ಅಶ್ಲೀಲ ವಿಡಿಯೋ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಎದುರಿಸುತ್ತಿರುವ, ಸದ್ಯಕ್ಕೆ ವಿದೇಶದಲ್ಲಿ ಅಜ್ಞಾತರಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಒಂದು ತಿಂಗಳ ಬಳಿಕ ಕೊನೆಗೂ ಪ್ರತ್ಯಕ್ಷರಾಗಿದ್ದಾರೆ.
ವಿದೇಶದಲ್ಲಿದ್ದುಕೊಂಡೇ ವಿಡಿಯೋ ಬಿಡುಗಡೆ ಮಾಡಿರುವ ಪ್ರಜ್ವಲ್ ರೇವಣ್ಣ, ಮೊದಲಿಗೆ ನನ್ನ ತಾತ ದೇವೇಗೌಡರು, ನನ್ನ ತಂದೆ-ತಾಯಿ, ಕುಮಾರಣ್ಣ, ಕಾರ್ಯಕರ್ತರಲ್ಲಿ ಕ್ಷಮೆ ಕೋರುತ್ತೇನೆ ಎಂದು ಪ್ರಾರಂಭ ಮಾಡಿದ್ದಾರೆ.
ನಾನು ವಿದೇಶದಲ್ಲಿ ಎಲ್ಲಿ ಎದ್ದೇನೆ ಎಂದು ಸರಿಯಾದ ಮಾಹಿತಿ ನೀಡದೇ ಇದ್ದಿದ್ದಕ್ಕೆ ಕ್ಷಮೆ ಕೋರಿ, ಇಂದು ಮಾಹಿತಿ ನೀಡಲು ವಿಡಿಯೊ ಮಾಡಿದ್ದೇನೆ, ಮೇ. 26 ರಂದು ಚುನಾವಣೆ ನಡೆಯಿತು, ಅಂದು ನನ್ನ ಮೇಲೆ ದೂರು, ಪ್ರಕರಣ ಇರಲಿಲ್ಲ, ಎಸ್ಐಟಿ ಕೂಡ ರಚನೆ ಆಗಿರಲಿಲ್ಲ, ಮೇ.26ಕ್ಕೆ ಕೂಡ ನಾನು ವಿದೇಶಕ್ಕೆ ಹೋಗೋದು ಮೊದಲೇ ನಿಶ್ಚಯವಾಗಿತ್ತು, ಹಾಗಾಗಿ ನಾನು ಫಾರಿನ್ ಗೆ ಹೋದೆ, ಫಾರಿನ್ ಗೆ ಹೋದ ನಂತರ ಯೂಟೂಬ್ ಹಾಗೂ ನ್ಯೂಸ್ ಚಾನಲ್ ನಲ್ಲಿ ಈ ಬಗ್ಗೆ ಮಾಹಿತಿ ದೊರೆಯಿತು. ಮಾಹಿತಿ ದೊರೆತ ನಂತರ ಎಸ್ಐಟಿ ನೋಟಿಸ್ ಕೊಡುವ ಕೆಲಸ ಆಯಿತು, ನನ್ನ ಎಕ್ಸ್ ಖಾತೆ ಮೂಲಕ ಹಾಗೂ ನನ್ನ ಲಾಯರ್ ಮೂಲಕ 7 ದಿನಗಳ ಕಾಲ ಸಮಯಾವಕಾಶ ಕೇಳಿದ್ದೆ, ಕೇಳಿದ ಮೇಲೆ ಅದರ ಮರುದಿನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಇತರೆ ನಾಯಕರು ಈ ವಿಚಾರವನ್ನ ಪ್ರಚಾರ, ಚರ್ಚೆ ಮಾಡಿ ರಾಜಕೀಯ ಪಿತೂರಿ ಮಾಡುವ ಕೆಲಸ ಮಾಡಿದರು.
ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದ ಮೇಲೆ ನಾನು ಖಿನ್ನತೆಯಿಂದ ಐಸೋಲೇಷನ್ ಗೆ ಹೋಗಿದ್ದೆ.
ಹಾಸನದಲ್ಲೂ ಕೆಲ ಶಕ್ತಿಗಳು ಎಲ್ಲವೂ ಒಟ್ಟಿಗೆ ಸೇರಿ ನನ್ನ ವಿರುದ್ಧ ರಾಜಕೀಯ ಪಿತೂರಿ ಮಾಡುವಂತ ಕೆಲಸ ಆಗಿದೆ.
