
ಕೋಲಾರ: ರಾಜ್ಯ ಸರ್ಕಾರ 2023ರ ಪಿಟಿಸಿಎಲ್ ತಿದ್ದುಪಡಿ ಕಾಯ್ದೆಯ ವಿರುದ್ಧವಾಗಿ ಕಂದಾಯ ಇಲಾಖೆ, ನ್ಯಾಯಾಲಯಗಳು, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟಿನಲ್ಲಿ ಕಾಯ್ದೆಯ ವಿರುದ್ಧ ತೀರ್ಪು ನೀಡಿರುವುದು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಕ್ಕೆ ಉದ್ದೇಶ ಪೂರ್ವಕವಾಗಿ ಅನ್ಯಾಯ ಮಾಡುತ್ತಿರುವುದರ ವಿರುದ್ಧ ಕ್ರಮ ಕೈಗೊಳ್ಳಲು ಪಿಟಿಸಿಎಲ್ ಕಾಯ್ದೆ ಭೂಮಿ ವಂಚಿತರ ಹೋರಾಟ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗೆ ಮನವಿ ರವಾನಿಸಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದಮನಿತರ ಸಂಘರ್ಷ ಸಮಿತಿ ರಾಜ್ಯ ಅಧ್ಯಕ್ಷ ಮೇಡಹಾಳ ಮುನಿಅಂಜಿನಪ್ಪ ಮಾತನಾಡಿ ದಲಿತರ ಪರವಾದ ಪಿ.ಟಿ.ಸಿ.ಎಲ್ ಕಾಯ್ದೆಯ ಮೂಲ ಉದ್ದೇಶದ ವಿರುದ್ಧವಾಗಿ ಮತ್ತು ಸಂವಿಧಾನ ಆಶಯಗಳ ವಿರುದ್ಧವಾಗಿ ತೀರ್ಪು ನೀಡುತ್ತಿದ್ದಾರೆ ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಗಳು ಭೂಮಿಯುನ್ನು ಕಳೆದುಕೊಂಡು ಮತ್ತೆ ಭೂರಹಿತರಾಗುವುವಂತೆ ಮಾಡಿ ದಲಿತರಿಗೆ ಮರಣ ಶಾಸನದ ತೀರ್ಪು ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರವು ಚುನಾವಣೆ ಪೂರ್ವದಲ್ಲಿ ನುಡಿದಂತೆ ನಡೆದು ಮುಖಮಂತ್ರಿಗಳು ಕೊಟ್ಟ ಮಾತಿನಂತೆ ಘನ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ಅಧಿವೇಶನದಲ್ಲೇ ದಲಿತರ ಭೂಮಿಗಳನ್ನು ರಕ್ಷಣೆ ಮಾಡುವ ಸದುದ್ದೇಶದಿಂದ 2023 ರಲ್ಲಿ ಘನ ರಾಜ್ಯ ಸರ್ಕಾರ ಪಿ.ಟಿ.ಸಿ.ಎಲ್ ಕಾಯ್ದೆ ಕಲಂ 5(1) ಸಿ ಕಾಲಮಿತಿ ಅನ್ವಯವಾಗುವುದಿಲ್ಲವೆಂದು ತಿದ್ದುಪಡಿ ತಂದು ತುಳಿತಕ್ಕೊಳಾಗದ ಸಮುದಾಯಕ್ಕೆ ಆಸರೆಯಾದ ಕಾಂಗ್ರೆಸ್ ಸರ್ಕಾರಕ್ಕೆ ಸಮುದಾಯದ ಪರವಾಗಿ ಅಭಿನಂದನೆಗಳು ಸಲ್ಲಿಸಿದರು.
