ಪಾಸ್ ಪೋರ್ಟ್ ಕವರ್ ನಲ್ಲಿ ಅಕ್ರಮ ಚಿನ್ನದ ಹಾಳೆಗಳ ಸಾಗಾಟ

ದೇವನಹಳ್ಳಿ : ಪಾಸ್ ಪೋರ್ಟ್ ಕವರ್ ನಲ್ಲಿ ಮರೆಮಾಚಿ ಚಿನ್ನವನ್ನ ಅಕ್ರಮವಾಗಿ ಸಾಗಿಸಲು ಯತ್ನಿಸಿದ ಮೂವರು ಪ್ರಯಾಣಿಕರು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾರೆ, ಆರೋಪಿಗಳಿಂದ 86 ಗ್ರಾಂ ತೂಕದ 5 ಲಕ್ಷ ಮೌಲ್ಯದ ಚಿನ್ನವನ್ನ ಜಪ್ತಿ ಮಾಡಲಾಗಿದೆ.

ನವೆಂಬರ್ 1 ರಂದು ಕೌಲಾಲಂಪುರ್ ನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಮೂವರು ಪ್ರಯಾಣಿಕರನ್ನ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ, ಈ ವೇಳೆ ಮೂವರು ಪ್ರಯಾಣಿಕರು ತಮ್ಮ ಪಾಸ್ ಪೋರ್ಟ್ ಕವರ್ ನಲ್ಲಿ ಮರೆಮಾಚಿ ಚಿನ್ನದ ಹಾಳೆಗಳನ್ನ ಅಕ್ರಮವಾಗಿ ಸಾಗಿಸುವ ಯತ್ನ ನಡೆಸಿರುವುದು ಬೆಳಕಿಗೆ ಬಂದಿದೆ.

ಕೂಡಲೇ ಚಿನ್ನವನ್ನ ಜಪ್ತಿ ಮಾಡಲಾಗಿದ್ದು ತನಿಖೆ ಮುಂದುವರೆದಿದೆ.

Leave a Reply

Your email address will not be published. Required fields are marked *