ಪ್ರೀತಿಸಿ ಏಳು ತಿಂಗಳ ಗರ್ಭಿಣಿ ಮಾಡಿ ಕೈ ಕೊಟ್ಟ ಪ್ರಿಯತಮ: ಪ್ರೀತಿಸಿದ ಯುವಕನ ಜೊತೆ ವಿವಾಹ ಮಾಡಿಸುವಂತೆ ಪ್ರಿಯತಮೆ ಪರದಾಟ 

ಕಾಲೇಜಿನಲ್ಲಿ ಪ್ರೀತಿ, ಪ್ರೇಮ ಪ್ರಣಯ ಅಂತ ಜಗತ್ತನ್ನೇ ಮರೆತಿದ್ದ ಜೋಡಿಗಳು, ಇಂದು ನಡು ಬೀದಿಯಲ್ಲಿ ಹೊಡೆದಾಡಿಕೊಳ್ಳುತ್ತಿದ್ದಾರೆ. ಪ್ರೀತಿಸಿ ಕೈ ಕೊಟ್ಟ ಯುವಕನನ್ನು ಮದುವೆ ಆಗುವಂತೆ ಗರ್ಭಿಣಿ ಗೋಗರೆಯುತ್ತಿದ್ದಾಳೆ. ಪೋಷಕರ ಮಾತು ನಂಬಿಕೊಂಡು ಪ್ರಿಯತಮೆಗೆ ಕೈ ಕೊಟ್ಟು ಯುವಕ ನಡು ಬೀದಿಯಲ್ಲಿ ಏಟು ತಿಂದಿದ್ದಾನೆ.

 ಹೀಗೆ ವಿವಾಹಕ್ಕೂ ಮುನ್ನವೇ ತುಂಬು ಗರ್ಭಿಣಿಯಾಗಿರುವ ಯುವತಿ, ಯುವತಿ ಸ್ಥಿತಿಗೆ ಕಾರಣವಾದವನ ಜೊತೆ ಯುವತಿ ಬೀದಿಯಲ್ಲಿ ರಂಪಾಟ, ತನ್ನ ಮಗಳ ಸ್ಥಿತಿ ಕಂಡು  ಕಣ್ನೀರಿಡುತ್ತಿರುವ ತಾಯಿ, ಗರ್ಭಿಣಿ ಯುವತಿಯನ್ನು ಸಮಾಧಾನ ಮಾಡುತ್ತಿರುವ ಮಹಿಳೆಯರು ಈ ದೃಶ್ಯಗಳು ಕಂಡುಬಂದಿದ್ದು ಚಿಕ್ಕಬಳ್ಳಾಪುರ ಜಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಮಲ್ಲಸಂದ್ರ ಗ್ರಾಮದಲ್ಲಿ.

ಈ ಗರ್ಭಿಣಿ ಯುವತಿಯ ಹೆಸರು ಗಗನಾ (22) ಮಲ್ಲಸಂದ್ರ ಗ್ರಾಮದ ಯುವತಿ, ಬಾಗೇಪಲ್ಲಿ ನಗರದ ನ್ಯಾಷನಲ್ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತಿದ್ದಾಗ ಅದೇ ಗ್ರಾಮದ ಸೂರ್ಯಪ್ರಕಾಶ್ ಎಂಬ ಯುವಕನ ಜೊತೆಯಲ್ಲಿ ಪ್ರೀತಿ ಆರಂಭವಾಗಿದೆ. ಪ್ರೀತಿ ಹೆಚ್ಚಾದಂತೆ ಯುವತಿಯನ್ನು ಮದುವೆ ಆಗುತ್ತೇನೆ ಎಂದು ನಂಬಿಸಿ ದೈಹಿಕ ಸಂಪರ್ಕ ಮಾಡಿದ್ದಾನೆ.

ಪ್ರಿಯಕರನ ಒತ್ತಾಯದ ಮೇಲೆ ನಾಲ್ಕೈದು ಬಾರಿ ಗರ್ಭಪಾತ ಕೂಡ ಮಾಡಿಸಿಕೊಂಡಿದ್ದಾಳೆ. ನಂತರ ಮತ್ತೊಮ್ಮೆ ಗರ್ಭಿಣಿ ಆದಾಗ ಗರ್ಭಪಾತ ಮಾಡಲು ಮುಂದಾಗಿದ್ದಾನೆ. ಗರ್ಭಪಾತ ಆಗದೆ ಗಗನಾ ಗರ್ಭಿಣಿಯಾಗಿರುವ ವಿಷಯ ಮನೆಯವರಿಗೆ ತಿಳಿದು, ಪ್ರಿಯಕರಿನಿಗೆ ವಿವಾಹವಾಗುವಂತೆ ಕೇಳಿದ್ದಾರೆ. ಆದರೆ, ಗರ್ಭಿಣಿ ಆಗಲು ನಾನು ಕಾರಣ ಅಲ್ಲ ಅಂತ ಪ್ರಿಯತಮೆಗೆ ಶಾಕ್ ಕೊಟ್ಟಿದ್ದಾನೆ.

