂಡು ನನ್ನ ಪಾಡಿಗೆ ನಾನು ಸುಮ್ಮನಾಗಿದ್ದೆ.
ಈಗಿದ್ದಾಗ ಏ.2ರ ಸಂಜೆ 6:30ರಲ್ಲಿ ನಾನು ನನ್ನ ಸ್ನೇಹಿತಿ ಮನೆಗೆ ಹೋಗುವಾಗ ನಾಹಿದ್ ನನ್ನ ಮೇಲೆ ಹಲ್ಲೆ ನಡೆಸಲು ಬಂದಾಗ ಆಗ ನಾನು ಅಲ್ಲೇ ಇದ್ದ ಬಾರ್ ಒಳಗೆ ಹೋದೆ. ಆದರೂ ಅವರು ನನ್ನನ್ನು ಬಿಡದೇ ನಿನಗೆ ನಾನು ಪ್ರೀತಿಸುವ ಹುಡುಗಿನೇ ಬೇಕೆನೋ ಎಂದು ಅವಾಚ್ಯ ಶಬ್ದಗಳಿಂದ ಬೈಯು, ಹಲ್ಲೆ ನಡೆಸಿದ್ದಾರೆ ಎಂದು ಸೋಮಶೇಖರ್ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾನೆ.
ದೊಡ್ಡಬಳ್ಳಾಪುರ: ನಗರದ 4 ನೇ ವಾರ್ಡ್‌ನ ವಿನಾಯಕ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಅಸ್ಟಿಮೊ ಫೈ ಕಂಪನಿಯ…
ಕಾನೂನು ರಕ್ಷಕನೇ ಭಕ್ಷಕನಾದರೆ ಸಾಮಾನ್ಯ ಜನರ ಗತಿ ಏನು? ದೂರು ನೀಡಲು ಬಂದವರನ್ನೇ ಲೈಂಗಿಕವಾಗಿ ಬಳಸಿಕೊಳ್ಳುವ ಕಾಮುಕ ಪೊಲೀಸ್ ಅಧಿಕಾರಿಯೊಬ್ಬನ…
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಅಲಸಹಳ್ಳಿ ಗೇಟ್ ಸಮೀಪದ ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನೊಬ್ಬನ ಶವ…
ಭಾರತ ಸಾಹಿತ್ಯದ ನೊಬೆಲ್ ಎಂದೇ ಹೆಸರಾದ ಜ್ಞಾನಪೀಠ ಪ್ರಶಸ್ತಿ ಸಾಹಿತ್ಯ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ ಮಾತ್ರವಲ್ಲ, ಅದನ್ನು ಪಡೆದ ವ್ಯಕ್ತಿಗಳು…
ಜಿಲ್ಲೆಯಾದ್ಯಂತ ಎಲ್ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ಸಾರ್ವಜನಿಕ ಕುಂದುಕೊರತೆಗಳು ಕಂಡು ಬಂದಲ್ಲಿ ತಾಲ್ಲೂಕಿನ ಆಹಾರ ಶಾಖೆಯ ಆಹಾರ ನಿರೀಕ್ಷಕರನ್ನು ದೂರವಾಣಿ ಮೂಲಕ…
ಕಳೆದ 13 ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿ ಬದುಕುತ್ತಿದ್ದ 32 ವರ್ಷ ವಯಸ್ಸಿನ ಹರೀಶ್ ರಾಣಾ ಅವರಿಗೆ ಕುಟುಂಬಸ್ಥರು ಭಾವುಕ ವಿದಾಯ…