ಪಿಎಲ್‌ಡಿ ಬ್ಯಾಂಕ್ ಸಾಲ ವಸೂಲಾತಿಯಲ್ಲಿ ಜಿಲ್ಲೆಯಲ್ಲೇ ದ್ವಿತೀಯ ಸ್ಥಾನದೊಂದಿಗೆ 90.49. ಲಕ್ಷ ನಿವ್ವಳ ಲಾಭ

ಕೋಲಾರ: ಬ್ಯಾಂಕ್‌ ಪ್ರಸಕ್ತ ಸಾಲಿನಲ್ಲಿ 90,49,439 ಲಕ್ಷ ಲಾಭ ಗಳಿಸಿದ್ದು ಅಲ್ಲದೇ ಸಾಲ ವಸೂಲಾತಿಯಲ್ಲಿ ಜಿಲ್ಲೆಗೆ ದ್ವೀತಿಯ ಸ್ಥಾನವನ್ನು ಪಡೆದಿದೆ ಎಂದು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷ ಹೊಳಲಿ ಹೊಸೂರು ಜಿ.ಅಮರೇಶ್ ಹೇಳಿದರು.

ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಶುಕ್ರವಾರ ಬ್ಯಾಂಕ್‌ನ 2023–24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಈ ವರ್ಷದಲ್ಲಿ ರೈತರಿಗೆ ಸರಕಾರದ ಸಾಲಮನ್ನಾ ಯೋಜನೆಯಿಂದ 1.22 ಕೋಟಿ ರೂಪಾಯಿಗಳ ಪ್ರಯೋಜನವಾಗಿದೆ ಹಿಂದೆ ಆಡಳಿತ ನಡೆಸಿದವರ ಮಾರ್ಗದರ್ಶನದಲ್ಲಿ ಬ್ಯಾಂಕ್ ಮುನ್ನಡೆಸಿಕೊಂಡು ಹೋಗಿದ್ದೇವೆ ಎಂದರು‌.

ಸರ್ಕಾರದ ಸೌಲಭ್ಯಗಳನ್ನು ಸಮಾಜದ ಕಟ್ಟಕಡೆಯ ರೈತರ ಮನೆ ಬಾಗಿಲಿಗೆ ತಲುಪುವಂತೆ ಮಾಡುವುದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ರೈತರು ಪಡೆದ ಸಾಲವನ್ನು ನಿಗದಿತ ಅವಧಿಯಲ್ಲಿ ಸಮರ್ಪಕವಾಗಿ ಮರುಪಾವತಿಸಿದರೆ ಮಾತ್ರ ಬ್ಯಾಂಕ್‌ನ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.

ಅವಿಭಜಿತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರು ರಾಜ್ಯದಲ್ಲೇ ಶ್ರಮಜೀವಿಗಳಾಗಿದ್ದಾರೆ. ಹೆಚ್ಚಿನ ಮಳೆಯಿಲ್ಲದಿದ್ದರೂ ಸ್ವಾಭಿಮಾನಿಗಳಾಗಿ ದುಡಿಯುತ್ತಾರೆ. ಮಾರುಕಟ್ಟೆಗೆ ಅನುಗುಣವಾಗಿ ವ್ಯವಸಾಯ ಮಾಡತ್ತಾರೆ. ವಾಣಿಜ್ಯ ಬೆಳೆಗಳಲ್ಲಿ ನಷ್ಟವಾದರೆ ಹೈನುಗಾರಿಕೆ ಕೈ ಹಿಡಿದಿದೆ ಸಾಲ ಮರುಪಾವತಿಯಲ್ಲಿ ಬ್ಯಾಂಕ್ ಅಧಿಕಾರಿಗಳು ಮತ್ತು ಆಡಳಿತ ಮಂಡಳಿ ಬಂದಾಗ ಸಹಕರಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಿಎಲ್ಲಿ ಬ್ಯಾಂಕ್ ಉಪಾಧ್ಯಕ್ಷೆ ಸುನಂದಮ್ಮ, ನಿರ್ದೇಶಕರಾದ ಯಲವಾರ ಸೊಣ್ಣೆಗೌಡ, ವಿಟ್ಟಪ್ಪನಹಳ್ಳಿ ಡೇರಿ ವೆಂಕಟೇಶ್, ವಿ.ಎ ಶಶಿಧರ್, ಹೆಚ್ ಕೃಷ್ಣೇಗೌಡ, ಚಿಕ್ಕಹಸಾಳ ಮಂಜುನಾಥ್, ಬೈರೇಗೌಡ, ರಾಧಾಕೃಷ್ಣ, ಕೆ.ಸಿ ಮಂಜುನಾಥ್, ಗಂಗಪ್ಪ, ಶೋಭಾ, ಗೋವಿಂದಪ್ಪ, ಬ್ಯಾಂಕ್ ಸಿಇಒ ಶ್ರೀನಿವಾಸ್, ಲೆಕ್ಕಾಧಿಕಾರಿ ಶೋಭಾರಾಣಿ, ಸಿ.ಶ್ಯಾಮಲಾ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!