
ಪ್ರೀತಿಸಿ ಮನೆಯವರ ವಿರೋಧದ ನಡುವೆ ಮನೆ ಬಿಟ್ಟು ಹೋಗಿ ಯುವಕ ಯುವತಿ ಮದುವೆಯಾಗಿದ್ದು…ಇದ್ರಿಂದ ರೊಚ್ಚಿಗೆದ್ದ ಹುಡುಗಿ ಕಡೆಯವರು ಯುವಕನ ಮನೆಗೆ ನುಗ್ಗಿ ಆತನ ತಾಯಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿರೋ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಸಂಗಟಪಲ್ಲಿ ಗ್ರಾಮದಲ್ಲಿ ನಡೆದಿದೆ.
ಸಂಗಟಪಲ್ಲಿ ಗ್ರಾಮದ ಅಂಬರೀಶ್ ಹಾಗೂ ಸಿಂಗಪ್ಪಗಾರಪಲ್ಲಿಯ ಪ್ರತಿಭಾ ಪ್ರೇಮ ವಿವಾಹವಾಗಿದ್ದಾರೆ.
ಇದ್ರಿಂದ ರೋಸಿ ಹೋದ ಪ್ರತಿಭಾ ಪೋಷಕರು ಅಂಬರೀಶ್ ಮನೆಗೆ ನುಗ್ಗಿ ಆಕೆಯ ಬಟ್ಟೆ ಹಾಗೂ ಪುಸ್ತಕಗಳನ್ನ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ.
ಈ ವೇಳೆ ಅಡ್ಡ ಬಂದ ಅಂಬರೀಶ್ ತಾಯಿ ಬಯ್ಯಮ್ಮ ಮೇಲೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.
ಇದ್ರಿಂದ ಗಂಭೀರವಾಗಿ ಗಾಯಗೊಂಡಿರುವ ಬಯ್ಯಮ್ಮಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಇನ್ನೂ ಈ ಸಂಬಂಧ ರಾಧಮ್ಮ, ಅಶ್ವತ್ಥಮ್ಮ, ಪದ್ಮಮ್ಮ, ವೆಂಕಟರಾಮಿರೆಡ್ಡಿ, ವೆಂಕಟರೆಡ್ಡಿ ವಿರುದ್ದ ಪಾತಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.