ದ್ವಿಚಕ್ರ ವಾಹನ ಸವಾರನ ತಲೆಯ ಮೇಲೆ ಹರಿದ ಕ್ಯಾಂಟರ್ ಲಾರಿ, ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರದ ಪಾಲನಜೋಗಿಹಳ್ಳಿಯ ಫ್ರೆಂಡ್ಸ್ ಹಾಲ್ ಎದುರು ಇಂದು ಮಧ್ಯಾಹ್ನ ನಡೆದಿದೆ….
ಮೃತನನ್ನು ರಾಜೀವ್ ಗಾಂಧಿ ಬಡವಾಣೆಯ ಪ್ರದೀಪ್ (35), ಎಂದು ಗುರುತಿಸಲಾಗಿದೆ…
ಲಾರಿಯ ಚಕ್ರದ ಅಡಿಗೆ ದ್ವಿಚಕ್ರ ವಾಹನ ಸವಾರ ಬಿದ್ದಿದ್ದಾನೆ. ಬಿದ್ದ ಕೂಡಲೇ ಲಾರಿಯ ಚಕ್ರ ಬೈಕ್ ಸವಾರನ ತಲೆಯ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ರಸ್ತೆಯ ತುಂಬೆಲ್ಲಾ ಚೆಲ್ಲಾಪಿಲ್ಲಿಯಾಗಿ ಮೆದುಳು ಬಿದ್ದಿದೆ. ಸದ್ಯ ದೊಡ್ಡಬಳ್ಳಾಪುರ ಶವಾಗರಕ್ಕೆ ಮೃತ ದೇಹವನ್ನು ರವಾನೆ ಮಾಡಲಾಗಿದೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ….