ಪೌಷ್ಠಿಕಾಂಶ ಆಹಾರ ಸೇವನೆಯಿಂದ ಉತ್ತಮ‌ ಆರೋಗ್ಯ ವೃದ್ಧಿ- ಮೊಳಕೆಕಾಳುಗಳ ಮಹತ್ವ ಸಾರಿದ ನ್ಯಾಷನಲ್ ಪ್ರೈಡ್ ಸ್ಕೂಲ್

ಶಾಲಾ ವಿದ್ಯಾರ್ಥಿಗಳಿಗೆ ಆರೋಗ್ಯಕರ, ಶುಚಿತ್ವದ, ರುಚಿಕರವಾದ ಆಹಾರದ ಅರಿವು ಮೂಡಿಸಲು ನ್ಯಾಷನಲ್ ಪ್ರೈಡ್ ಸ್ಕೂಲ್ ನಲ್ಲಿ ಮೊಳಕೆಕಾಳಿನ ದಿನಾಚರಣೆ(Spourts day) ಕಾರ್ಯಕ್ರಮವನ್ನ ಯಶಸ್ವಿಯಾಗಿ ಆಚರಿಸಲಾಯಿತು.

ಶಾಲೆಯ ಅವರಣದಲ್ಲಿ ಮೊಳಕೆಕಾಳಿನ ದಿನಾಚರಣೆಯನ್ನ ಅಯೋಜನೆ ಮಾಡಲಾಗಿದ್ದು, ವಿಶೇಷವಾಗಿ ಪ್ರಿ-ಸ್ಕೂಲ್‌ನ ಪುಟಾಣಿ ಮಕ್ಕಳಿಗಾಗಿ ಮೊಳಕೆಕಾಳಿನ (Spourts day) ದಿನಾಚರಣೆಯ ಮಹತ್ವವನ್ನ ನುರಿತ ಶಿಕ್ಷಕರು ತಿಳಿಸಿಕೊಟ್ಟರು.

ವಿದ್ಯಾರ್ಥಿಗಳು ವಿವಿಧ ಬಗೆಯ ಮೊಳಕೆಕಾಳು ಗಳನ್ನು ತಮ್ಮ ತಮ್ಮ ಮನೆಗಳಿಂದ ತಂದಿದ್ದರು, ಮೊಳಕೆಕಾಳುಗಳಿಂದ ಆರೋಗ್ಯಕರ ಮತ್ತು ರುಚಿಕರವಾದ ವಿವಿಧ ಬಗೆಯ ತಿಂಡಿಗಳನ್ನು ತಯಾರಿಸಲಾಗಿತ್ತು.

ಮೊಳಕೆ, ತುರಿದ ಕ್ಯಾರೆಟ್, ತೆಂಗಿನ ತುರಿ, ಕೊತ್ತಂಬರಿ ಸೊಪ್ಪು, ದಾಳಿಂಬೆ, ನಿಂಬೆ ಮತ್ತು ಉಪ್ಪಿನೊಂದಿಗೆ ರುಚಿಕರವಾದ ಮೊಳಕೆ ಸಲಾಡ್ ಮಾಡುವ ಬಗ್ಗೆ ಶಿಕ್ಷಕರು ವಿವರಿಸಿದರು. ಆನಂತರ ಮಕ್ಕಳು ರುಚಿಕರವಾದ ಮೊಳಕೆಕಾಳುಗಳನ್ನ ತಿಂದು ಆನಂದಿಸಿದರು. ಆರೋಗ್ಯಕರ ಆಹಾರದ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಲು ಈ ಚಟುವಟಿಕೆಯನ್ನು ನಡೆಸಲಾಯಿತು. ಆರೋಗ್ಯಕರ ಆಹಾರ ಸೇವನೆಯ ಅಗತ್ಯತೆ ಮತ್ತು ಆಹಾರದ ನಾರಿನಂಶದಿಂದ ಸಮೃದ್ಧವಾಗಿರುವ ಮೊಳಕೆಕಾಳುಗಳ ಮಹತ್ವವನ್ನು ಶಿಕ್ಷಕರು ಮಕ್ಕಳಿಗೆ ಕಲಿಸಿದರು.

ಕಾರ್ಯಕ್ರಮದಲ್ಲಿ ಶಾಲೆಯ ಕಾರ್ಯದರ್ಶಿಯವರಾದ ಸತೀಶ್ ರಾಜ್ ರವರು, ಮುಖ್ಯೋಪಾಧ್ಯಾಯನಿಯಾದ ರಶ್ಮಿ ಸತೀಶ್ ರಾಜ್ ರವರು. ಶಾಲೆಯ ಕಾರ್ಯನಿರ್ವಾಹಕರಾದ ಬಿಂದು ರವರು ಹಾಗೂ ಎಲ್ಲಾ ಉಪಾಧ್ಯಾಯಿನಿಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *