ಅವರಿಬ್ಬರು ಪ್ರೀತಿ ಅಮರ, ಮಧುರ, ಪ್ರೇಮ ಎಂದು 6 ವರ್ಷಗಳು ಸುತ್ತಾಡಿದ್ರು. ಆದ್ರೆ, ಮದುವೆ ಎಂಬ ಕೂಗು ಕೇಳುತ್ತಿದಂತೆ ಪೋಷಕರು ಬಿಲ್ ಕುಲ್ ವಿರೋಧ ವ್ಯಕ್ತಪಡಿಸಿದ್ರು, ಇದೆಕ್ಕೆಲ್ಲಾ ತಲೆಕೆಡಿಸಿಕೊಳ್ಳದ ಅಮರ ಪ್ರೇಮಿಗಳು ಪೊಲೀಸರ ಮೊರೆ ಹೋಗಿ ಸಾಂಪ್ರದಾಯದಂತೆ ಮದುವೆ ಆಗಿ ನೂತನ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ…ಇಷ್ಟಕ್ಕೂ ಈ ಮದುವೆ ನಡೆದಿದ್ರು ಆದ್ರು ಎಲ್ಲಿ ಅಂತೀರಾ… ಈ ಸ್ಟೋರಿ ಓದಿ…..
ಹೀಗೆ ಪೊಲೀಸರೇ ತಾಳಿ ಕಟ್ಟಿಸಿ, ಕಾಲುಂಗರ ತೊಡಿಸಿ ನೂತನ ವಧು ವರರಿಗೆ ಆಶೀರ್ವಾದ ನೀಡುತ್ತಿರುವ ಘಟನೆ ಕಂಡು ಬಂದಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದಲ್ಲಿ. ಹೌದು, ಕಳೆದ ಆರು ವರ್ಷಗಳಿಂದ ಶಿಡ್ಲಘಟ್ಟ ತಾಲೂಕಿನ ದೊಡ್ಡದಾಸೇನಹಳ್ಳಿ ಗ್ರಾಮದ ಕಾರ್ತೀಕ್ ಹಾಗೂ ಶಿಡ್ಲಘಟ್ಟ ನಗರದ ಅಂಕಿತಾ ಪ್ರೀತಿ ಪ್ರೇಮ ಎಂದು ಸುತ್ತಾಟ ನಡೆಸಿದ್ರು. ಆದ್ರೆ, ಅಂಕಿತಾಗೆ ಮತ್ತೊಬ್ಬ ಯುವಕನ ಜೊತೆ ಮದುವೆ ಮಾಡಲು ಪೋಷಕರು ತೀರ್ಮಾನಿಸಿದ್ದರು. ಇದೇ ವಿಚಾರವನ್ನು ಪ್ರಿಯಕರ ಕಾರ್ತೀಕ್ ಗೆ ಅಂಕಿತಾ ತಿಳಿಸಿದ್ದಾಳೆ. ಆದ್ರೆ ಕಾರ್ತಿಕ್ ಇನ್ನೂ ಎರಡು ವರ್ಷಗಳ ಕಾಲ ಮದುವೆ ಬೇಡ ಎಂದು ತಿಳಿಸಿದ್ದಾನೆ. ಇದರಿಂದ ಬೇಸರಗೊಂಡ ಅಂಕಿತಾ ಕಳೆದ ದಿನ ಶಿಡ್ಲಘಟ್ಟ ನಗರಠಾಣೆಯ ಮೊರೆ ಹೋಗಿ ದೂರು ದಾಖಲಿಸಿದ್ದಾಳೆ. ಸದ್ಯ ಇಂದು ಶಿಡ್ಲಘಟ್ಟ ಠಾಣೆಯ ಪೊಲೀಸರು ಯುವಕ-ಯುವತಿಯ ಕಡೆ ಪೋಷಕರನ್ನು ಠಾಣೆಗೆ ಕರೆಸಿ ಮದುವೆ ಮಾಡಿಸುವಂತೆ ಒಪ್ಪಿಸಿದ್ದಾರೆ. ಆದರೆ, ಮದುವೆಗೆ ಯುವತಿಯ ತಾಯಿ, ಅಕ್ಕ-ಬಾವ ಒಪ್ಪಿಗೆ ಸೂಚಿಸಿದ್ದು, ತಂದೆ ಹಾಗೂ ಯುವಕನ ಪೋಷಕರು ಬಿಲ್ ಕುಲ್ ಒಪ್ಪದ ಹಿನ್ನೆಲೆ ಪೊಲೀಸರು ಯುವಕ-ಯುವತಿಯ ಹೇಳಿಕೆಯ ಆಧಾರದ ಮೇಲೆ ಪೊಲೀಸ್ ಠಾಣೆ ಮುಂಭಾಗ ಅರಿಶಿನ ಕುಂಕುಮ ಜೊತೆಗೆ ತಾಳಿಯನ್ನು ಕಟ್ಟಿಸಿ ನಂತರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ವೇಣುಗೋಪಾಲ್ ತಂದೆಯ ಸ್ಥಾನದಲ್ಲಿ ನಿಂತು ನವ ವಧುವಿಗೆ ಕಾಲುಂಗರ ತೊಡಿಸಿ ಆಶೀರ್ವಾದ ನೀಡಿ ಎಲ್ಲರ ಗಮನವನ್ನು ಸೆಳೆದಿದ್ದಾರೆ.
ಇನ್ನೂಈ ಜೊಡಿಯ ಆರು ವರ್ಷಗಳ ಪ್ರೀತಿಗೆ ಪೊಲೀಸರಿಂದ ನ್ಯಾಯ ದೊರೆಕಿದ್ದು, ನೂತನ ವೈವಾಹಿಕ ಜೀವನಕ್ಕೆ ಕಾಲಿಟ್ಟ ನವ ಜೋಡಿ ಪೋಷಕರ ವಿರೋಧ ನಡುವೆ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.
ಪೊಲೀಸರು ಹಾರ ತೂರಾಯಿ ಕಾನೂನು ಬದ್ಧವಾಗಿ ಮದುವೆ ಮಾಡಿಸಿಕೊಟ್ಟಿರುವುದು ಎಲ್ಲರ ಗಮನವನ್ನು ಸೆಳೆದಿದೆ.
ಕೋಲಾರ: ಕೆ.ಸಿ.ವ್ಯಾಲಿ ಯೋಜನೆಯಿಂದ ಅಂತರ್ಜಲ ಹೆಚ್ಚಿ ರೈತರ ಬದುಕು ಹಸನಾಗಿದ್ದು, ಜೆಡಿಎಸ್ ಪಕ್ಷ ಸೇರಿದಂತೆ ಕೆಲ ಮುಖಂಡರಿಂದ ದಾರಿ ತಪ್ಪಿಸುವ…
ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು ವತಿಯಿಂದ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರಿಗೆ ನುಡಿನಮನ…
ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಅರುಣ್ ಅವರು ವರ್ಗಾವಣೆಗೊಂಡಿದ್ದು, ಈ ಹಿನ್ನೆಲೆ ಇಂದು ಎಸ್…
ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ. ಪ್ರಹ್ಲಾದ್ ಜೋಶಿ ಕೂಡ ಒಂದೇ ಒಂದು ದಿನ…
ಗೆದ್ದವರಿಗೆ ಅಭಿನಂದಿಸುತ್ತಾ, ಸೋತವರಿಗೆ ಸಾಂತ್ವನ ಹೇಳುತ್ತಾ, ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಸಂವಿಧಾನಕ್ಕೆ ಸಲಾಂ ಹೊಡೆಯುತ್ತಾ, ನಮ್ಮ ಮುಗ್ದತೆ ಮತ್ತು ಮೂರ್ಖತನ…
ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು, ರಾಷ್ಟ್ರೀಯ ಲೋಕ ಅದಾಲತ್ ಮುಖೇನ ರಾಜೀಯಾಗುವ ಪ್ರಕರಣಗಳ ವಿಲೇವಾರಿಗೊಳಿಸುವಂತೆ ಕರ್ನಾಟಕ ರಾಜ್ಯ ಕಾನೂನು…