ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ವಾರ್ಷಿಕ ರೂ.6,000/- ಗಳ ಆರ್ಥಿಕ ನೆರವನ್ನು ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಮೂಲಕ ನೀಡಲಾಗುತ್ತಿದೆ. ಸದರಿ ಅನುದಾನವನ್ನು ರೂ.2,000/- ಗಳಂತೆ 3 ಕಂತುಗಳಲ್ಲಿ 4 ತಿಂಗಳಿಗೊಮ್ಮೆ ನೀಡಲಾಗುತ್ತಿದೆ.
ರಾಜ್ಯ ಸರ್ಕಾರವು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಯೋಜನೆಯ ರೈತ ಕುಟುಂಬಗಳಿಗೆ ಹೆಚ್ಚುವರಿಯಾಗಿ 2 ಕಂತುಗಳಲ್ಲಿ ವರ್ಷಕ್ಕೆ ರೂ.4.000/- ಗಳ ಆರ್ಥಿಕ ನೆರವನ್ನು ನೇರ ನಗದು ವರ್ಗಾವಣೆ ಮೂಲಕ ನೀಡಲಾಗುತ್ತಿದೆ.
ಕೇಂದ್ರ ಸರ್ಕಾರದ ಈ ಯೋಜನೆಯ ಆರ್ಥಿಕ ನೆರವು ಪಡೆಯಲು ರೈತ ಫಲಾನುಭವಿಗಳು ಇ-ಕೆವೈಸಿ(E KYC) ಮಾಡುವುದು ಕಡ್ಡಾಯವಾಗಿರುತ್ತದೆ,
ಜಿಲ್ಲೆಯಲ್ಲಿ ಈವರೆಗೆ ಶೇ.71 ರಷ್ಟು (ದೇವನಹಳ್ಳಿ ಶೇ.72 ದೊಡ್ಡಬಳ್ಳಾಪುರ ಶೇ.76, ಹೊಸಕೋಟೆ ಶೇ.69, ನೆಲಮಂಗಲ ಶೇ.64) ರೈತರು E KYC ಮಾಡಿಸಿದ್ದು, ಇನ್ನೂ 22,971 ಫಲಾನುಭವಿ ರೈತರು (ಶೇ.29ರಷ್ಟು – ದೇವನಹಳ್ಳಿ ಶೇ.28, ದೊಡ್ಡಬಳ್ಳಾಪುರ ಶೇ.24. ಹೊಸಕೋಟೆ ಶೇ.31 ನೆಲಮಂಗಲ ಶೇ.36) ಬಾಕಿ ಇರುತ್ತಾರೆ.
E KYC ಯನ್ನು ಈ ಕೆಳಕಂಡಂತೆ ಕೈಗೊಳ್ಳಬಹುದಾಗಿರುತ್ತದೆ.
1) ಓ.ಟಿ.ಪಿ ಆಧಾರಿತ E KYC – ಆಧಾರ್ ಕಾರ್ಡಿಗೆ ಮೊಬೈಲ್ ಸಂಖ್ಯೆ ಜೋಡಣೆಯಾಗಿರುವ ಫಲಾನುಭವಿಗಳು ಸ್ವತಃ ತಾವೇ ಅಥವಾ ಇತರರ ಸಹಾಯ ಪಡೆದ http://exlink/pmkisan.gov.in/aadharekyc.aspx 0 ಆಧಾರ್ ಸಂಖ್ಯೆ ಮತ್ತು ಓಟಿಪಿಯನ್ನು ನಮೂದಿಸಿ E KYC ಮಾಡಿಕೊಳ್ಳಬಹುದು.
2) ಬಯೋಮೆಟ್ರಿಕ್ ಆಧಾರಿತ E KYC – ಕಾರ್ಡಿಗೆ ಮೊಬೈಲ್ ಸಂಖ್ಯೆ ಜೋಡಣೆಯಾಗದಿರುವ ಫಲಾನುಭವಿಗಳು ಗ್ರಾಮ ಬಸ್ ಕೇಂದ್ರ, ಸಿಎಸ್‌ಸಿ ಕೇಂದ್ರದ ಮೂಲಕ ತಮ್ಮ ಹೆಬ್ಬೆಟ್ಟಿನ ಗುರುತಿನ ಆಧಾರದ ಮೇಲೆ E KYC ಮಾಡಿಸಿಕೊಳ್ಳಬಹುದು.
