ಧಾರವಾಡ ಜಿಲ್ಲೆಯಲ್ಲಿ ಚಾಕಲೇಟ್ ಗ‌್ಯಾಂಗ್ ಪುಲ್ ಆ್ಯಕ್ಟೀವ್ ಆಗಿದೆ. ಬಿಹಾರ ಮೂಲದ ಮಹ್ಮದ್ ಶಮ್ಶದ್ ಎಂಬುವನು ಧಾರವಾಡದಲ್ಲಿ ಮಲ್ಲಿಕಾರ್ಜುನ್ ಎಂಬುವರಿಗೆ ಚಾಕಲೇಟ್ ತನ್ನಿಸಿ ಪ್ರಜ್ಞೆ ತಪ್ಪಿಸಿ ಆತನ ಬಳಿ ಇದ್ದ ಒಂದೂವರೆ ತೊಲೆಯ ಬಂಗಾರದ ಚೈನ್ ಮತ್ತು 25 ಸಾವಿರ ಮೌಲ್ಯದ ವಿವೋ ಫೋನ್ ಕದ್ದು ಪರಾರಿಯಾಗಿದ್ದ. ಈ ಘಟನೆ ನಡೆದದ್ದು ನವೆಂಬರ್ 9 ರಂದು ನಗರದ ಶ್ರಿನಿವಾಸ ಚಿತ್ರಮಂದಿರದಲ್ಲಿ.
ಇನ್ನು ಎನ್ ಜಿ ಓ ದಲ್ಲಿ ಕೆಲಸ ಮಾಡುತ್ತಿದ್ದ ಮಲ್ಲಿಕಾರ್ಜುನ್ ಎಂಬುವರು ಸಿನಿಮಾ ನೋಡಲಿಕ್ಕೆ ಹೋಗಿದ್ದಾರೆ. ಆ ಸಮಯದಲ್ಲಿ ಮಲ್ಲಿಕಾರ್ಜುನ್ ಗೆ ಮಹ್ಮದ ಶಮ್ಶದ್ ಪರಿಚಯವಾಗುತ್ತೆ. ಪರಿಚಯದಿಂದ ಇಬ್ಬರು ಸೇರಿ ಚಲನಚಿತ್ರ ವೀಕ್ಷಣೆಗೆ ಹೋದಾಗ ಮಹ್ಮದ ಶಮ್ಶದ್ ಚಾಕಲೇಟ್ ಕೊಟ್ಡಿದ್ದಾನೆ. ಆ ಚಾಕಲೇಟ್ ನ ಮಲ್ಲಿಕಾರ್ಜುನ್ ತಿಂದು 10 ನಿಮಿಷದಲ್ಲಿ ಮೂರ್ಚೆ ಹೋಗುತ್ತಾನೆ. ಬಳಿಕ ಮಹ್ಮದ್ ಶಮ್ಶದ್ ಮಲ್ಲಿಕಾರ್ಜುನ್ ಬಳಿ ಇದ್ದ ಗೋಲ್ಡ ಚೈನ್ ಮತ್ತು ಮೋಬೈಲ್ ಕಳ್ಳತನ ಮಾಡಿ ಪರಾರಿಯಾಗಿದ್ದಾನೆ.
ಈ ಕುರಿತು ಪ್ರಕರಣವನ್ನು ದಾಖಲಿಸಿಕೊಂಡ ಶಹರ ಪೊಲೀಸರು ಸದ್ಯ ಮಹ್ಮದ್ ಶಮ್ಶದ್ ನನ್ನು ಬಂಧಿಸಿದ್ದಾರೆ. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್ ಅವರು ಎಲ್ಲ ಪೊಲೀಸ್ ಠಾಣೆಗೆ ಈ ಪ್ರಕರಣದ ಮಾಹಿತಿ ನೀಡಿ, ಇಂತಹ ಪ್ರಕರಣಗಳ ಬಗ್ಗೆ ನಿಗಾ ವಹಿಸಲು ಸೂಚಿಸಿದ್ದಾರೆ.
ಜೊತೆಗೆ ಯಾವುದೇ ಕುರುಹುಗಳಿಲ್ಲದೆ ಒಂದೆ ತಿಂಗಳಲ್ಲಿ ಪ್ರಕರಣವನ್ನ ಬೇಧಿಸಿದ ಶಹರ ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ್ದಾರೆ..ಇನ್ನು ಈ ಬಿಹಾರ ಮೂಲದ ಮಹ್ಮದ್ ಶಮಶದ್ ನ ಜೊತೆ ಯಾರಿದಾರೆ..ಎನ್ನುವುದರ ಬಗ್ಗೆ ಪೋಲಿಸರು ಪ್ರಕರಣವನ್ನ ಗಂಭಿರವಾಗಿ ಪರಿಗಣಿಸಿ ತನಿಖೆ ಮುಂದುವರೆಸಿದ್ದಾರೆ.