
ಇಂದು ಸಂಜೆ ಸುರಿದ ಭಾರೀ ಮಳೆ ಹಾಗೂ ಬೀಸಿದ ಗಾಳಿಗೆ ಪಾಲ್ ಪಾಲ್ ದಿನ್ನೆ ಬಳಿ ಬೃಹತ್ ಮರ ರಸ್ತೆಗೆ ಅಡ್ಡಲಾಗಿ ಬುಡ ಸಮೇತ ಉರುಳಿ ಬಿದ್ದಿದೆ. ಇದರಿಂದ ಘಾಟಿ ಹಾಗೂ ಸುತ್ತಮುತ್ತಾ ಹಳ್ಳಿಗಳ್ಳಿಗಳಿಗೆ ಹೋಗಲು ಸಾರ್ವಜನಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇಂದು ಸಂಜೆ ಸುಮಾರು 5:30ರ ಸಮಯದಲ್ಲಿ ಬೃಹತ್ ಮರ ರೋಡಿಗುರುಳಿ ಬಿದ್ದಿದೆ. ಸುಮಾರು 1 ಗಂಟೆಯಾದರೂ ಮರ ತೆರವುಗೊಳಿಸದ ಕಾರಣ ಸಂಚಾರ ಅಸ್ತವ್ಯಸ್ತಗೊಂಡಿದೆ.
ಶ್ರೀ ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೆ ಬರುವ ವಾಹನ ಸವಾರರು ಕಂಟನಕುಂಟೆ ಮಾರ್ಗವಾಗಿ ಮಾಕಳಿ ಮೂಲಕ ಬರಲು ವ್ಯವಸ್ಥೆ ಮಾಡಲಾಗಿದೆ.
ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ದೌಡಾಯಿಸಿ ಮರ ತೆರವುಗೊಳಿಸುವ ಕಾರ್ಯ ಮಾಡಲಾಗುತ್ತಿದೆ….