ಸರ್ಕಾರದ ಸದರಿ ತಿದ್ದುಪಡಿಯಲ್ಲಿ ಸ್ಪಷ್ಟವಾಗಿ ಸರ್ವೋಚ್ಚ ನ್ಯಾಯಾಲಯ, ಉಚ್ಚ ನ್ಯಾಯಾಲಯಗಳು ಅಧೀನ ನ್ಯಾಯಾಲಗಳಲ್ಲಿ ಹಾಗು ರಾಜ್ಯದ ಕಂದಾಯ ನ್ಯಾಯಾಲಯಗಲ್ಲಿ ನಡೆಯುತ್ತಿರುವ ದಾವೆಗಳಿಗೂ, ಬಾಕಿ ಇರುವ ಎಲ್ಲಾ ಪ್ರಕರಣಗಳಿಗೂ ಅನ್ವಯವಾಗುವಂತೆ ತಿದ್ದುಪಡಿಯಾಗಿದರು ಸಹ ಇದರ ವಿರುದ್ಧವಾಗಿ ಉದ್ದೇಶ ಪೂರ್ವಕವಾಗಿ ಜಾತಿವಾದಿಗಳು ರಾಜ್ಯ ಸರ್ಕಾರದ ಪಿ.ಟಿ.ಸಿ.ಎಲ್. ಕಾಯ್ದೆಯ ಆಶಯದ ವಿರುದ್ಧವಾಗಿ ಕಾಲಮಿತಿ ಅನ್ವಯಿಸಿ ಮತ್ತು ಕಾರಣಗಳೇ ಇಲ್ಲದ ಸಣ್ಣಪುಟ್ಟ ಕಾರಣಗಳನ್ನು ಮುಂದಿಟ್ಟುಕೊಂಡು ಎಲ್ಲಾ ನ್ಯಾಯಾಲಯಗಳಲ್ಲಿ ಡಿಸಿ, ಎಸಿ, ಉಚ್ಚ ನ್ಯಾಯಾಲಯಗಳು ಸುಪ್ರೀಂಕೋರ್ಟಿನ ನ್ಯಾಯಾಲಯಗಳು ದಲಿತರ ವಿರುದ್ಧವಾಗಿ ದುರುದ್ದೇಶದಿಂದ ದಲಿತರ ವಿರುದ್ಧ ಬಲಾಡ್ಯರ ಕುತಂತ್ರಗಳಿಗೆ ಮಣೆ ಹಾಕಿ 2023 ರ ಪಿ.ಟಿ.ಸಿಎಲ್. ಕಾಯ್ದೆ ತಿದ್ದು ಪಡಿಯ ವಿರುದ್ಧವಾಗಿ ಹಾಗು ದಲಿತ ಸಮುದಾಯಗಳು ಭೂರಹಿತರಾಗಲು ಆದೇಶಗಳನ್ನೂ ಸದರಿ ನ್ಯಾಯಾಲಯಗಳು ಮಾಡುತ್ತಿವೆ ಎಂದು ಆರೋಪಿಸಿದರು
ನ್ಯಾಯಾಲಯಗಳಲ್ಲಿ ಸರ್ಕಾರದಿಂದ ಮಂಜೂರಾಗಿದ್ದರೂ ಸಹ (ಇನಾಂ, ಜಿಎಂಎಸ್, ಕನಿಷ್ಠ ಬೆಲೆ, ಮಾರುಕಟ್ಟೆ, ಬೆಲೆಗಿಂತ ಕಡಿಮೆ ಬೆಲೆ ನಿರ್ದಿಷ್ಟ ಬೆಲೆ ಇತ್ಯಾದಿ. ಭೂಮಿಗಳನ್ನು ಉದ್ದೇಶ ಪೂರ್ವಕವಾಗಿ ಕಾಯಂ ವ್ಯಾಪ್ತಿಯಲ್ಲಿ ಬರುವುದಿಲ್ಲವೆಂದು ವಜಾ ಮಾಡುತ್ತಿದ್ದಾರೆ. ಕಲಂ 311 ನಲ್ಲಿ ಎಲ್ಲಾ ಸರ್ಕಾರದಿಂದ ಮಂಜೂರಾದ ಜಮೀನುಗಳು ಎಂದು ಇದರೂ ಸಹ ನ್ಯಾಯಾಲಯಗಳು ಮರುದೋಷದಿಂದ ಗೊಂದಲ ಸೃಷ್ಟಿಸುತ್ತಿದ್ದಾರೆ. ಆದರಿಂದ ಎಲ್ಲಾ ಮಂಜೂರಾದ ಭೂಮಿಗಳ ಬಗ್ಗೆ ಸರಿಪಡಿಸಿ ತಿದ್ದುಪಡಿ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಪಿಟಿಸಿಎಲ್ ಮಂಜುನಾಥ್, ಮಾಯಮ್ಮ, ರಾಘವೇಂದ್ರ, ರತ್ನಯ್ಯ, ಗಂಗುಲಪ್ಪ, ನಳನಿ, ವಿಜಯಲಕ್ಷ್ಮಿ, ಮುನಿರಾಜು, ಮೋಟಪ್ಪ, ಅಂಬರೀಶ್ ಮುಂತಾದವರು ಇದ್ದರು.