ದೊಡ್ಡಬಳ್ಳಾಪುರ : ಭಕ್ತರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ 600ಕ್ಕೂ ಹೆಚ್ಚು ಎಕರೆ ಸರ್ಕಾರಿ ಗೋಮಾಳವಿದೆ ಎಂದು ತಿಳಿದುಬಂದಿದೆ. ಬಲಾಢ್ಯರೊಬ್ಬರು ಪೋಡಿ ಮಾಡಸದೇ ಸರ್ಕಾರಿ ಗೋಮಾಳದಲ್ಲಿಯೂ ಸಹ ಕಾಂಪೌಂಡ್ ನಿರ್ಮಾಣ ಮಾಡಲಾಗುತ್ತಿದೆ. ಈ ಕುರಿತು ಸ್ಥಳೀಯ ರೈತರು ಆಕ್ರೋಶ ವ್ಯಕ್ತಪಡಿಸಿದರು. ಈ ಹಿನ್ನೆಲೆ ಸ್ಥಳಕ್ಕೆ ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಲಾಢ್ಯರ ಅತಿಕ್ರಮಕ್ಕೆ ಬ್ರೇಕ್ ಹಾಕಿದ್ದಾರೆ. ಕಾಂಪೌಂಡ್ ನಿರ್ಮಾಣವನ್ನ ತಡೆ ಹಿಡಿದಿದದು, ಪೋಡಿ ನಂತರ ಅನಧಿಕೃತ ಸಾಗುವಳಿದಾರನ್ನು ತೆರವು ಮಾಡಿ ಸರ್ಕಾರಿ ಜಾಗವನ್ನ ವಶಕ್ಕೆ ಪಡೆಯುವುದಾಗಿ ಹೇಳಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕು ಭಕ್ತರಹಳ್ಳಿ ಗ್ರಾಮ ಪಂಚಾಯಿತಿಯ ಮಲ್ಲೇಗೌಡನಪಾಳ್ಯ, ಲಕ್ಕೇನಹಳ್ಳಿ, ಸಿಂಗೇಹಳ್ಳಿ ಸರ್ವೆ ನಂಬರ್ ಗಳಲ್ಲಿ ಸುಮಾರು 600ಕ್ಕೂ ಹೆಚ್ಚು ಎಕರೆ ಸರ್ಕಾರಿ ಗೋಮಾಳವಿದೆ, ಸುತ್ತಮುತ್ತಲಿನ ರೈತರು ನೂರಾರು ಸರ್ಕಾರಿ ಗೋಮಾಳದಲ್ಲಿ ಅನುಭೋಗದಲ್ಲಿದ್ದು, ಸಾಗುವಳಿ ಮಾಡುತ್ತಿದ್ದಾರೆ, ಭೂ ಮಂಜೂರಾತಿಗಾಗಿ ಫಾರಂ 53, 57 ಅರ್ಜಿಯನ್ನು ಸಲ್ಲಿಸಿದ್ದಾರೆ, ಕೆಲವು ರೈತರಿಗೆ ಭೂ ಮಂಜೂರಾತಿಯಾಗಿದೆ. ಬಲಾಢ್ಯನೊಬ್ಬ ಸರ್ಕಾರಿ ಗೋಮಾಳದಲ್ಲಿ ಕಾಂಪೌಂಡ್ ನಿರ್ಮಾಣ ಮಾಡುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.
ಸರ್ಕಾರಿ ಗೋಮಾಳ ಹತ್ತಾರು ಗ್ರಾಮಗಳಲ್ಲಿನ ಜಾನುವಾರುಗಳ ಮೇವಿನ ತಾಣ, ಪಶುಸಂಗೋಪನೆ ನಂಬಿಕೊಂಡು ನೂರಾರು ಕುಟುಂಬಗಳು ಜೀವನ ಮಾಡುತ್ತಿವೆ, ಇದೇ ಗೋಮಾಳದ ಸುತ್ತ ಕಾಂಪೌಂಡ್ ನಿರ್ಮಾಣ ಮಾಡಲಾಗುತ್ತಿದ್ದು, ಜಾನುವಾರುಗಳ ಪ್ರವೇಶಿಸದಂತೆ ತಡೆಯುಲಾಗುತ್ತಿದೆ ಎಂಬುದು ರೈತರ ಆರೋಪವಾಗಿದೆ. ಕಾಂಪೌಂಡ್ ನಿರ್ಮಾಣಕ್ಕೆ ತಡೆ ಹಾಕುವಂತೆ ತಹಶೀಲ್ದಾರ್ ರವರಿಗೆ ಮನವಿ ಮಾಡಿದರು.
