ತಾಲೂಕಿನ ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರ ಘಾಟಿಯಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ತೆಪೋತ್ಸವ ಕಾರ‍್ಯಕ್ರಮ ಭಾನುವಾರ ರಾತ್ರಿ ಬಹಳ ವಿಜೃಂಭಣೆಯಿಂದ ನೆರವೇರಿತು.
ತುಳು ಷಷ್ಠಿಯಂದು ಬ್ರಹ್ಮರಥೊತ್ಸವ ಮುಗಿದ ಒಂದು ತಿಂಗಳಿಗೆ ಬರುವ ಮಾಘ ಶುದ್ದ ಪಂಚಮಿಯಂದು ನಡೆಯುವ ಈ ತೆಪ್ಪೋತ್ಸವ, ದೇವಾಲಯದ ಹೊರಭಾಗದಲ್ಲಿರುವ ಕಲ್ಯಾಣಿಯಲ್ಲಿ ಜಗಮಗಿಸುವ ವಿದ್ಯುತ್ ಹಾಗೂ ಹೂವಿನ ಅಲಂಕೃತ ತೆಪ್ಪದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಉತ್ಸವ ಮೂರ್ತಿಯನ್ನಿಟ್ಟು, ವೇದ ಮಂತ್ರ ಘೋಷಗಳಿಂದ ಪೂಜೆ ಸಲ್ಲಿಸಲಾಯಿತು, ತೆಪ್ಪದ ಮೇಲೆ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ ಅದ್ಧೂರಿಯಾಗಿ ಮಾಡಲಾಯಿತು.
ಕಲ್ಯಾಣಿಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ತೆಪ್ಪೋತ್ಸವ ಪ್ರಯುಕ್ತ ಭರತ ನಾಟ್ಯ, ಸುಗಮ ಸಂಗೀತ ಕಾರ್ಯಕ್ರಮ ನಡೆದವು.
ತೆಪೋತ್ಸವ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತಾಧಿಗಳು ಪಾಲ್ಗೊಂಡು, ಭವ್ಯವಾದ ತೆಪೋತ್ಸವವನ್ನು ಕಣ್ತುಂಬಿಕೊಂಡು ಆನಂದಪಟ್ಟರು.