Categories: ಧಾರವಾಡ

ಪ್ರಜ್ಞೆ ತಪ್ಪುವ ಚಾಕಲೇಟ್ ತಿನ್ನಿಸಿ ಚಿನ್ನಾಭರಣ ಕಳ್ಳತನ

ಧಾರವಾಡ ಜಿಲ್ಲೆಯಲ್ಲಿ ಚಾಕಲೇಟ್ ಗ‌್ಯಾಂಗ್ ಪುಲ್ ಆ್ಯಕ್ಟೀವ್ ಆಗಿದೆ. ಬಿಹಾರ ಮೂಲದ ಮಹ್ಮದ್ ಶಮ್ಶದ್ ಎಂಬುವನು ಧಾರವಾಡದಲ್ಲಿ ಮಲ್ಲಿಕಾರ್ಜುನ್ ಎಂಬುವರಿಗೆ ಚಾಕಲೇಟ್ ತನ್ನಿಸಿ ಪ್ರಜ್ಞೆ ತಪ್ಪಿಸಿ ಆತನ ಬಳಿ ಇದ್ದ ಒಂದೂವರೆ ತೊಲೆಯ ಬಂಗಾರದ ಚೈನ್ ಮತ್ತು 25 ಸಾವಿರ ಮೌಲ್ಯದ ವಿವೋ ಫೋನ್ ಕದ್ದು ಪರಾರಿಯಾಗಿದ್ದ. ಈ ಘಟನೆ ನಡೆದದ್ದು ನವೆಂಬರ್ 9 ರಂದು ನಗರದ ಶ್ರಿನಿವಾಸ ಚಿತ್ರಮಂದಿರದಲ್ಲಿ.

ಇನ್ನು ಎನ್ ಜಿ ಓ ದಲ್ಲಿ ಕೆಲಸ ಮಾಡುತ್ತಿದ್ದ ಮಲ್ಲಿಕಾರ್ಜುನ್ ಎಂಬುವರು ಸಿನಿಮಾ ನೋಡಲಿಕ್ಕೆ ಹೋಗಿದ್ದಾರೆ. ಆ ಸಮಯದಲ್ಲಿ ಮಲ್ಲಿಕಾರ್ಜುನ್ ಗೆ ಮಹ್ಮದ ಶಮ್ಶದ್ ಪರಿಚಯವಾಗುತ್ತೆ. ಪರಿಚಯದಿಂದ ಇಬ್ಬರು ಸೇರಿ ಚಲನಚಿತ್ರ ವೀಕ್ಷಣೆಗೆ ಹೋದಾಗ ಮಹ್ಮದ ಶಮ್ಶದ್ ಚಾಕಲೇಟ್ ಕೊಟ್ಡಿದ್ದಾನೆ. ಆ ಚಾಕಲೇಟ್ ನ  ಮಲ್ಲಿಕಾರ್ಜುನ್ ತಿಂದು 10 ನಿಮಿಷದಲ್ಲಿ ಮೂರ್ಚೆ ಹೋಗುತ್ತಾನೆ. ಬಳಿಕ ಮಹ್ಮದ್ ಶಮ್ಶದ್ ಮಲ್ಲಿಕಾರ್ಜುನ್ ಬಳಿ ಇದ್ದ ಗೋಲ್ಡ ಚೈನ್ ಮತ್ತು ಮೋಬೈಲ್ ಕಳ್ಳತನ ಮಾಡಿ ಪರಾರಿಯಾಗಿದ್ದಾನೆ.

ಈ ಕುರಿತು ಪ್ರಕರಣವನ್ನು ದಾಖಲಿಸಿಕೊಂಡ ಶಹರ ಪೊಲೀಸರು ಸದ್ಯ ಮಹ್ಮದ್ ಶಮ್ಶದ್ ನನ್ನು ಬಂಧಿಸಿದ್ದಾರೆ. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್ ಅವರು ಎಲ್ಲ ಪೊಲೀಸ್ ಠಾಣೆಗೆ ಈ ಪ್ರಕರಣದ ಮಾಹಿತಿ ನೀಡಿ, ಇಂತಹ ಪ್ರಕರಣಗಳ ಬಗ್ಗೆ‌ ನಿಗಾ ವಹಿಸಲು ಸೂಚಿಸಿದ್ದಾರೆ.

ಜೊತೆಗೆ ಯಾವುದೇ ಕುರುಹುಗಳಿಲ್ಲದೆ ಒಂದೆ ತಿಂಗಳಲ್ಲಿ ಪ್ರಕರಣವನ್ನ‌ ಬೇಧಿಸಿದ ಶಹರ ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ್ದಾರೆ..ಇನ್ನು ಈ ಬಿಹಾರ ಮೂಲದ ಮಹ್ಮದ್ ಶಮಶದ್ ನ ಜೊತೆ ಯಾರಿದಾರೆ..ಎನ್ನುವುದರ ಬಗ್ಗೆ ಪೋಲಿಸರು ಪ್ರಕರಣವನ್ನ ಗಂಭಿರವಾಗಿ ಪರಿಗಣಿಸಿ ತನಿಖೆ ಮುಂದುವರೆಸಿದ್ದಾರೆ‌‌‌.

Ramesh Babu

Journalist

Recent Posts

ಹಣ ಕೇಂದ್ರೀಕೃತ ಸಮಾಜಕ್ಕೆ ಬದಲಾಗಿ ಮನುಷ್ಯತ್ವ ಕೇಂದ್ರಿತ ಸಮಾಜ ನಿರ್ಮಾಣವಾಗಲಿ…..

ಬದಲಾವಣೆ......... ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು...... ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು..... ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು........ ಭ್ರಷ್ಟಾಚಾರದ…

3 hours ago

ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆದ ನಟ ದರ್ಶನ್

ನಟ ದರ್ಶನ್ ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಥಾಯ್ಲೆಂಡ್ ನಿಂದ ತಡ ರಾತ್ರಿ 11:45…

3 hours ago

ಭೀಮನ ಅಮವಾಸ್ಯೆ ದಿನದಂದು ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವು

ನಿನ್ನೆ(ಜು.24 ಗುರುವಾರ) ಭೀಮನ ಅಮವಾಸ್ಯೆ ಹಿನ್ನೆಲೆ ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ…

14 hours ago

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ರೈತರು ಬೆಳೆ ವಿಮೆಗೆ ನೊಂದಾಯಿಸಿ

ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟ ಸಂಭವಿಸಿದರೆ ರೈತರಿಗೆ ಪರಿಹಾರ ನೀಡುವ ಮೂಲಕ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಪ್ರಧಾನ…

15 hours ago

ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಯೋಗದಿಂದ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ಕೋಲಾರ ಇವರ ಸಹಯೋಗದಲ್ಲಿ ರೇಮಂಡ್ ಕಂಪನಿ ಸಮೂಹದ ಸಿಲ್ವರ್ ಸ್ಪಾರ್ಕ್…

15 hours ago

ಪ್ರತಿ ತಿಂಗಳ ಮೊದಲನೇ ಹಾಗೂ ಮೂರನೇ ಶನಿವಾರ ಜನಸ್ಪಂದನ ಕಾರ್ಯಕ್ರಮ- ಜಿಲ್ಲಾಧಿಕಾರಿ ಎ.ಬಿ ಬಸವರಾಜು

ಪ್ರತಿ ತಿಂಗಳ ಮೊದಲನೇ ಶನಿವಾರ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮವನ್ನು ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಹಾಗೂ ಪ್ರತಿ ತಿಂಗಳ ಮೂರನೇ…

15 hours ago