ಪೋಷಕರು, ಶಾಲಾ ಸಂಸ್ಥೆಗಳು, ವಾಹನ ಮಾಲೀಕರು, ಚಾಲಕರು ಮಕ್ಕಳ ಸುರಕ್ಷತೆಯನ್ನು ಆದ್ಯತೆಯಾಗಿ ಸ್ವೀಕರಿಸಬೇಕು- ದೊಡ್ಡಬಳ್ಳಾಪುರ ನಗರ ಪೊಲೀಸ್ ಇನ್ಸ್ ಪೆಕ್ಟರ್ ಅಮರೇಶ್ ಗೌಡ ಸೂಚನೆ

ಶಾಲಾ ವಾಹನ ಚಾಲಕರು ಮಕ್ಕಳನ್ನು ಸುರಕ್ಷಿತವಾಗಿ ಶಾಲೆಗೆ ಕರೆದುಕೊಂಡು ಹೋಗಿ, ಮನೆಗೆ ತಂದು ಬಿಡುವ  ಕಾರ್ಯವನ್ನು ಉತ್ತಮವಾಗಿ ನಿಭಾಯಿಸಬೇಕು ಎಂದು ದೊಡ್ಡಬಳ್ಳಾಪುರ ನಗರ ಪೊಲೀಸ್ ಇನ್ಸ್ ಪೆಕ್ಟರ್ ಅಮರೇಶ್ ಗೌಡ ಅವರು ಸೂಚಿಸಿದರು.

ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ದೊಡ್ಡಬಳ್ಳಾಪುರ ನಗರ ಪೊಲೀಸ್ ಇನ್ಸ್ ಪೆಕ್ಟರ್ ಅಮರೇಶ್ ಗೌಡ ಅವರ ನೇತೃತ್ವದಲ್ಲಿ ಠಾಣಾ ಆವರಣದಲ್ಲಿಂದು ವಾಹನ ಚಾಲಕರಿಗೆ ಕಟ್ಟುನಿಟ್ಟಾಗಿ ಪಾಲಿಸಬೇಕಾದ ಸಂಚಾರಿ ನಿಯಮಾವಳಿಗಳ ಕುರಿತು ಜಾಗೃತಿ ಮೂಡಿಸಿದರು.

ಪೋಷಕರು, ಶಾಲಾ ಸಂಸ್ಥೆಗಳು, ವಾಹನ ಮಾಲೀಕರು ಮಕ್ಕಳು ಸುರಕ್ಷತೆಯನ್ನು ಆದ್ಯತೆಯಾಗಿ ಸ್ವೀಕರಿಸಬೇಕು. ಶಾಲಾ ವಾಹನಗಳಲ್ಲಿ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸುಪ್ರೀಂ ಕೋರ್ಟ್‌ ನೀಡಿರುವ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದರು.

ಸುಸ್ಥಿತಿ ಯಲ್ಲಿರುವ ವಾಹನಗಳನ್ನೇ ಶಾಲಾ ವಾಹನಗಳನ್ನಾಗಿ ಬಳಸಬೇಕು. ಶಾಲಾ ವಾಹನಗಳಿಗೆ ವೇಗ ನಿಯಂತ್ರಕ ಅಳವಡಿಸಿರಬೇಕು. ವೇಗದ ಮಿತಿ ಗಂಟೆಗೆ 40 ಕಿ.ಮೀ. ಇರಬೇಕು. ವಾಹನ 15 ವರ್ಷಗಳಿಗಿಂತ ಹಳೆಯದಿರಬಾರದು. ವಾಹನ ಹಳದಿ ಬಣ್ಣದ್ದಾಗಿರಬೇಕು ಮತ್ತು 150 ಮಿ.ಮೀ. ಅಗಲದ ಹಸಿರು ಪಟ್ಟಿ ವಾಹನದ ಮಧ್ಯದುದ್ದಕ್ಕೂ ಇರಬೇಕು. ಎಲ್ಲ ನಾಲ್ಕು ಬದಿಗಳಲ್ಲಿ ‘ಶಾಲಾ ವಾಹನ’ ಎಂದು ಸ್ಪಷ್ಟವಾಗಿ ಮತ್ತು ದೊಡ್ಡದಾಗಿ ಬರೆದಿರಬೇಕು. ಮಕ್ಕಳು 12 ವರ್ಷಕ್ಕಿಂತ ಕೆಳಗಿನವರಿದ್ದರೆ ಅನುಮತಿ ಇರುವ ಸಂಖ್ಯೆಯ ಸೀಟಿಗಿಂತ ಒಂದೂವರೆ ಪಟ್ಟಿಗಿಂತ ಮಕ್ಕಳು ಹೆಚ್ಚಿರಬಾರದು. 12 ವರ್ಷ ಮೇಲ್ಪಟ್ಟ ಮಕ್ಕಳನ್ನು ಒಬ್ಬ ವ್ಯಕ್ತಿ ಎಂದು ಪರಿಗಣಿಸಬೇಕು. ವಾಹನದಲ್ಲಿ ಎಲ್‌ಪಿಜಿ ಅಳವಡಿಸಲಾಗಿದ್ದರೆ ಸಂಬಂಧಿತ ನೋಂದಾವಣೆ ಅಧಿಕಾರಿಯಿಂದ ಪ್ರಮಾಣಪತ್ರ ಪಡೆದಿರಬೇಕು. ಮಕ್ಕಳನ್ನು ಸಿಲಿಂಡರ್ ಇರುವ ಸ್ಥಳದ ಮೇಲೆ ಕೂಡಿಸಬಾರದು ಎಂದು‌ ತಿಳಿಸಿದರು.

ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಕೃಷ್ಣಪ್ಪ ಮಾತನಾಡಿ, ವಾಹನದ ಗಾಜಿಗೆ ಬಣ್ಣದ ಶೀಟುಗಳನ್ನು ಬಳಸುವಂತಿಲ್ಲ. ಚಾಲಕನ ಬಳಿ ಕನಿಷ್ಠ ನಾಲ್ಕು ವರ್ಷ ಹಗುರ ವಾಹನ ಓಡಿಸಿದ ಅನುಭವವಿರಬೇಕು ಮತ್ತು ನ್ಯಾಯಸಮ್ಮತವಾದ ಲೈಸೆನ್ಸ್ ಇರಬೇಕು. ಸಮವಸ್ತ್ರ ಕಡ್ಡಾಯ, ಅಂಗಿಯ ಮೇಲೆ ಹೆಸರಿನ ಪ್ಲೇಟ್ ಇರಬೇಕು. ವಾಹನದ ಮೇಲೆ ಇರುವ ಕ್ಯಾರಿಯರ್ ಮೇಲೆ ಬ್ಯಾಗ್ ಇಡತಕ್ಕದ್ದಲ್ಲ ಮತ್ತು ವಾಹನದ ಹೊರಗಡೆ ಬ್ಯಾಗುಗಳನ್ನು ನೇತುಹಾಕುವಂತಿಲ್ಲ. ವಾಹನದ ಹಿಂಬದಿಯಲ್ಲಿ ಚಾಲಕನ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಮುಂತಾದ ವಿವರಗಳನ್ನು ಲಗತ್ತಿಸಬೇಕು. ವಿದ್ಯಾರ್ಥಿಯ ಹೆಸರು, ವಿಳಾಸ, ರಕ್ತದ ಗುಂಪು, ತರಗತಿ, ವಾಹನ ಹತ್ತಿಳಿಯುವ ಸ್ಥಳ, ವಾಹನ ಚಲಿಸುವ ಮಾರ್ಗ ಮುಂತಾದ ವಿವರಗಳನ್ನು ಚಾಲಕ ಬರೆದಿಟ್ಟುಕೊಂಡಿರಬೇಕು ಎಂದರು.

ತುರ್ತು ಪರಿಸ್ಥಿತಿ ಎದುರಾದಾಗ ಡ್ರೈವರ್ ಅಥವಾ ಸಹಾಯಕ ಶಾಲೆಗೆ ಮಾಹಿತಿ ನೀಡಬೇಕು ಮತ್ತು ಮಕ್ಕಳನ್ನು ಸುರಕ್ಷಿತವಾಗಿರಿಸಲು ತಕ್ಕ ವ್ಯವಸ್ಥೆ ಮಾಡಬೇಕು.

ಮಗು ನರ್ಸರಿಯಲ್ಲಿ ಓದುತ್ತಿದ್ದರೆ, ಶಾಲೆ ಮತ್ತು ಪಾಲಕರು ಗುರುತಿಸುವಂಥ ವ್ಯಕ್ತಿ ಬಾರದೆಹೋದರೆ, ಮಗುವನ್ನು ಶಾಲೆಗೆ ಮರಳಿ ತರತಕ್ಕದ್ದು. ಮಗುವನ್ನು ಪಾಲಕರೇ ಶಾಲೆಗೆ ಬಂದು ಕರೆದುಕೊಂಡು ಹೋಗಬೇಕು ಎಂದು ಸೂಚಿಸಿದರು.

ಚಾಲಕ ಚಾಲನೆ ಮಾಡುವಾಗ, ಪಾನಮತ್ತನಾಗಿ, ಮೊಬೈಲ್ ಬಳಸುವುದನ್ನು ನಿರ್ಬಂಧಿಸಲಾಗಿದೆ. ತುರ್ತು ನಿರ್ಗಮನ ಕಡ್ಡಾಯ. ವಾಹನಗಳಲ್ಲಿ ಸಿಸಿಟಿವಿ, ಅಗ್ನಿ ಶಾಮಕ ಉಪಕರಣ, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇರಬೇಕು. ತುರ್ತು ನಿರ್ಗಮನಕ್ಕೆ ಅನುಕೂಲಕರ ಡೋರ್‌ ಇರಬೇಕು ಎಂದು ತಿಳಿಸಿದರು.

ನಿಯಮಗಳನ್ನು ಪಾಲಿಸದ ಚಾಲಕರು ಮತ್ತು ಸಂಸ್ಥೆಗಳಿಗೆ ಮೊದಲು ದಂಡ ವಿಧಿಸುತ್ತೇವೆ. ತಪ್ಪುಗಳು ಪುನರಾವರ್ತನೆ ಆದಲ್ಲಿ ವಾಹನ ನಿಯಂತ್ರಣ ಕಾಯ್ದೆ ಅನ್ವಯ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.

Ramesh Babu

Journalist

Recent Posts

ನಟ ಪ್ರಥಮ್ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ ಆರೋಪ: ಹಲ್ಲೆ ಎಲ್ಲಿ ಆಯ್ತು…? ಘಟನೆ ಬಗ್ಗೆ ನಟ ಪ್ರಥಮ್ ಏನಂದ್ರು… ಗೊತ್ತಾ….? ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ….

ಜು.22ರ ಮಂಗಳವಾರ ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ…

14 hours ago

ಈ ವರ್ಷ ಕೇಂದ್ರ ಸರ್ಕಾರ ಸರಬರಾಜು ಮಾಡಿರುವ ರಸಗೊಬ್ಬರ ಸಾಕಾಗುತ್ತಿಲ್ಲ- ಸಿಎಂ ಸಿದ್ದರಾಮಯ್ಯ

ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾತಿ ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ,…

21 hours ago

ಹಣ ಕೇಂದ್ರೀಕೃತ ಸಮಾಜಕ್ಕೆ ಬದಲಾಗಿ ಮನುಷ್ಯತ್ವ ಕೇಂದ್ರಿತ ಸಮಾಜ ನಿರ್ಮಾಣವಾಗಲಿ…..

ಬದಲಾವಣೆ......... ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು...... ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು..... ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು........ ಭ್ರಷ್ಟಾಚಾರದ…

24 hours ago

ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆದ ನಟ ದರ್ಶನ್

ನಟ ದರ್ಶನ್ ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಥಾಯ್ಲೆಂಡ್ ನಿಂದ ತಡ ರಾತ್ರಿ 11:45…

1 day ago

ಭೀಮನ ಅಮವಾಸ್ಯೆ ದಿನದಂದು ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವು

ನಿನ್ನೆ(ಜು.24 ಗುರುವಾರ) ಭೀಮನ ಅಮವಾಸ್ಯೆ ಹಿನ್ನೆಲೆ ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ…

1 day ago

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ರೈತರು ಬೆಳೆ ವಿಮೆಗೆ ನೊಂದಾಯಿಸಿ

ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟ ಸಂಭವಿಸಿದರೆ ರೈತರಿಗೆ ಪರಿಹಾರ ನೀಡುವ ಮೂಲಕ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಪ್ರಧಾನ…

2 days ago