
ಮನೆಯವರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾಗಿದ್ದ ಯುವತಿ ಮೂರೇ ತಿಂಗಳಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಅಂದ್ರಹಳ್ಳಿಯಲ್ಲಿ ನಡೆದಿದೆ..
ಅಮೂಲ್ಯ ನೇಣಿಗೆ ಶರಣಾದ ವಿವಾಹಿತೆ.
ಅಮೂಲ್ಯ-ಅಭಿಷೇಕ್ ಲವ್ ಮ್ಯಾರೇಜ್ ಗೆ ಮನೆಯವರ ವಿರೋಧವಿತ್ತು. ಕೊನೆಗೆ ಎರಡು ಕುಟುಂಬದವರನ್ನ ಒಪ್ಪಿಸಿ ಮೂರು ತಿಂಗಳ ಹಿಂದಷ್ಟೇ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಇದೀಗ ನವ ವಿವಾಹಿತೆ ಅಮೂಲ್ಯ ಆತ್ಮಹತ್ಯೆ ಮಾಡಿಕೊಂಡಿರೋದು ಅನುಮಾನ ಮೂಡಿಸಿದೆ.. ಕಿರುಕುಳ ಕೊಟ್ಟು ಗಂಡ ಅಭಿಷೇಕ್ ನೇಣು ಬಿಗಿದು ಸಾಯಿಸಿದ್ದಾನೆ ಅಂತ ಅಮೂಲ್ಯ ಕುಟುಂಬಸ್ಥರು ಆರೋಪಿಸಿದ್ದಾರೆ..