ಪ್ರಾಣ ಬಿಡುತ್ತೇವೆ ಹೊರೆತು ಭೂಮಿ ಬಿಡಲ್ಲ- ಗೊಲ್ಲಹಳ್ಳಿ ಜನ ಎಚ್ಚರಿಕೆ

ದಲಿತ ನಾಯಕರಾದವರೇ ಇಂದು ನಮಗೆ (ಲಂಬಾಣಿ ಜನಕ್ಕೆ) ಅನ್ಯಾಯ ಮಾಡಲು ಹೊರಟಿದ್ದಾರೆ. ನಮ್ಮ ಅಭಿವೃದ್ಧಿಗಾಗಿ ನಾವು ಆಯ್ಕೆ ಮಾಡಿ ಕಳಿಸಿದವರೇ ನಮ್ಮ ಹೊಟ್ಟೆ ಮೇಲೆ ಹೊಡೆಯಲು ಪ್ಲಾನ್ ಮಾಡಿದ್ದಾರೆ. ಒಂದು ಜನಾಂಗದವರನ್ನು ಮೆಚ್ಚಿಸಲು ಮತ್ತೊಂದು ಜನಾಂಗದವರನ್ನು ಸಮಾಧಿ ಮಾಡಲು ಹೊರಟಿದ್ದಾರೆ ಎಂದು ದೊಡ್ಡಬಳ್ಳಾಪುರ ತಾಲೂಕಿನ ಗೊಲ್ಲಹಳ್ಳಿಯ ಶಿವಲಿಂಗಪುರ ಜನ ಆರೋಪಿಸಿ ಆಕ್ರೋಶವ್ಯಕ್ತಪಡಿಸಿದ್ದಾರೆ….

ದೊಡ್ಡಬಳ್ಳಾಪುರ ತಾಲೂಕಿನ ಗೊಲ್ಲಹಳ್ಳಿಯ ಶಿವಲಿಂಗಪುರದಲ್ಲಿ ಬಚ್ಚಹಳ್ಳಿ ಗ್ರಾಮದ ಸರ್ವೇ ನಂಬರ್ 10 ರಲ್ಲಿ ಸುಮಾರು 50-60 ವರ್ಷಗಳಿಂದ ಸ್ವಾಧೀನದಲ್ಲಿದ್ದೇವೆ. ಇದೀಗ ನಮ್ಮಿಂದ ಈ ಜಮೀನನ್ನು ಕಿತ್ತುಕೊಳ್ಳುವ ಹುನ್ನಾರ ನಡೀತಿದೆ. ಇದು ಸರ್ಕಾರಿ ಗೋಮಾಳ ಕೂಡಲೇ ತೆರವು ಮಾಡಬೇಕು ಎಂದು ಕಂದಾಯ ಇಲಾಖಾ ಅಧಿಕಾರಿಗಳು ಹೇಳುತ್ತಿದ್ದಾರೆ. ದಲಿತರ ಬೊಗಸೆಯಷ್ಟು ಜಾಗ ಕಿತ್ತುಕೊಂಡು ಬದುಕು ನಾಶ ಮಾಡಲು ಹೊರಟಿದ್ದಾರೆ. ನಾವು ಹತ್ತಾರು ಎಕರೆ ಜಗದಲ್ಲಿ ಇಲ್ಲ. ಒಂದು ಗುಂಟೆ ಎರಡು ಗುಂಟೆ ಜಾಗದಲ್ಲಿ ಹಸುಗಳನ್ನು ಕಟ್ಟಿಕೊಂಡು ಅವುಗಳಿಗೆ ಹುಲ್ಲಿನ ಬಣವೆ ಹಾಕಿಕೊಂಡು, ತಿಪ್ಪೆ ಮಾಡಿಕೊಂಡಿದ್ದೇವೆ, ಇದೇ ಜಾಗದಲ್ಲಿ ಸುಮಾರು ವರ್ಷಗಳಿಂದ ವಾಸ ಕೂಡ ಮಾಡ್ತಿದ್ದೇವೆ. ಅಧಿಕಾರಿಗಳು ಈಗ ಈ ಜಾಗವನ್ನು ನಮ್ಮಿಂದ ಕಿತ್ತುಕೊಳ್ಳುವ ನಿರ್ಧಾರ ಮಾಡಿದ್ದಾರೆ. ನಮಗೆ ಈ ಜಾಗ ಬಿಟ್ಟರೆ ಬೇರೆಲ್ಲೂ ಒಂದು ಇಂಚು ಜಾಗ ಇಲ್ಲ ಎಂದು ಹೇಳಿದ್ದಾರೆ..

ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಮೆತ್ತುತ್ತಿದ್ದಾರೆ. ಈ ರೀತಿ ಅನ್ಯಾಯ ಮಾಡಬಾರದು. ಒಂದು ಸಮುದಾಯದವರನ್ನು ಸಮಾಧಿ ಮಾಡಿ ಆ ಸಮಾಧಿ ಮೇಲೆ ಬೇರೊಂದು ಸಮುದಾಯದ ಭವನ ನಿರ್ಮಿಸೋದು ಎಷ್ಟು ಸರಿ. ಉಳ್ಳವರಿಗೆ ಒಂದು ನ್ಯಾಯ ಇಲ್ಲದವರಿಗೆ ಇನ್ನೊಂದು ನ್ಯಾಯ. ಉಳ್ಳವರು ಲಕ್ಷ ಲಕ್ಷ ಹಣ ಕೊಟ್ಟು ಜಮೀನುಗಳನ್ನು ಉಳಿಸಿಕೊಳ್ಳುತ್ತಾರೆ. ಅಧಿಕಾರಿಗಳಿಗೆ ಅಂತವರಿಗೆ ಏನು ಬೇಕಾದರೂ ಮಾಡಿ ಕೊಡುತ್ತಾರೆ. ನಾವು ಎಲ್ಲಿಂದ ಹಣ ತರೋದು, ಕೂಲಿ ಮಾಡೋದು ಜೀವನ ಸಾಗಿಸಲು ಸಾಸಲ್ಲ. ಹೊಟ್ಟೆ ಬಟ್ಟೆ  ಕಟ್ಟಿ ನಾಲ್ಕು ಕಾಸು ಉಳಿಸಿ ಇಷ್ಟು ಮನೆ ಕಟ್ಟಿಕೊಂಡು, ಒಂದೆರಡು ಹಸು ಸಾಕಿಕೊಂಡು ಕೂಲಿ ನಾಲಿ ಮಾಡುತ್ತಾ ಬದುಕು ಸಾಗಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಹಣ, ಅಧಿಕಾರ ಇರುವವರ ಜಮೀನುಗಳನ್ನು ಬಿಟ್ಟು ನಮ್ಮಂಥ ತಲೆ ಮೇಲೆ ಬಟ್ಟೆ ಇಲ್ಲದವರ ಜಮೀನುಗಳನ್ನು ಬಲವಂತವಾಗಿ ಕಿತ್ತುಕೊಳ್ಳುತ್ತಿದ್ದಾರೆ. ಈ ಜಮೀನು ಕಿತ್ತುಕೊಂಡರೆ ನಾವು ಖಂಡಿತ ಬದುಕುವುದಿಲ್ಲ. ಅಧಿಕಾರಿಗಳ ಮುಂದೆಯೇ ಪ್ರಾಣ ಕಳೆದುಕೊಳ್ಳುತ್ತೇವೆ. ನಮ್ಮ ಬದುಕೇ ಕಿತ್ತುಕೊಂಡಮೇಲೆ ನಾವು ಏಕೆ ಬದುಕಿರಬೇಕು. ಈ ಜಾಗ ಹೊರತುಪಡಿಸಿ ಬೇರೆ ಕಡೆ ಸಾಕಷ್ಟು ಜಮೀನು ಇವೆ. ಅಲ್ಲೆಲ್ಲ ಬಿಟ್ಟು ಪರಿಶಿಷ್ಟ ಜಾತಿಯ ಲಂಬಾಣಿ ಸಮುದಾಯಕ್ಕೆ ಸೇರಿರುವ ನಮ್ಮ ಜಮೀನು ಮೇಲೆ ಕಣ್ಣು ಹಾಕಿದ್ದಾರೆ.  ಹಣ ಇರುವವರು ಲಕ್ಷ ಲಕ್ಷ ಕೊಟ್ಟು 2 ಎಕರೆ, 5 ಎಕರೆ, 10 ಎಕರೆ ಜಮೀನು ಮಾಡಿಕೊಳ್ಳುತ್ತಾರೆ. ನಮ್ಮ ಅತ್ರ ಹಣ ಇಲ್ಲ ಕೂಲಿ ಮಾಡಿ ಜೀವನ ಮಾಡೋರು ನಾವೆಲ್ಲಿ ಹಣ ಕೊಟ್ಟು ಜಮೀನು ಮಾಡಿಕೊಳ್ಳಲು ಆಗುತ್ತೆ ಎಂದು ಪ್ರಶ್ನೆ ಮಾಡಿದ್ದಾರೆ.

ನಾವು ಗುಡಿಸಲಿನಲ್ಲಿ ವಾಸ ಮಾಡಿಕೊಂಡು ಬಂದವರು. 2-3 ಬಾರಿ ಗುಡಿಸಲಿಗೆ ಬೆಂಕಿ ಕೂಡ ಬಿದ್ದಿತ್ತು. ನಾವು ತಾಲ್ಲೂಕು ಕಚೇರಿಯಿಂದ ಪಡೆದಿದ್ದ ಸಾಗುವಳಿ ಚೀಟಿ ದಾಖಲೆಗಳು ಸುಟ್ಟುಹೋಗಿವೆ. ನಾವು ಓದು ಬರಹ ಕಲಿತವರಲ್ಲ. ನಮಗೆ ಏನು ಮಾಡಬೇಕೆಂದು ತಿಳಿದಿಲ್ಲ. ಈಗ ನೋಡಿದ್ರೆ ನಮಗೆ ತಿಳಿಸದೇ ಬೇರೆಯವರಿಗೆ ನೀಡಲು ಹೊರಟಿದ್ದಾರೆ. ಈ ಜಮೀನು ಕಿತ್ತುಕೊಂಡರೆ ನಾವೆಲ್ಲಿ ಹೋಗಬೇಕು?  ಒಬ್ಬೊಬ್ಬರಿಗೆ 3 ಜನ, 6 ಜನ ಮಕ್ಕಳಿದ್ದಾರೆ. 100 ಕುಟುಂಬ ಇವೆ ಅವರು ಹೇಗೆ ಬದುಕುತ್ತಾರೆ. ಇಲ್ಲಿ ಬಿಟ್ಟು ಕಾಡಿಗೆ ಹೋಗೋಣ ಅಂದ್ರೆ ಅಲ್ಲೂ ಅವಕಾಶ ಇಲ್ಲ. ಇಲ್ಲಿನ ಶಾಸಕರು ಪ್ರಭಾವ ಬಳಸಿ ಲಂಬಾಣಿ ಜನಾಂಗದ ಜಾಗವನ್ನು ಕಿತ್ತುಕೊಂಡು ಬೇರೊಂದು ಜನಾಂಗಕ್ಕೆ ಕೊಡಲು ಹೊರಟಿದ್ದಾರೆ ಎಂದು ಕಿಡಿಕಾರಿದ್ದಾರೆ…

ಈಗೇನಾದರೂ ನಮ್ಮ ಜಮೀನುಗಳನ್ನು ಬಲವಂತವಾಗಿ ಕಿತ್ತುಕೊಂಡರೆ ನಾವು ಪ್ರಾಣ ಬಿಡುತ್ತೇವೆ ಹೊರೆತು ಜಾಗ ಬಿಡಲ್ಲ. ಚುನಾವಣೆ ಬಹಿಷ್ಕಾಂರ ಹಾಕ್ತೇವೆ, ರಸ್ತೆ ತಡೆದು ಪ್ರತಿಭಟನೆ ಮಾಡ್ತೀವಿ. ನಮಗೆ ನ್ಯಾಯ ಕೊಡಿ ನಮ್ಮ ಜಮೀನು ನಮಗೆ ಉಳಿಸಿ ಕೊಡಿ  ನಿಮಗೆ ಕೈ ಮುಗಿದು ಕೇಳಿಕೊಳ್ಳುವುದರ ಜೊತೆಗೆ ಎಚ್ಚರಿಕೆ ನೀಡಿದ್ದಾರೆ.

Ramesh Babu

Journalist

Recent Posts

ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ: ಯುವಕ ಸಾವು, ಮತ್ತೋರ್ವನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ತಾಲ್ಲೂಕಿನ ಹುಲಿಕುಂಟೆ ಟೋಲ್ ಸಮೀಪದ ಚಿಕ್ಕಲಯ್ಯನಪಾಳ್ಯ ಬಳಿ ನಿಂತಿದ್ದ ಲಾರಿಗೆ ಬೈಕ್ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಓರ್ವ…

18 hours ago

ಪೊಲೀಸ್: ಕಾನೂನು ಸುವ್ಯವಸ್ಥೆಯನ್ನು ಸರಿಯಾದ ದಿಕ್ಕಿನಲ್ಲಿ ನಿಯಂತ್ರಿಸದಿದ್ದರೆ……

ದೇಶ ಮತ್ತು ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಸರಿಯಾದ ದಿಕ್ಕಿನಲ್ಲಿ ನಿಯಂತ್ರಿಸದಿದ್ದರೆ ಕೆಲವೇ ವರ್ಷಗಳಲ್ಲಿ ದೇಶದ ಆಂತರಿಕ ವ್ಯವಸ್ಥೆ ಕುಸಿಯುವುದು. ನಿಶ್ಚಿತ…

20 hours ago

ಕಸ್ತೂರಿ ರಂಗನ್ ವರದಿ; ‘ರೈತರ ಬದುಕು ಉಳಿಸಲು ನಮ್ಮ ಸರ್ಕಾರ ಕೆಲಸ ಮಾಡಲಿದೆ’- ಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆ

ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ಇಂದು ನಡೆದ ಕಸ್ತೂರಿ ರಂಗನ್ ವರದಿ ಕುರಿತ ಸಾರ್ವಜನಿಕ ಸಭೆಯಲ್ಲಿ  ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು…

1 day ago

ಜಿಲ್ಲಾಸ್ಪತ್ರೆಯ ಅವ್ಯವಸ್ಥೆ ಸರಿಪಡಿಸಲು ರೈತ ಸಂಘ ಆಗ್ರಹ

ಕೋಲಾರ : ನಗರದ ಶ್ರೀ ನರಸಿಂಹರಾಜ ಜಿಲ್ಲಾ ಆಸ್ಪತ್ರೆಯಲ್ಲಿ ಬಡ ರೋಗಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವುದು, ಖಾಸಗಿ…

1 day ago

ಶಿಷ್ಟಾಚಾರ ವಿವಾದಕ್ಕೆ ಮತ್ತಷ್ಟು ಕಾವು: ಶಾಸಕರಿಗೆ ಕಾನೂನು, ಶಿಷ್ಟಾಚಾರದ ಅರಿವಿಲ್ಲ- ಶಾಸಕ ಧೀರಜ್ ಮುನಿರಾಜ್ ವಿರುದ್ಧ ಮಾಜಿ ಶಾಸಕ ವೆಂಕಟರಮಣಯ್ಯ ವಾಗ್ದಾಳಿ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಕ್ಷೇತ್ರದ ಹಾಲಿ ಶಾಸಕ ಧೀರಜ್ ಮುನಿರಾಜು ಹಾಗೂ ಮಾಜಿ ಶಾಸಕ, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ (ಡಿಪಿಎ) ಅಧ್ಯಕ್ಷ…

1 day ago

ಕುಡಿಯುವ ನೀರು, ಮೇವಿಗೆ ಮುಂಜಾಗ್ರತೆ ವಹಿಸಿ: ನಿಗದಿತ ಅವಧಿಯೊಳಗೆ ಬಡವರಿಗೆ ಸೂರು, ಸೈಟ್ ವಿತರಿಸಲು ಸಿದ್ಧತೆ ಮಾಡಿಕೊಳ್ಳಿ- ಸಚಿವ ಕೆ.ಎಚ್ ಮುನಿಯಪ್ಪ

ಎಲ್ಲಾ ವರ್ಗದ ಬಡವರಿಗೆ ಸೂರು, ಸೈಟ್ ನೀಡುವುದು ನಮ್ಮ ಸರ್ಕಾರದ ಗುರಿಯಾಗಿದ್ದು ದೇವನಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ಅರ್ಹ ಫಲಾನುಭವಿಗಳಿಗೆ ನಿವೇಶನ,…

1 day ago