ಮಕ್ಕಳ ಹಕ್ಕುಗಳ ರಕ್ಷಣೆ, ಪಾಲನೆ ಮತ್ತು ಕಾನೂನಿನ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಸಲುವಾಗಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ತೆರದ ಮನೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.
ತೆರದ ಮನೆ ಕಾರ್ಯಕ್ರಮದ ಅಂಗವಾಗಿ ತೂಬಗೆರೆ ಹೋಬಳಿಯ ಎಸ್ ಎಲ್ ಆರ್ ಎಸ್ ಶಾಲೆಯ 1-4ನೇ ತರಗತಿಯ ಮಕ್ಕಳು ಶಾಲಾ ಶಿಕ್ಷಕರೊಂದಿಗೆ ಠಾಣೆಗೆ ಭೇಟಿ ನೀಡಿದ್ದರು. ಪೊಲೀಸ್ ಇನ್ಸ್ ಪೆಕ್ಟರ್ ಸಾಧಿಕ್ ಪಾಷಾ ಅವರು ಮಕ್ಕಳಿಗೆ ಅರ್ಥವಾಗುವ ರೀತಿ ಪೊಲೀಸ್ ಪಾಠ ಮಾಡಿದರು.
ಯಾರಾದರು ದುರ್ನಡತೆ ತೋರಿದಾಗ, ಒಂಟಿಯಾಗಿದ್ದಾಗ, ಅಪರಿಚಿತರನ್ನ ಕಂಡಾಗ ಯಾವೆಲ್ಲಾ ಎಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂಬೆಲ್ಲಾ ವಿಚಾರಗಳ ಬಗ್ಗೆ ಸರಳವಾಗಿ ಮಕ್ಕಳಿಗೆ ತಿಳಿಸಿದರು.
ಮಕ್ಕಳು ಕುತೂಹಲದಿಂದ ಪೊಲೀಸ್ ಅಧಿಕಾರಿಗಳ ಕಾರ್ಯವೈಖರಿನ್ನು ವೀಕ್ಷಿಸಿದರು.