ಚಿಕ್ಕಬಳ್ಳಾಪುರ ಸಂಚಾರ ಠಾಣೆಯ ಪೊಲೀಸರು ರಸ್ತೆ ಸುರಕ್ಷತಾ ಅಭಿಯಾನದ ಅಂಗವಾಗಿ ಅಪ್ರಾಪ್ತರು (18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು) ಚಲಾಯಿಸುತ್ತಿದ್ದ ಒಟ್ಟು 19 ದ್ವಿಚಕ್ರ ವಾಹನಗಳನ್ನು ಮೋಟಾರು ವಾಹನ ತಿದ್ದುಪಡಿ ಕಾಯಿದೆ, 2019ರ ಸೆಕ್ಷನ್ 199A ಅಡಿಯಲ್ಲಿ ಜಪ್ತಿ ಮಾಡಲಾಗಿದೆ.
ಠಾಣೆಯ ಬಳಿ ಪೋಷಕರು ಮತ್ತು ವಿದ್ಯಾರ್ಥಿಗಳ ಜೊತೆ ಸಮಾಲೋಚನೆ ನಡೆಸಿ, ಕಾಯಿದೆಯ ಪ್ರಕಾರ, ಅಪ್ರಾಪ್ತರಿಗೆ ವಾಹನ ನೀಡುವ ಪೋಷಕರಿಗೆ ಅಥವಾ ಮಾಲೀಕರಿಗೆ ₹25,000 ದಂಡ ಹಾಗೂ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ ಜೊತೆಗೆ, ಆ ವಾಹನದ ನೋಂದಣಿಯನ್ನು 12 ತಿಂಗಳವರೆಗೆ ರದ್ದುಗೊಳಿಸಲು ಸಹ ಸಾಧ್ಯವಿದೆ ಎಂಬುದರ ಬಗ್ಗೆ ಸೂಕ್ತ ತಿಳುವಳಿಕೆಯನ್ನು ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ ನೀಡಿದರು.