ಪೌರ ಕಾರ್ಮಿಕ ದಿನಾಚಾರಣೆಯ ಪ್ರಯುಕ್ತ ನಗರದ ಭಗತ್ ಸಿಂಗ್ ಮೈದಾನದಲ್ಲಿ ನಗರಸಭೆ ವತಿಯಿಂದ ಪೌರ ಕಾರ್ಮಿಕರಿಗೆ ವಿವಿಧ ಬಗೆಯ ಕ್ರೀಡೆಗಳನ್ನ ಆಯೋಜನೆ ಮಾಡಲಾಗಿತ್ತು.
ಕ್ರೀಡಾಕೂಟವನ್ನು ಉದ್ಘಾಟಿಸಿದ ನಗರಸಭೆ ಅಧ್ಯಕ್ಷೆ ಸುಧಾರಾಣಿ ಲಕ್ಷ್ಮಿನಾರಾಯಣ್, ಪೌರಾಯುಕ್ತ ಪರಮೇಶ್.
ಮಹಿಳಾ ಪೌರಕಾರ್ಮಿಕರಿಗೆ ಮ್ಯೂಸಿಕಲ್ ಚೇರ್, ಲಿಂಬು ಸ್ಫೂನ್ ಸ್ಪರ್ಧೆ, ಥ್ರೋಬಾಲ್, ಗುಂಡು ಎಸೆತ ಸೇರಿದಂತೆ ಇತರೆ ಕ್ರೀಡೆಗಳನ್ನ ಆಯೋಜನೆ ಮಾಡಲಾಗಿತ್ತು.
ಪುರುಷ ಪೌರಕಾರ್ಮಿಕರಿಗೆ ಕ್ರಿಕೆಟ್, ಗುಂಡು ಎಸೆತ, ಕಬಡ್ಡಿ ಸೇರಿದಂತೆ ಇತರೆ ಕ್ರೀಡೆಗಳನ್ನು ಆಯೋಜನೆ ಮಾಡಲಾಗಿತ್ತು. ಈ ಕ್ರೀಡಾಕೂಟದಲ್ಲಿ ಲವಲವಿಕೆಯಿಂದ ಪಾಲ್ಗೊಂಡಿದ್ದರು.
ವಿವಿಧ ಸ್ಪರ್ಧೆಗಳಲ್ಲಿ ಗೆದ್ದವರಿಗೆ ಪೌರಕಾರ್ಮಿಕ ದಿನಾಚರಣೆ ದಿನದಂದು ಬಹುಮಾನ ವಿತರಿಸಲಾಗುವುದು.