ಅವರಿಬ್ಬರು 4 ವರ್ಷ ಪರಸ್ಪರ ಪ್ರೀತಿಸಿದ್ರೂ ಮದುವೆಯಾಗೋಕೆ ಜಾತಿ ಅಡ್ಡ ಬಂದಿತ್ತು…ಕೊನೆಗೆ ಪ್ರಿಯತಮೆ ತಾನಾಯ್ತು ತನ್ನ ಪಾಡಾಯ್ತು ಅಂತ ಮನೆಯವರು ತೋರಿಸಿದ ಯುವಕನನ್ನ ವರಿಸಿ ಗಂಡನ ಜೊತೆ ಸುಖ ಸಂಸಾರದ ಕನಸು ಕಂಡಿದ್ದಳು..
ಆದ್ರೆ, ಮದುವೆಯಾಗಿ 20 ದಿನ ಕಳೆಯೋದ್ರೋಳಗೆ ವಿಲನ್ ಆಗಿರೋ ಆಕೆಯ ಪ್ರಿಯಕರ ಅವರಿಬ್ಬರ ಖಾಸಗಿ ವಿಡಿಯೋಗಳನ್ನ ಗಂಡನಿಗೆ ಕಳುಹಿಸಿದ್ದಾನೆ.
ಇದ್ರಿಂದ ಕೆರಳಿ ಕೆಂಡವಾದ ಆಕೆಯ ಗಂಡ ಕಟ್ಟಿದ್ದ ತಾಳಿ ಕಿತ್ತುಕೊಂಡು ಮನೆಯಿಂದ ಹೊರಹಾಕಿದ್ದಾನೆ. ಹೀಗಾಗಿ ನೊಂದ ಯುವತಿ ಸೀದಾ ಇದಕ್ಕೆಲ್ಲಾ ಪ್ರಿಯಕರನೇ ಕಾರಣ ಅಂತ ಆತನ ಮನೆಯ ಎದುರು ಧರಣಿ ನಡೆಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಪಲಿಚೆರ್ಲು ಗ್ರಾಮದಲ್ಲಿ ನಡೆದಿದೆ.
ಘಟನೆಯ ವಿವರ..!
ಪಲಿಚೆರ್ಲು ಗ್ರಾಮದ ಅಂಬರೀಶ್ ಮತ್ತು ಕೆಂಪನಹಳ್ಳಿ ಗ್ರಾಮದ ಪ್ರೇಮ ಎಂಬುವವರು ಬೇರೆ ಬೇರೆ ಜಾತಿ ಬೇರೆಯಾಗಿದ್ರೂ, 4 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು..ಇಬ್ಬರು ಜೊತೆ ಜೊತೆಯಾಗಿ ಫೋಟೋ ವಿಡಿಯೋಗಳನ್ನ ಮಾಡಿಕೊಂಡಿದ್ದರಂತೆ….ಆದ್ರೆ ಈ ವಿಚಾರ ಯುವತಿ ಮನೆಯಲ್ಲಿ ಗೊತ್ತಾಗಿ ಯುವತಿಗೆ ಬೇರೆ ಯುವಕನ ಜೊತೆ ಮದುವೆ ನಿಶ್ಚಯ ಮಾಡಿದ್ದಾರೆ. ಈ ವೇಳೆ ಪ್ರಿಯಕರ ಸಹ ಬೇರೆ ಬೇರೆ ಜಾತಿ ಇದ್ರಿಂದ ಸಮಸ್ಯೆ ಯಾಕೆ..? ನೀನು ಮನೆಯವರನ್ನ ನೋಡಿದವರನ್ನ ಮದುವೆಯಾಗುವಂತೆ ಹೇಳಿದ್ದನಂತೆ…ಹೀಗಾಗಿ ಪ್ರೇಮಾ ಬೇರೆ ಯುವಕನನ್ನ ಮದುವೆ ಮಾಡಿಕೊಂಡು ಗಂಡನ ಮನೆಯಲ್ಲಿ ಆರಾಮಾಗಿದ್ಲು..
