
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಜಾಮೀನು ರದ್ದುಗೊಳಿಸಿದ ನಂತರ ಮತ್ತೆ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ನಟ ದರ್ಶನ್ ಹಾಗೂ ಪವಿತ್ರಾ ಗೌಡ. ದರ್ಶನ್ (ಸುಬ್ಬ) ಪವಿತ್ರಾ ಗೌಡ (ಸುಬ್ಬಿ) ಪೊಲೀಸ್ ಸ್ಟೇಷನ್ನಲ್ಲಿ ತೆಗೆಸಿಕೊಂಡ ಎನ್ನಲಾದ ಫೋಟೋಗಳು ಸದ್ಯ ಫುಲ್ ವೈರಲ್ ಆಗುತ್ತಿವೆ. ದೇವರಿಗೆ ಮುಡಿಕೊಟ್ಟಿದ್ದ ದರ್ಶನ್ ಇದೀಗ ಅದೇ ಅವತಾರದಲ್ಲಿ ಇರುವ ಫೋಟೋ ವೈರಲ್ ಆಗುತ್ತಿದೆ. ಆತಂಕ, ದುಗುಡದಲ್ಲೇ ಫೋಟೋಗೆ ನಿಂತುಕೊಂಡಿದ್ದಾರೆ.
ಬಂಧನದ ಬಳಿಕ ನಟ ದರ್ಶನ್ ಮತ್ತು ಇತರೆ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ರವಾನಿಸಲಾಗಿದ್ದು ಎಲ್ಲ ಆರೋಪಿಗಳು ಸೆರೆವಾಸ ಅನುಭವಿಸುತ್ತಿದ್ದಾರೆ. ಗುರುವಾರ ಬಂಧಿಸಲ್ಪಟ್ಟ ನಟ ದರ್ಶನ್, ಖಿನ್ನತೆಗೆ ಒಳಗಾಗಿದ್ದಾರೆ. ರಾತ್ರಿ ಇಡೀ ನಿದ್ರೆ ಮಾಡದೇ ಸಮಯ ಕಳೆದಿರುವ ದರ್ಶನ್ ಮೌನಕ್ಕೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ.