ಪ್ರೀತಿಸಿ ಮದುವೆಯಾದ ಗಂಡ ಕುಡುಕನಾದ, ಗಂಡನ ಕುಡಿತದ ಚಟಕ್ಕೆ ಬೇಸತ್ತ ಅವಳು ಪರಿಯಸ್ಥನ ಪ್ರೀತಿಯ ಬಲೆಗೆ ಬಿದ್ದು, ದೇವಸ್ಥಾನಕ್ಕೆ ಹೋಗುವುದಾಗಿ ಗಂಡನ ಮನೆಯಿಂದ ಬಂದವಳು ಪ್ರಿಯಕರನ ಜೊತೆ ಒಂದಾಗಿದ್ದಳು. ಗಂಡನ ಮನೆಯಿಂದ ಬಂದು ವಾರವಾಗಿತ್ತು ಅಷ್ಟೇ ಪ್ರಿಯಕರನ ಮನೆಯಲ್ಲಿ ಹೆಣವಾಗಿದ್ದಾಳೆ.
ಮೃತ ಭಾರತಿ ಆಂಧ್ರಪ್ರದೇಶದ ಪುಲ್ಮಿತ್ತಿ ಗ್ರಾಮದವಳು, ಅಕ್ಕನ ಮದುವೆಗೆಂದ್ದು ಬಂದವಳಿಗೆ ಮಧುಗಿರಿ ತಾಲೂಕಿನ ಚಿಕ್ಕದಾಳವಟ ಗ್ರಾಮದ ಹರೀಶ್ ಪರಿಚಯವಾಗಿತ್ತು, ಪ್ರೀತಿಯ ಬಲೆಗೆ ಬಿದ್ದು 15 ವರ್ಷಗಳ ಹಿಂದೆ ಮದುವೆಯಾಗಿದ್ದರು, ಇವರ ದಾಪಂತ್ಯಕ್ಕೆ ಇಬ್ಬರು ಮಕ್ಕಳು ಸಹ ಇದ್ದರು. ಕೈಹಿಡಿದ ಹರೀಶ್ ಕುಡುಕನಾಗಿದ್ದ, ಕುಡುಕ ಗಂಡನಿಂದ ಬೇಸತ್ತಿದ್ದ ಭಾರತಿಗೆ ಅದೇ ಗ್ರಾಮದ ಗಂಗರಾಜ್ ಪರಿಚಯವಾಗಿತ್ತು. ಈ ಗಂಗರಾಜ್ ಕೋಳೂರಿನ ದ್ರಾಕ್ಷಿ ತೋಟದಲ್ಲಿ ಕೆಲಸ ಮಾಡುತ್ತಿದ್ದ, ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿದ ಭಾರತಿ ಮಗಳನ್ನು ಕರೆದುಕೊಂಡು ಬಂದು ಗಂಗರಾಜ್ ಜೊತೆ ವಾಸವಾಗಿದ್ದಳು.
ಮನೆ ಬಿಟ್ಟು ಹೋದ ಹೆಂಡತಿ ಬೆನ್ನತ್ತ ಹರೀಶ್ ಗೆ ಕೋಳೂರು ಗ್ರಾಮದಲ್ಲಿ ಗಂಗರಾಜ್ ಜೊತೆ ಇರುವ ಮಾಹಿತಿ ತಿಳಿಯುತ್ತೆ. ಹೆಂಡತಿಯನ್ನ ಕರೆದುಕೊಂಡು ಹೋಗಲು ಹರೀಶ್ ಕಳೆದ ಮಂಗಳವಾರ ಗಂಗರಾಜ್ ಮನೆಗೆ ಬಂದಿದ್ದಾನೆ, ಮರುದಿನ ಬೆಳಗ್ಗೆ ಕೆಲಸ ನಿಮಿತ್ತ ಗಂಗರಾಜ್ ಸಂಬಂಧಿಕರ ಮನೆಗೆ ಹೋಗಿದ್ದ, ಈ ವೇಳೆ ಭಾರತಿ ಮತ್ತು ಹರೀಶ್ ನಡುವೆ ಜಗಳವಾಗಿದೆ, ಭಾರತಿ ಕತ್ತು ಬಿಗಿದು ಹರೀಶ್ ಆಕೆಯ ಉಸಿರು ನಿಲ್ಲಿಸಿ ಮಗಳನ್ನು ಕರೆದುಕೊಂಡು ಪರಾರಿಯಾಗಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಆರೋಪಿ ಹರೀಶ್ ನನ್ನ ಪೊಲೀಸರು ಬಂಧಿಸಿದ್ದಾರೆ.