ಆದ್ರೆ ಅಷ್ಟರಲ್ಲೇ ಪ್ರಿಯಕರ ಅಂಬರೀಶ್ ಇತರರು ಸೇರಿ ಹಳೆಯ ಪೋಟೊ ವಿಡಿಯೊಗಳನ್ನ ಗಂಡನಿಗೆ ಕಳುಹಿಸಿದ್ದಾರಂತೆ. ಇದ್ರಿಂದ ಗಂಡ ಆಕೆಯನ್ನ ಮನೆಯಿಂದ ಹೊರಹಾಕಿದ್ದಾನೆ. ಹೀಗಾಗಿ ನೊಂದ ಯುವತಿ ಪ್ರಿಯಕರ ಅಂಬರೀಶ್ ಮನೆ ಎದುರು ಧರಣಿ ನಡೆಸಿ ನ್ಯಾಯಕ್ಕಾಗಿ ಹೋರಾಟ ನಡೆಸಿದ್ದಾಳೆ. ಅಂಬರೀಶ್ ಮನೆ ಬಿಟ್ಟು ಪರಾರಿಯಾಗಿದ್ದಾನೆ. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.
ಬೆಂಗಳೂರು: ಮಹರ್ಷಿ ವಾಲ್ಮೀಕಿ ಜಯಂತಿಯ ಸಾರ್ವತ್ರಿಕ ರಜೆ ದಿನಾಂಕವನ್ನು ಬದಲಾಯಿಸಿ ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಹಿಂದೆ…
ದಿನದಿಂದ ದಿನಕ್ಕೆ ನೇಕಾರಿಕೆ ಮಾಡುವುದು ಕಷ್ಟವಾಗುತ್ತಿದೆ. ಸೀರೆ ಉತ್ಪಾದನೆಯಲ್ಲಿ ಬಳಸುವ ಕಚ್ಚ ಸಾಮಗ್ರಿಗಳ ಬೆಲೆ ಗಗನಕ್ಕೆರುತ್ತಿದೆ ಕೂಡಲೇ ಸರ್ಕಾರ ಮಧ್ಯೆ…
ದೊಡ್ಡಬಳ್ಳಾಪುರ: ಕುಡಿದ ಮತ್ತಿನಲ್ಲಿ ಪರಸ್ಪರ ಜಗಳವಾಡುತ್ತಿದ್ದವರನ್ನು ಬಿಡಿಸಲು ತೆರಳಿದ್ದ 112 ತುರ್ತು ಸೇವೆಯ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಆರೋಪ…
ದೊಡ್ಡಬಳ್ಳಾಪುರ: ನಗರದ ಡಾ. ಬಿ.ಆರ್. ಅಂಬೇಡ್ಕರ್ (ಟಿಬಿ) ವೃತ್ತದಲ್ಲಿ ಮ್ಯಾನ್‌ಹೋಲ್ ತುಂಬಿ ತುಳುಕುತ್ತಿದ್ದು, ಕೊಳಚೆ ನೀರು ಹೆದ್ದಾರಿಗೆ ಹರಿದು ವಾಹನ…
ದೊಡ್ಡಬಳ್ಳಾಪುರ: ನಗರದ ಉಪವಿಭಾಗಾಧಿಕಾರಿ (ಎಸಿ) ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಲೋಕಾಯುಕ್ತ…
ಜಗತ್ತು ದಿನದಿಂದ ದಿನಕ್ಕೆ ವೇಗವಾಗಿ ಬದಲಾಗುತ್ತಿದ್ದು, ಹೆಚ್ಚುತ್ತಿರುವ ಸ್ಪರ್ಧೆಯನ್ನು ಎದುರಿಸುವ ಸಾಮರ್ಥ್ಯವನ್ನು ಮಕ್ಕಳಲ್ಲಿ ಬೆಳೆಸಲು ಪೋಷಕರು ಹಾಗೂ ಶಿಕ್ಷಕರು ಒಟ್ಟಾಗಿ…