ಪಿಎಲ್ ಡಿ ಬ್ಯಾಂಕ್ ಅಧಿಕಾರಿಗಳು ಆಡಳಿತ ಮಂಡಳಿಗಳ ಜೊತೆಗೆ ರಾಜಕಾರಣಿಗಳನ್ನು ವಿಶ್ವಾಸ ಪಡೆದು ರೈತರಿಂದ ಸಾಲ ವಸೂಲಿಗೆ ಆದ್ಯತೆ ನೀಡಿ- ಯಲವಾರ ಸೊಣ್ಣೇಗೌಡ ಅಧಿಕಾರಿಗಳಿಗೆ ಸೂಚನೆ

ಕೋಲಾರ: ಬ್ಯಾಂಕ್ ಅಧಿಕಾರಿಗಳು ಮತ್ತು ಸಿಬ್ಬಂದಿ ಪಕ್ಷಾತೀತವಾಗಿ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರೈತರಿಂದ ಸಾಲ ವಸೂಲಿ ಮಾಡುವ ಮೂಲಕ ಬ್ಯಾಂಕ್ ಏಳಿಗೆಗಾಗಿ ಶ್ರಮಿಸುವಂತೆ ಕರ್ನಾಟಕ ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ ನಿರ್ದೇಶಕ ಯಲವಾರ ಸೊಣ್ಣೇಗೌಡ ತಿಳಿಸಿದರು.

ನಗರದ ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ ಕಛೇರಿಯಲ್ಲಿ ಶನಿವಾರ ಜಿಲ್ಲೆಯ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರು ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗಳ ಸಭೆಯಲ್ಲಿ ಮಾತನಾಡಿದ ಅವರು ಅಧಿಕಾರಿಗಳು ಬ್ಯಾಂಕ್ ವಿಚಾರದಲ್ಲಿ ಯಾವತ್ತೂ ರಾಜಕಾರಣ ಮಾಡಬಾರದು ಎಲ್ಲಾ ಪಕ್ಷಗಳ ಜೊತೆಗೆ ಆಡಳಿತ ಮಂಡಳಿಯೊಂದಿಗೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಬ್ಯಾಂಕ್ ಅನ್ನು ಸರಿದಾರಿಗೆ ತೆಗೆದುಕೊಳ್ಳಬೇಕು ಆರ್ಥಿಕವಾಗಿ ವ್ಯವಸ್ಥೆ ಸರಿ ಇದ್ದರೆ‌ ಮಾತ್ರವೇ ಬ್ಯಾಂಕ್ ನಡೆಯಲು ಸಾಧ್ಯ ವಸೂಲಿ ಮಾಡದೇ ಹೋದರೆ ರೈತರಿಗೆ ಸಾಲ ನೀಡಲು ಸಾಧ್ಯವಿಲ್ಲ ಎಂದರು

ಕೆಲವು ಕಡೆ ಬ್ಯಾಂಕ್ ಅಧಿಕಾರಿಗಳು ಮತ್ತು ಸಿಬ್ಬಂದಿ ನಿರ್ಲಕ್ಷ್ಯದಿಂದ ವಸೂಲಿ ಕಡಿಮೆಯಾಗಿದೆ ಎಲ್ಲೂ ಸಹ ದುರುಪಯೋಗ ಆಗಿಲ್ಲ ಗ್ಯಾಪ್ ಉಳಿದಿದೆ ಬ್ಯಾಂಕಿಂಗ್ ಚಟುವಟಿಕೆ ಚುರುಕುಗೊಳಿಸಬೇಕು. ವಸೂಲಿಗೆ ಮೊದಲ ‌ಆದ್ಯತೆ‌ ನೀಡಬೇಕು ಜನರಿಗೆ ‌ಮತ್ತೆ ಸಾಲ‌ ನೀಡಿ ಲಾಭಾದಾಯಕವಾಗಿ ಬ್ಯಾಂಕ್ ಮಾಡಬೇಕು ಮಾರ್ಚ್ ತಿಂಗಳೊಳಗೆ ರಾತ್ರಿ ಹಗಲು ಎನ್ನದೆ ರೈತರನ್ನು ಮನವೊಲಿಸಿ ವಸೂಲಿ‌ ಮಾಡಬೇಕು.‌ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಒಳ್ಳೆಯ ಭಾವನೆಯಿಂದ ಕೆಲಸ ಮಾಡಿದರೆ ಪ್ರತಿಫಲ ಖಂಡಿತ ಸಿಗುತ್ತದೆ ಎಂದರು

ರೈತರು ಸಹ ಮಾರ್ಚ್ 31 ರೊಳಗೆ ಸಾಲ ಮರುಪಾವತಿ ಮಾಡುವಂತೆ ಮನವರಿಕೆ ಮಾಡಿ ಮಾರ್ಚ್ ಮುಗಿದ ನಂತರ ಹೆಚ್ಚುವರಿ ಬಡ್ಡಿ ಕಟ್ಟಬೇಕಾಗುತ್ತದೆ ರೈತರು ಸಹ ಸ್ವಯಂಪ್ರೇರಿತವಾಗಿ ತಾವು ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವುದರಿಂದ ಇತರ ರೈತರಿಗೆ ಸಾಲ ನೀಡುವುದರ ಜತೆಗೆ ಬ್ಯಾಂಕಿನ ಅಭಿವೃದ್ಧಿಗೂ ಅವಕಾಶವಾಗಲಿದೆ. ಆದ್ದರಿಂದ ಈಗ ಪಡೆಯುತ್ತಿರುವ ಸಾಲವನ್ನು ನಿಯಮಿತವಾಗಿ ರೈತರು ಕಟ್ಟಲು ಮುಂದಾಗಬೇಕೆಂದು ಎಂದರು.

ಈ ಸಂದರ್ಭದಲ್ಲಿ ಪಿಎಲ್ಡಿ ಬ್ಯಾಂಕ್ ಮುಳಬಾಗಿಲು ತಾಲೂಕು ಅಧ್ಯಕ್ಷ ಗಂಗಿರೆಡ್ಡಿ, ಕೋಲಾರ ಅಧ್ಯಕ್ಷ ಕೆಂದಟ್ಟಿ ಶಿವಕುಮಾರ್, ಬಂಗಾರಪೇಟೆ ಅಧ್ಯಕ್ಷ ಹೆಚ್.ಎಸ್ ರಘುನಾಥ್, ಮಾಲೂರು ಉಪಾಧ್ಯಕ್ಷ ವೆಂಕಟೇಶಪ್ಪ, ಸೇರಿದಂತೆ ಅಧಿಕಾರಿಗಳು ಸಿಬ್ಬಂದಿ ಸಭೆಯಲ್ಲಿ ಇದ್ದರು

Leave a Reply

Your email address will not be published. Required fields are marked *