ರಾಜಕೀಯವಾಗಿ ನಾನು ಬೆಳೆಯುತ್ತಿದ್ದೇನೆ, ಏನಾದರೂ ಮಾಡಿ ನನ್ನನ್ನು ಕುಗ್ಗಿಸಬೇಕು ಎಂದು ಭಾವಿಸಿದರು. ಈ ಎಲ್ಲವನ್ನೂ ನೋಡಿ ಅಘಾತಗೊಂಡು ನಾನೇ ದೂರ ಉಳಿದೆ. ಹಾಗಾಗಿ ಇದರ ಬಗ್ಗೆ ಯಾರೂ ಕೂಡ ತಪ್ಪು ತಿಳಿಯುವುದು ಬೇಡ, ನಾನೇ ಖುದ್ದಾಗಿ ಮೇ.30ರ ಶುಕ್ರವಾರ ಬೆಳಗ್ಗೆ 10ಕ್ಕೆ ಎಸ್ಐಟಿ ಮುಂದೆ ಬಂದು ಈ ಪ್ರಕರಣಕ್ಕೆ ಸಹಕಾರ ನೀಡುವ ಮೂಲಕ ಸರಿಯಾದ ರೀತಿ ಉತ್ತರ ನೀಡುತ್ತೇನೆ.
ನ್ಯಾಯಾಲದ ಮೇಲೆ ನಂಬಿಕೆ ಇದೆ, ನನ್ನ ಮೇಲೆ ಸುಳ್ಳ ಪ್ರಕರಣಗಳಿವೆ ನ್ಯಾಯಾಲದ ಮೂಲಕ ಸುಳ್ಳ ಪ್ರಕರಣಗಳಿಂದ ಹೊರಬರುತ್ತೇನೆ ಎಂಬ ನನಗೆ ನಂಬಿಕೆ ಇದೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ಕೋಲಾರ: ಅಮೆಜಾನ್ ಸಹಭಾಗಿತ್ವದ ಫ್ಲಿಪ್ ಕಾರ್ಟ್ ನಲ್ಲಿ ಲೀಟರ್ ಹಾಲನ್ನು ಒಂದು ರೂ. ಗೆ ಮಾರಾಟದ ಅವಕಾಶ ಕಲ್ಪಿಸಿರುವುದು ಅತ್ಯಂತ…
ಭೀಕರ ಅಪಘಾತದಲ್ಲಿ ಮೂವರು ರಿಸರ್ವ್ (ಮೀಸಲು ಪೊಲೀಸ್ ಪಡೆ) ಸಬ್ ಇನ್‌ಸ್ಪೆಕ್ಟರ್‌ಗಳು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಇದಲ್ಲದೆ, ಚಾಮರಾಜನಗರ ಮತ್ತು…
ಕಾನ್ಸಿರಾಮ್ ಅವರು 1978 ರಲ್ಲಿ ಅಖಿಲ ಭಾರತ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ನೌಕರರ ಒಕ್ಕೂಟ (ಬಿಎಎಂಸಿಇಎಫ್) ಸ್ಥಾಪಿಸಿದ್ದರು. 1984ರಲ್ಲಿ ಬಹುಜನ್…
ಚಿಕ್ಕಮಗಳೂರು: ಪುರುಷ ಪ್ರಾಧಾನ್ಯತೆಯ ಸಂಪ್ರದಾಯಕ್ಕೆ ತಿಲಾಂಜಲಿ ಇಟ್ಟು, ಹೆಣ್ಣು ಮಕ್ಕಳೇ ತಮ್ಮ ತಂದೆಯ ಅಂತ್ಯಸಂಸ್ಕಾರ ನಡೆಸಿ ಲಿಂಗ ಸಮಾನತೆಯ ಸಂದೇಶ…
ಹೈದರಾಬಾದ್: ಮದುವೆಯಾಗಲು ನಿರಾಕರಿಸಿದ ಯುವತಿಯೊಬ್ಬಳಿಗೆ ಆಕೆಯ ಪ್ರಿಯಕರನೇ HIV ಪಾಸಿಟಿವ್ ಇಂಜಕ್ಷನ್ ಚುಚ್ಚಿದ ಆಘಾತಕಾರಿ ಘಟನೆ ಹೈದರಾಬಾದ್‌ನ ಮೆಡ್ಚಲ್ ಪ್ರದೇಶದಲ್ಲಿ…
ಸೇವೆಗಾಗಿ ಬಾಳು ಭಾರತ ಸೇವಾದಳ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಭಾರತ ಸೇವಾದಳ ದೇವನಹಳ್ಳಿ ತಾಲೂಕು ಘಟಕ, ಕರ್ನಾಟಕ ರಾಜ್ಯ ಪ್ರಾಥಮಿಕ…