ಚಂದ್ರಯಾನ-3 ಕಾರ್ಯಾಚರಣೆ ಯಶಸ್ವಿಯಾದ ಬೆನ್ನಲ್ಲಿ ಗ್ರೀಸ್ ದೇಶದಿಂದ ನೇರವಾಗಿ ಇಂದು ಮುಂಜಾನೆ ರಾಜಧಾನಿ ಬೆಂಗಳೂರಿಗೆ ಬಂದಿಳಿದ ಪ್ರಧಾನಿ ಮೋದಿ. ಬೆಳಿಗ್ಗೆ 7 ಗಂಟೆ ವೇಳೆಗೆ ಇಸ್ರೋ ಕೇಂದ್ರಕ್ಕೆ ತೆರಳಲಿರುವ ಪ್ರಧಾನಿ ಮೋದಿ .
ಹೆಚ್ ಎಎಲ್ ನಿಂದ ನೇರವಾಗಿ ಇಸ್ರೋ ಕಚೇರಿಗೆ ಪಯಣ ಬೆಳಿಸಿ ಅಲ್ಲಿನ ವಿಜ್ಞಾನಿಗಳನ್ನು ಅಭಿನಂದಿಸಿ, ಸಂವಾದ ನಡೆಸಲಿದ್ದಾರೆ.
ಸದ್ಯ ಅಧಿಕೃತವಾಗಿ ಪ್ರಧಾನಿ ಮೋದಿ ಅವರ ರೋಡ್ ಶೋ ಇರಲ್ಲ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ದಯಾನಂದ್ ಸ್ಪಷ್ಟನೆ ನೀಡಿದ್ದಾರೆ.
ಮೋದಿ ಆಗಮನ ಹಿನ್ನೆಲೆ ಇಂದು ಮಧ್ಯರಾತ್ರಿ 2 ಗಂಟೆಯಿಂದಲೇ ನಗರದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಎಚ್ಎಎಲ್‌ನಿಂದ ಪೀಣ್ಯದ ಇಸ್ರೋ ಕಚೇರಿವರೆಗೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.
ಹೆಚ್ ಎ ಎಲ್ ವಿಮಾನ ನಿಲ್ದಾಣ ಬಳಿ ಜಮಾಯಿಸಿರೋ ಬಿಜೆಪಿ ಕಾರ್ಯಕರ್ತರು.