ಇದಕ್ಕೆ ಕೋಪಗೊಂಡ ಪ್ರಿಯತಮೆ ಬಾಗೇಪಲ್ಲಿ ನಗರದ ನಡುರಸ್ತೆಯಲ್ಲಿ ವಿವಾಹವಾಗುವಂತೆ ರಂಪಾಟ ಮಾಡಿ, ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಲವ್ ಕಂ ಸೆಕ್ಸ್ ದೋಖಾ ಆರೋಪದಡಿ ದೂರು ದಾಖಲಿಸಿದ್ದಳು. ಮೊದಲು ಯುವಕನನ್ನು ಬಂಧಿಸಿದ್ದ ಪೊಲೀಸರು, ರಾಜಿಗೆ ಒಪ್ಪಿದ ಕಾರಣ ಯುವಕನ್ನು ಬಿಡುಗಡೆ ಮಾಡಿದರು. ಪೋಷಕರು ಜಾಮೀನಿಗೆ ಸಹಿ ಹಾಕಿ ಕೇಸ್ ವಾಪಸ್ಸು ತೆಗೆದುಕೊಂಡರೆ ನಿಮ್ಮ ಇಬ್ಬರಿಗೂ ವಿವಾಹ ಮಾಡೊದಾಗಿ ನಂಬಿಸಿದ್ದಾರೆ. ಸುಳ್ಳಿನ ಮಾತುಗಳಿಗೆ ಬೆರಗಾದ ಪ್ರಿಯತಮೆ ಗಗನಾ ಜಾಮೀನು ನೀಡುವಂತೆ ಸಹಿ ಹಾಕಿ ಪೊಲೀಸ್ ಕೇಸ್ ನಿಂದ ಮುಕ್ತಿಗೊಳಿಸಿದ್ದಳು.

ಜಾಮೀನು ಬಂದ ಬಳಿಕ ಯುವಕನ ಪೋಷಕರು ಉಲ್ಟಾ ಹೊಡೆದಿದ್ದು, ಏನ್ ಮಾಡಿಕೊಳ್ತೀಯೋ ಮಾಡಿಕೋ, ಜಪ್ಪಯ್ಯ ಅಂದರೂ ನಿನ್ನ ಜೊತೆ ನನ್ನ ಮಗನ ಮದುವೆ ನಡೆಯಲ್ಲಾ ಎಂದು ಮುಖದ ಮೇಲೆ ಹೊಡೆದಂತೆ ಹೇಳಿದ್ದಾರೆ.

ಪ್ರೀತಿ ಹೆಸರಲ್ಲಿ ಏಳು ತಿಂಗಳ ಗರ್ಭಿಣಿ ಮಾಡಿ ಪ್ರಿಯತಮ ಕೈ ಕೊಟ್ಟಿದ್ದು ಈಗ ಪ್ರಿಯತಮೆ ನ್ಯಾಯಾಲಯದ ಮೆಟ್ಟಿಲೇರಿದ್ದಾಳೆ.

ಒಟ್ಟಾರೆ ಮದುವೆಗೂ ಮುನ್ನ ತುಂಬು ಗರ್ಭಿಣಿಯಾಗಿರುವ ತಮ್ಮ ಮಗಳ ಪರಿಸ್ಥಿತಿ ಕಂಡು ತಂದೆ ತಾಯಿ, ಊರಲ್ಲಿ ತಲೆ ಎತ್ತಿ ತಿರುಗಾಡಲು ಆಗುತ್ತಿಲ್ಲ, ಇತ್ತ ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಕೋರ್ಟ್ ಕಚೇರಿಗೂ ತಿರುಗಾಡಲು ಆಗದ ಪರಿಸ್ಥಿತಿ, ಸದ್ಯ ಒಂದಷ್ಟು ಮಹಿಳೆಯರು ಯುವತಿಯ ಬೆನ್ನಿಗೆ ನಿಂತಿದ್ದು, ಪ್ರೀತಿಸಿ ಗರ್ಭಿಣಿ ಮಾಡಿ ಕೈ ಕೊಟ್ಟ ಯುವಕನ ಜೊತೆ ವಿವಾಹ ಮಾಡಲು ನ್ಯಾಯಕ್ಕಾಗಿ ಹೋರಾಟ ನಡೆಸುತಿದ್ದಾರೆ. ಇನ್ನಾದರೂ ಯುವಕ ಯುವತಿಯನ್ನು ಮದುವೆ ಆಗುತ್ತಾನಾ..? ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *