ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ ವತಿಯಿಂದ ಆರ್ ಟಿ ಐ ಕುರಿತು ತರಬೇತಿ ಹಾಗೂ ಗುರುತಿನ ಚೀಟಿ ವಿತರಣಾ ಕಾರ್ಯಕ್ರಮವನ್ನ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ದೊಡ್ಡಹೆಜ್ಜಾಜಿ ಗ್ರಾಮದಲ್ಲಿನ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆಯ ತಾಲೂಕು ಘಟಕವನ್ನ ಸಹ ಉದ್ಘಾಟನೆ ಮಾಡಿ, ರಾಜು ಬೆಳವಂಗಲ ಅವರನ್ನ ತಾಲೂಕು ಘಟಕದ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಪ್ರತಿಯೊಬ್ಬ ಪ್ರಜೆಗೂ ಸಾಮಾಜಿಕ ಜವಾಬ್ಧಾರಿ ಕಡ್ಡಾಯವಾಗಿ ಇರಲೇಬೇಕು. ಪ್ರಶ್ನೆ ಮಾಡುವಂತಹ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರತಿಯೊಂದು ಸರ್ಕಾರಿ ಕಚೇರಿಗಳಲ್ಲಿ ಹೋಗಿ ತಮ್ಮ ಹಕ್ಕುಗಳನ್ನ ಕೇಳಿ ಪಡೆಯಂತಹ ಧೈರ್ಯ ನಮ್ಮಲ್ಲಿರಬೇಕು ಎಂದು ತಾಲೂಕು ಘಟಕದ ನೂತನ ಅಧ್ಯಕ್ಷ ರಾಜು ಬೆಳವಂಗಲ ಅವರು ಹೇಳಿದರು.
ಯಾವುದೇ ಸಂದರ್ಭದಲ್ಲಿ ಮಾನವನ ಹಕ್ಕುಗಳು ಉಲಂಘನೆ ಆದರೆ ಮಾನವನ ಹಕ್ಕುಗಳು ಹಾಗೂ ಭ್ರಷ್ಟಾಚಾರ ಸಂಸ್ಥೆಯು ಕಂಡಿತ ಸಾಮಾಜಿಕ ನ್ಯಾಯ ವದಗಿಸಿಕೊಡುವಂತಹ ಕೆಲಸ ಮಾಡುತ್ತದೆ ಎಂದಯ ಭರವಸೆ ನೀಡಿದ ರಾಜ್ಯ ಅಧ್ಯಕ್ಷ ಎಸ್.ರಾಘವೇಂದ್ರ ಹೇಳಿದರು.
ಯಾವುದೇ ಕುಂದುಕೊರತೆ ಇದ್ದಲ್ಲಿ ಆಹೋರಾತ್ರಿಯಲ್ಲಾದರು ಸಾಮಾಜಿಕ ನ್ಯಾಯಕ್ಕಾಗಿ ಸ್ಪಂದಿಸುತ್ತೇನೆ ಎಂದು ದೊಡ್ಡಬೆಳವಂಗಲ ಹೋಬಳಿ ಅಧ್ಯಕ್ಷ ಡಿ.ಆರ್.ಮಾರುತಿ ಹೇಳಿದರು.
ಈ ವೇಳೆ ರಾಜ್ಯ ಗೌರವ ಅಧ್ಯಕ್ಷರಾದ ಹನುಮಂತರಾಯಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಸರ್ವೇಶ್ ಕುಮಾರ್, ಆರ್ ಟಿ ಐ ವಿಭಾಗದ ಮುಖ್ಯ ಸಲಹೆಗಾರ ರಾಮಲಿಂಗೇಗೌಡ, ಆರ್ ಟಿ ಐ ವಿಭಾಗದ ರಾಜ್ಯ ಸಹ ಸಂಚಾಲಕರು ಅಪ್ಪಾಜಿ ಸೇರಿದಂತೆ ಇತರರು ಉಪಸ್ಥಿತರಿದ್ದರು.