3) PMKISAN FACE RECOGNITION APP E KYC – ಮೇಲಿನ ಎರಡೂ ಪ್ರಕಾರಗಳಲ್ಲಿ E KYC ಮಾಡಿಸಿಕೊಳ್ಳಲು ಆಗದ ಫಲಾನುಭವಿಗಳು PMKISAN FACE RECOGNITION APP ಮೂಲಕ ತಮ್ಮ ಕಣ್ಣಿನ ಗುಡ್ಡೆಯ ಗುರುತಿನ ಆಧಾರದ ಮೇಲೆ ಸ್ವತ: E KYC ಮಾಡಿಕೊಳ್ಳಬಹುದು ಮತ್ತು ಇತರೇ 10 ಜನ ರೈತರ E KYC ಮಾಡಿಕೊಡಬಹುದು.
14ನೇ ಕಂತಿನ ಆರ್ಥಿಕ ನೆರವು ವರ್ಗಾವಣೆಗಾಗಿ ಎಲ್ಲಾ ಫಲಾನುಭವಿಗಳು ಈ ಮೇಲಿನಂತೆ *ಜೂನ್ 30* ರೊಳಗೆ ಹತ್ತಿರದ ರೈತ ಸಂಪರ್ಕ ಕೇಂದ್ರ / ತೋಟಗಾರಿಕೆ ಇಲಾಖೆ / ಕಂದಾಯ ಇಲಾಖೆ / ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಅಧಿಕಾರಿ / ಸಿಬ್ಬಂದಿಗಳನ್ನು ಹಾಗೂ ನಾಗರೀಕ ಸೇವಾ ಕೇಂದ್ರ ಮತ್ತು ಗ್ರಾಮ ಓನ್ ಕೇಂದ್ರಗಳನ್ನು ಸಂಪರ್ಕಿಸಿ, ಕಡ್ಡಾಯವಾಗಿ E KYC ಮಾಡಿಸಿಕೊಳ್ಳುವುದು.
ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಸಮಸ್ಯೆಯಿಂದ ಆರ್ಥಿಕ ನೆರವು ವರ್ಗಾವಣೆಯಾಗದಿರುವ ರೈತರು ತಮ್ಮ ಬ್ಯಾಂಕ್ ಶಾಖೆಗಳನ್ನು ಸಂಪರ್ಕಿಸಿ ಆಧಾರ್ ಜೋಡಣೆ ಮಾಡಿಸಿಕೊಳ್ಳಬೇಕೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ಶಿವಶಂಕರ.ಎನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಸಹ ಆಡಳಿತ ಉಸ್ತುವಾರಿಯಾಗಿ…
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ (ಡಿಪಿಎ) ಅಧ್ಯಕ್ಷರಾಗಿರುವ ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಅವರು ಶಿಷ್ಟಾಚಾರದ ಹೆಸರಿನಲ್ಲಿ ಸರ್ಕಾರಿ ಕಾರ್ಯಕ್ರಮಗಳಲ್ಲಿ ಅನಗತ್ಯವಾಗಿ…
ದೊಡ್ಡಬಳ್ಳಾಪುರ: ರೈತರಿಂದ ಖರೀದಿಸುವ ಹಾಲಿನ ಖರೀದಿ ದರವನ್ನು ಪ್ರತಿ ಲೀಟರ್‌ಗೆ 10 ಹೆಚ್ಚಿಸುವಂತೆ ಒತ್ತಾಯಿಸಿ ಬೆಂಗಳೂರು ಹಾಲು ಒಕ್ಕೂಟ (ಬಮೂಲ್)…
ಭಾರತ ರತ್ನ ಡಾ. ಸರ್ ಎಂ. ವಿಶ್ವೇಶ್ವರಯ್ಯನವರ 165ನೇ ಜಯಂತಿ ಅಂಗವಾಗಿ ಮೈಸೂರಿನ ಭಾರತೀಯ ಎಂಜಿನಿಯರ್‌ಗಳ ಸಂಸ್ಥೆ ವತಿಯಿಂದ ಸಂಸ್ಥೆಯ…
ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಕೇವಲ ಪುಸ್ತಕದಲ್ಲಿ ಅಥವಾ ಓದುಗೆ ಸೀಮಿತವಾಗಬಾರದು, ಪ್ರತಿ ಕ್ಷಣ, ಪ್ರತಿ ದಿನ ನಮ್ಮ ಜೀವನದಲ್ಲಿ…
ದೊಡ್ಡಬಳ್ಳಾಪುರ: ಸುಮಾರು ಮೂರು ವರ್ಷಗಳಿಂದ ಪೊಲೀಸರ ಕಣ್ತಪ್ಪಿಸಿ ತಲೆಮರೆಸಿಕೊಂಡಿದ್ದ ರೌಡಿ ಶೀಟರ್‌ವೊಬ್ಬ ಗಾಂಜಾ ಮಾರಾಟ ಮಾಡಲು ಬಂದಾಗ ಪೊಲೀಸರ ಬಲೆಗೆ…