ಪ್ರೇಯಸಿಗಾಗಿ ಹಾಲಿ ಹಾಗೂ ಮಾಜಿ ನಡುವೆ ಕಿತ್ತಾಟ: “ನಾನು ಪ್ರೀತಿಸುವ ಹುಡುಗಿನೇ ಬೇಕೆನೋ” ಎಂದು ಮಾಜಿಗೆ ಥಳಿಸಿದ ಹಾಲಿ ಪ್ರಿಯಕರ: ಹಲ್ಲೆ ದೃಶ್ಯ ಬಾರ್ ಸಿಸಿ ಕ್ಯಾಮೆರದಲ್ಲಿ ಸೆರೆ

ದೊಡ್ಡಬಳ್ಳಾಪುರ: ಪ್ರೇಮಿಗಾಗಿ ಇಬ್ಬರು ಯುವಕರ(ಮಾಜಿ ಹಾಗೂ ಹಾಲಿ) ನಡುವೆ ನಗರದ ಶಾಂತಿನಗರ ಭಾರ್ಗವಿ ಬಾರ್‌ನಲ್ಲಿ ಸಿನಿಮೀಯ ರೀತಿಯಲ್ಲಿ ಮಚ್ಚು, ಲಾಂಗ್‌ಳಿಂದ ನಡೆದ ಹಲ್ಲೆ ಪ್ರಕರಣ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ನಗರದ ಸೋಮಶೇಖರ ಮೇಲೆ ನಾಹೀದ್ ಹಲ್ಲೆ ನಡೆಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಹಲವು ದಿನಗಳಿಂದ ಯುವತಿಯೊಬ್ಬಳನ್ನು ಸೋಮಶೇಖರ್ ಪ್ರೀತಿಸುತ್ತಿದ್ದನು. ಬಳಿಕ ಯುವತಿ ಸೋಮಶೇಖರ್ ನನ್ನು ಬಿಟ್ಟು ನಾಹೀದ್ ಎಂಬಾತನ ಜತೆ ಗೆಳೆತನ ಮಾಡಿದ್ದಳು ಎನ್ನಲಾಗಿದೆ. ಇದೇ ವಿಚಾರವಾಗಿ ಸೋಮಶೇಖರ್, ಯುವತಿಯನ್ನು ಪ್ರಶ್ನಿಸಿದಕ್ಕೆ ನಾಹೀದ್ ಗುಂಪು ಕಟ್ಟಿಕೊಂಡು ಲಾಂಗ್‌ನಿಂದ ಹಲ್ಲೆ ನಡೆಸಿದ್ದಾರೆ ಎಂದು ಬಾರ್‌ನಲ್ಲಿದ್ದ ಇತರ ಗ್ರಾಹಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಗುಂಪುಗಳ ನಡುವಿನ ಘರ್ಷಣೆ ಕಂಡು ಜನರು ಬೆಚ್ಚಿ ಬಿದ್ದಿದ್ದು. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರಿನಲ್ಲೇನಿದೆ…

ನಾನು ಎರಡು ವರ್ಷಗಳಿಂದ ಒಬ್ಬ ಯುವತಿಯನ್ನು ಪ್ರೀತಿಸುತ್ತಿದ್ದೆ. ಕಳೆದ ಮೂರು ತಿಂಗಳಿಂದೆ ಆ ಯುವತಿ ನನ್ನ ಬಿಟ್ಟು ನಾಹಿದ್ ನನ್ನು ಪ್ರೀತಿ ಮಾಡೋದಕ್ಕೆ ಶುರು ಮಾಡಿದ್ದಳು. ಕಳೆದ ಒಂದು ತಿಂಗಳಿಂದೆ ಆ ಯುವತಿ ನನಗೆ ಫೋನ್ ಮಾಡಿ ನಿನ್ನ ಮದುವೆಯಾಗಲೂ ಇಷ್ಟ ಇಲ್ಲ ನೀನು ಯಾರನ್ನಾದರೂ ನೋಡಿಕೋ ಎಂದು ಹೇಳಿದ್ದು ನಾನು ಸಹ ಅದಕ್ಕೆ ಒಪ್ಪಿಕೊಂಡು ನನ್ನ ಪಾಡಿಗೆ ನಾನು ಸುಮ್ಮನಾಗಿದ್ದೆ.

ಈಗಿದ್ದಾಗ ಏ.2ರ ಸಂಜೆ 6:30ರಲ್ಲಿ‌ ನಾನು ನನ್ನ ಸ್ನೇಹಿತಿ ಮನೆಗೆ ಹೋಗುವಾಗ ನಾಹಿದ್ ನನ್ನ ಮೇಲೆ ಹಲ್ಲೆ ನಡೆಸಲು‌ ಬಂದಾಗ ಆಗ ನಾನು ಅಲ್ಲೇ‌ ಇದ್ದ ಬಾರ್ ಒಳಗೆ ಹೋದೆ. ಆದರೂ ಅವರು ನನ್ನನ್ನು ಬಿಡದೇ ನಿನಗೆ ನಾನು ಪ್ರೀತಿಸುವ ಹುಡುಗಿನೇ ಬೇಕೆನೋ ಎಂದು ಅವಾಚ್ಯ ಶಬ್ದಗಳಿಂದ ಬೈಯು, ಹಲ್ಲೆ‌‌ ನಡೆಸಿ‌ದ್ದಾರೆ ಎಂದು ಸೋಮಶೇಖರ್‌‌ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲು‌ ಮಾಡಿದ್ದಾನೆ.

Leave a Reply

Your email address will not be published. Required fields are marked *