ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಅಕ್ಕೋಳ ಗ್ರಾಮದ ಹೊರ ವಲಯದಲ್ಲಿ ಪ್ರೀತಿಸಿದ ಹುಡುಗಿಗಾಗಿ ಡಬಲ್ ಮರ್ಡರ್ ಆಗಿದ್ದು, ಇದರಿಂದ ಗ್ರಾಮದ ಜನ ಬೆಚ್ಚಿಬಿದ್ದಿದ್ದಾರೆ.
ಪ್ರೀತಿಸಿದ ಹುಡುಗಿಗಾಗಿ ಹುಡುಗಿಯ ತಾಯಿ ಹಾಗೂ ಸಹೋದರನ ಮರ್ಡರ್ ಆಗಿದೆ.
ಮಂಗಲ್ ನಾಯಕ (45), ಪ್ರಜ್ವಲ್ ನಾಯಕ (18) ಕೊಲೆಯಾದ ದುರ್ದೈವಿಗಳು.
ಕಳೆದ ರಾತ್ರಿ 10 ಗಂಟೆಯ ಸುಮಾರಿಗೆ ಮನೆಗೆ ನುಗ್ಗಿ ಕಬ್ಬಿಣದ ರಾಡ ನಿಂದ ಮನಸ್ಸೋ ಇಚ್ಚೆ ಹೊಡೆದು ಕೊಲೆ ಮಾಡಲಾಗಿದೆ ಎನ್ನಲಾಗಿದೆ.
ಘಟನೆ ನಡೆದ ಕೆಲವೇ ಗಂಟೆಯಲ್ಲಿ ಆರೋಪಿ ರವಿ, ಹಾಗೂ ಮಗಳನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.