ಮಾಜಿ ಶಾಸಕರಾದ ಟಿ.ವೆಂಕಟರಣಯ್ಯ, ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್, ಸರ್ವೆ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು, ರೈತರೊಂದಿಗೆ ಮಾತನಾಡಿದ ಅಧಿಕಾರಿಗಳ ತಂಡ ಕಾಂಪೌಂಡ್ ನಿರ್ಮಾಣಕ್ಕೆ ತಡೆ ನೀಡಲಾಗಿದೆ, ಪೋಡಿಯಾಗುವ ವರೆಗೂ ಕಾಂಪೌಂಡ್ ನಿರ್ಮಾಣ ಕೆಲಸಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಮಾಜಿ ಶಾಸಕರಾದ ಟಿ.ವೆಂಕಟರಣಯ್ಯ, ಹಲವು ವರ್ಷಗಳಿಂದ ಸಾಗುವಳಿ ರೈತರು ಮತ್ತು ರೈತರಿಂದ ಭೂಮಿ ಖರೀದಿ ಮಾಡಿರುವ ಖಾಸಗಿ ಫೌರ್ಮ್ ನವರಿದ್ದಾರೆ, ಇವರಿಬ್ಬರ ನಡುವಿನ ಗೊಂದಲದಿಂದ ಸಮಸ್ಯೆಯುಂಟಾಗಿದೆ, ಕ್ರಯ ಮಾಡಿಕೊಂಡಿರುವ ಜಾಗದಲ್ಲಿ ಕಾಂಪೌಂಡ್ ನಿರ್ಮಾಣ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ. ಅದಕ್ಕೂ ಮುನ್ನ, ಅಧಿಕಾರಿಗಳ ತಂಡ ಸರ್ವೆ ನಡೆಸಿ ಪೋಡಿಯಾದ ನಂತರವೇ ಕಾಂಪೌಂಡ್ ನಿರ್ಮಾಣ ಮಾಡಲಿ ಎಂದರು.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್, ಪೋಡಿ ಅಂದೋಲನದಲ್ಲಿ ಸಾಸಲು ಹೋಬಳಿಗೆ ಪ್ರಥಮ ಆದ್ಯತೆ ನೀಡಲಾಗುವುದು, ಸಂಪೂರ್ಣ ಹೋಬಳಿಯನ್ನ ಪೋಡಿ ಮುಕ್ತ ಮಾಡಲಾಗುವುದು. ಕಾಂಪೌಂಡ್ ನಿರ್ಮಾಣ ಮಾಡದಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಉಪ ತಹಶೀಲ್ದಾರ್ ನೇತೃತ್ವದಲ್ಲಿ 6 ಸರ್ವೆಯರ್ಸ್, ಗ್ರಾಮ ಆಡಳಿತಾಧಿಕಾರಿ, ರೆವಿನ್ಯೂ ಇನ್ಸ್ ಪೇಕ್ಟರ್, ಮತ್ತು ಪೊಲೀಸು ಒಳಗೊಂಡ ತಂಡ ರಚನೆ ಮಾಡಲಾಗಿದೆ ಎಂದರು.
