ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎ ಎಸ್ಐ ಆಗಿದ್ದ ಸಿ.ಕೃಷ್ಣಪ್ಪನವರು ಸೇವಾನುಭವ ಆಧಾರದ ಮೇಲೆ ದೊಡ್ಡಬಳ್ಳಾಪುರ ನಗರ ಠಾಣೆಗೆ ಪಿಎಸ್ಐ ಆಗಿ ಮುಂಬಡ್ತಿ ಪಡೆದಿದ್ದಾರೆ. ಪಿಎಸ್ಐ ಆಗಿ ಮುಂಬಡ್ತಿ ಪಡೆದ ಹಿನ್ನೆಲೆ ತಾಲೂಕಿನ ನಾಯಕ ಸಮುದಾಯದ ಮುಖಂಡರು ಪಿಎಸ್ಐ ಸಿ.ಕೃಷ್ಣಪ್ಪನವರಿಗೆ ಪುಷ್ಪಗುಚ್ಛ ನೀಡುವುದರ ಮೂಲಕ ಅಭಿನಂದನೆ ಸಲ್ಲಿಸಿ, ಉತ್ತಮವಾಗಿ ಕರ್ತವ್ಯ ನಿರ್ವಹಿಸಲು ಶುಭಕೋರಿದರು.
ನಗರದಲ್ಲಿ ಶಾಂತಿಸುವ್ಯವಸ್ಥೆ, ಟ್ರಾಫಿಕ್ ನಿಯಂತ್ರಣ, ಅಪರಾಧ ಚಟುವಟಿಕೆಗಳಿಗೆ ಕಡಿವಾಣ, ಕಳ್ಳತನ ಪ್ರಕರಣಗಳನ್ನ ಕಡಿಮೆ ಮಾಡಲು ಸೂಕ್ತ ಕ್ರಮಗಳನ್ನು ಕೈಗೊಂಡು ನಗರದ ಜನತೆ ನೆಮ್ಮದಿ ಜೀವನ ನಡೆಸಲು ಅನುವುಮಾಡಿಕೊಡಬೇಕು ಎಂದು ಮುಖಂಡರು ಮನವಿ ಮಾಡಿದರು.
ಮುಖಂಡರ ಮನವಿ ಹಾಗೂ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪಿಎಸ್ಐ ಸಿ.ಕೃಷ್ಣಪ್ಪ, ಪೊಲೀಸ್ ಇಲಾಖೆ ಸದಾ ಜನಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತದೆ. ಸಾರ್ವಜನಿಕರ ಸಹಕಾರ ಇಲಾಖೆಗೆ ಅತ್ಯಗತ್ಯ. ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡಲು ಅವಿರತವಾಗಿ ನಾವು ದುಡಿಯುತ್ತೇವೆ. ನಗರದಲ್ಲಿ ಶಾಂತಿ ಸುವ್ಯವಸಸ್ಥೆ ಕಾಪಾಡಲು ಅಗತ್ಯ ಕ್ರಮಗಳನ್ನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ವೇಳೆ ಸಿ ಪಿ ಐ ಅಮರೇಶ್ ಗೌಡ, ವಾಲ್ಮೀಕಿ ಸಂಘದ ತಾಲೂಕು ಅಧ್ಯಕ್ಷ ಪ್ರೇಮ್ ಕುಮಾರ್, ಉಪಾಧ್ಯಕ್ಷ ಕುಮಾರ್, ಹಿರಿಯ ಹೋರಾಟಗಾರರಾದ ಸಂಜೀವ್ ನಾಯಾಕ, ಸಮುದಾಯದ ಹಿರಿಯ ಮುಖಂಡ ಬಸವರಾಜ್, ಮಂಜುನಾಥ್, ಕೃಷ್ಣ, ತಿಮ್ಮಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.