ಚಿಕ್ಕಬಳ್ಳಾಪುರ ತಾಲೂಕಿನ ಮೈಲಪ್ಪನಹಳ್ಳಿ ಗ್ರಾಮದ ಎದುರು ಬದರು ಮನೆಯಲ್ಲಿ ವಾಸವಿದ್ದ ಪಸೀಹಾ ಮತ್ತು ನಾಗಾರ್ಜುನ ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರ ಪ್ರೀತಿಗೆ ಯುವತಿ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದರ ನಡುವೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಿಂದೂ ಯುವಕ, ಅನ್ಯಕೋಮಿನ ಯುವತಿ ಒಂದಾಗಿದ್ದಾರೆ.
ಇವರಿಬ್ಬರ ಪ್ರೀತಿಗೆ ಯುವತಿ ಪೋಷಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪಸೀಹಾ ಮತ್ತು ನಾಗಾರ್ಜುನ ಪ್ರಾಣ ಭೀತಿಯಿಂದ ನೇರವಾಗಿ ಪೊಲೀಸ್ ಠಾಣೆಗೆ ಆಗಮಿಸಿದ್ದರು. ಈ ವೇಳೆ ಯುವತಿಯ ಪೋಷಕರು ಬೇಡಿ ಪ್ರಾರ್ಥನೆ ಮಾಡಿದ್ದರು ಸಹ ಪಸೀಹಾ ಕ್ಯಾರೆ ಎನ್ನದೇ ಮದುವೆ ಆಗಿದ್ದಾರೆ..!