ಅಧಿಕಾರಿಗಳ ತಂಡ ಮೂರು ಗ್ರಾಮಗಳ ಸಂಪೂರ್ಣ ಸರ್ವೆ ಮಾಡುವರು, ಸರ್ಕಾರಿ ಗೋಮಾಳದಲ್ಲಿ ಅನುಭೋಗದಲ್ಲಿರುವ, ಖಾತೆ ಮಾಡಿಸಿಕೊಂಡಿರುವ, ಮಾರಾಟ ಮಾಡಿರುವ ಮತ್ತು ಅನಧಿಕೃತವಾಗಿರುವ ರೈತರ ಬಗ್ಗೆ ಮಾಹಿತಿ ಕಲೆ ಹಾಕಿ 15 ದಿನದೊಳಗೆ ವರದಿ ಸಲ್ಲಿಸುವರು. ವರದಿ ಆಧಾರದ ಮೇಲೆ ಅನಧಿಕೃತವಾಗಿರುವರನ್ನ ತೆರವು ಮಾಡಲಾಗುವುದು, ಸರ್ಕಾರಿ ಗೋಮಾಳವನ್ನ ಸರ್ಕಾರದ ವಶಕ್ಕೆ ಪಡೆಯುವುದ್ದಾಗಿ ಹೇಳಿದರು.
ಸಾಗುವಳಿದಾರರಾದ ರಾಮಕ್ಕ ಮಾತನಾಡಿ, ನಮ್ಮ ಅತ್ತೆ ಮಾವನ ಕಾಲದಿಂದ ನಾವು ಈ ಜಾಗದಲ್ಲಿ ವ್ಯವ್ಯಸಾಯ ಮಾಡುತ್ತಿದ್ದೇವೆ, ಉಪ ವಿಭಾಗಾಧಿಕಾರಿಗಳಿಂದ ಆದೇಶವಾಗಿದೆ, ಜಮೀನಿನ ಸ್ಕೇಚ್ ಆಗಿದೆ, ನಮ್ಮ ಬಳಿ ಜಮೀನಿನ ದಾಖಲೆಗಳಿದ್ದರು ದೌರ್ಜನ್ಯದಿಂದ ನಮ್ಮನ್ನು ಇಲ್ಲಿಂದ ಓಡಿಸಲು ಯತ್ನಿಸುತ್ತಿದ್ದಾರೆ, ತಹಶೀಲ್ದಾರ್ ಮಾತಿನ ಮೇಲೆ ನಂಬಿಕೆ ಇದೆ, ನ್ಯಾಯ ಸಿಗುವ ಭರವಸೆ ಇದೆ ಎಂದರು.
ಕೋಲಾರ: ಕೆ.ಸಿ.ವ್ಯಾಲಿ ಯೋಜನೆಯಿಂದ ಅಂತರ್ಜಲ ಹೆಚ್ಚಿ ರೈತರ ಬದುಕು ಹಸನಾಗಿದ್ದು, ಜೆಡಿಎಸ್ ಪಕ್ಷ ಸೇರಿದಂತೆ ಕೆಲ ಮುಖಂಡರಿಂದ ದಾರಿ ತಪ್ಪಿಸುವ…
ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು ವತಿಯಿಂದ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರಿಗೆ ನುಡಿನಮನ…
ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಅರುಣ್ ಅವರು ವರ್ಗಾವಣೆಗೊಂಡಿದ್ದು, ಈ ಹಿನ್ನೆಲೆ ಇಂದು ಎಸ್…
ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ. ಪ್ರಹ್ಲಾದ್ ಜೋಶಿ ಕೂಡ ಒಂದೇ ಒಂದು ದಿನ…
ಗೆದ್ದವರಿಗೆ ಅಭಿನಂದಿಸುತ್ತಾ, ಸೋತವರಿಗೆ ಸಾಂತ್ವನ ಹೇಳುತ್ತಾ, ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಸಂವಿಧಾನಕ್ಕೆ ಸಲಾಂ ಹೊಡೆಯುತ್ತಾ, ನಮ್ಮ ಮುಗ್ದತೆ ಮತ್ತು ಮೂರ್ಖತನ…
ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು, ರಾಷ್ಟ್ರೀಯ ಲೋಕ ಅದಾಲತ್ ಮುಖೇನ ರಾಜೀಯಾಗುವ ಪ್ರಕರಣಗಳ ವಿಲೇವಾರಿಗೊಳಿಸುವಂತೆ ಕರ್ನಾಟಕ ರಾಜ್ಯ ಕಾನೂನು…