ಪರೀಕ್ಷೆಯಲ್ಲಿ ಉತ್ತರ ತೋರಿಸಿಲ್ಲವೆಂದು ಯುವಕನ ಮೇಲೆ ರಾಡ್ ನಿಂದ ಗ್ಯಾಂಗ್ ಅಟ್ಯಾಕ್

ಪರೀಕ್ಷೆಯಲ್ಲಿ ಉತ್ತರಗಳನ್ನು ತೋರಿಸಿಲ್ಲ ಎಂಬ ಕಾರಣಕ್ಕೆ 15 ಜನರ ಗುಂಪು ಕಟ್ಟಿಕೊಂಡು ಬಂದು ಯುವಕನ ಮೇಲೆ ಹಲ್ಲೇ ನಡೆಸಿರುವಂತಹ ಘಟನೆ ಚಿಂತಾಮಣಿ ನಗರದಲ್ಲಿ ನಡೆದಿದೆ.

ಡಿ 26 ರಂದು ನಗರದ ಖಾಸಗಿ ಕಾಲೇಜಿನಲ್ಲಿ ಫೈನಾನ್ಸಿಯಲ್ ಅಕೌಂಟಿಂಗ್ ಪರೀಕ್ಷೆ ಬರೆಯಲು ಚೇಳೂರು ನಿವಾಸಿ ಅಭಿಷೇಕ್ ಬಂದಿದ್ದರು. ಇನ್ನು ಪರೀಕ್ಷೆ ಬರೆಯುತ್ತಿದ್ದ ವೇಳೆ ಚಿಂತಾಮಣಿಯ ಶಾಂತಿ ನಗರದ ನಿವಾಸಿ ನಂದೀಶ್ ಬರೆಯುತ್ತಿದ್ದ ಉತ್ತರಗಳನ್ನು ತೋರಿಸುವಂತೆ ಕೇಳಿಕೊಂಡಿದ್ದಾನೆ. ನಾನು ತೋರಿಸಲ್ಲ ಎಂದು ಅಭಿಷೇಕ್ ಉತ್ತರಿಸಿದ ಹಿನ್ನೆಲೆ ಪರೀಕ್ಷೆ ಮುಗಿದ ನಂತರ ನಂದೀಶ್ ತನ್ನ ಸ್ನೇಹಿತರೊಂದಿಗೆ ಸೇರಿ ಅಭಿಷೇಕ್ ಮೇಲೆ ಹಲ್ಲೆ ಮಾಡಿದ್ದಾರೆ.

ಅಭಿಷೇಕ್ ಪರೀಕ್ಷೆಯ ನಂತರ ತನ್ನ ಸ್ನೇಹಿತ ಅಭಿಲಾಶ್ ನೊಂದಿಗೆ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ನಂದೀಶ್ ಮತ್ತು ಮತ್ತೊಬ್ಬ ಸ್ನೇಹಿತನ ನಗರದ ಕನ್ನಂಪಲ್ಲಿ ಬಳಿ ಅಡ್ಡಗಟ್ಟಿ ಕೆಟ್ಟ ಪದಗಳಿಂದ ಬೈದು ನಂತರ ತನ್ನ ಸ್ನೇಹಿತರಿಗೆ ಕರೆ ಮಾಡಿ 10 ರಿಂದ 15 ಜನರ ಗುಂಪನ್ನು ಕರೆಸಿಕೊಂಡು ಇಬ್ಬರ ಮೇಲೆಯೂ ಹಲ್ಲೆ ನಡೆಸಿದ್ದಾರೆ.

ಇದೆ ವೇಳೆ ಅಭಿಷೇಕ್ ಕುಟುಂಬದ ಸ್ನೇಹಿತರು ಸ್ಥಳಕ್ಕೆ ಬಂದು ಗುಂಪನ್ನು ಪ್ರಶ್ನಿಸಿದ ವೇಳೆ ಅವರ ಮೇಲೆಯೂ ಹಲ್ಲೆಗೆ ಮುಂದಾಗಿದ್ದಾರೆ. ಇದೇ ವೇಳೆ ವ್ಯಕ್ತಿಯ ಬಳಿ ಇದ್ದ ಚೈನ್ ಸಹಾ ಕಳುವಾಗಿದ್ದು ನಂತರ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡು ಪೊಲೀಸರಿಗೆ ದೂರು ನೀಡಿದ್ದಾರೆ.

ಇನ್ನು ಘಟನೆಗೆ ಸಂಬಂಧಿಸಿದಂತೆ ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೋಷಕರು ಮನವಿ ಮಾಡಿದ್ದಾರೆ.

ಘಟನೆ ವಿವರ

ನಾನು ಚಿಂತಾಮಣಿ ನಗರದ ಖಾಸಗಿ ಕಾಲೇಜಿನಲ್ಲಿ ಡಿ.26 ರಂದು ಫೈನಾನ್ಸಿಯಲ್ ಅಕೌಂಟಿಂಗ್ ಪರೀಕ್ಷೆ ಬರೆಯಲು ಚಿಂತಾಮಣಿಗೆ ಬಂದು ಕಾಲೇಜಿಗೆ ಬೆಳಗ್ಗೆ 9:30 ಪ್ರಾರಂಭವಾದ ಪರೀಕ್ಷೆಗೆ ಹೋಗಿ ಪರೀಕ್ಷೆ ಬರೆಯುತ್ತಿದ್ದಾಗ, ಚಿಂತಾಮಣಿಯ ಶಾಂತಿ ನಗರದ ವಾಸಿ ನಂದೀಶ್ ಸಹ ಪರೀಕ್ಷೆ ಬರೆಯುತ್ತಿದ್ದು, ಆತನು ನಾನು ಬರೆಯುತ್ತಿದ್ದ ಉತ್ತರಗಳನ್ನು ತೋರಿಸುವಂತೆ ಕೇಳಿದರು ನಾನು ತೋರಿಸಲಿಲ್ಲ ಎಂದು ಗಾಯಾಳು ಅಭಿಷೇಕ್ ಹೇಳಿದ್ದಾರೆ.

ಪರೀಕ್ಷೆ ಮುಗಿದ ನಂತರ ನಾನು ಮತ್ತು ಕನ್ನಂಪಲ್ಲಿ ಗ್ರಾಮದ ನನ್ನ ಸ್ನೇಹಿತ ಅಭಿಲಾಷ್ ರವರು ಮಧ್ಯಾಹ್ನ ಪ್ರಾರಂಭವಾದ ಮತ್ತೊಂದು ವಿಷಯವನ್ನು ಬರೆದುಕೊಂಡು ಇಬ್ಬರು ಅಭಿಲಾಷ್ ದ್ವಿಚಕ್ರ ವಾಹನದಲ್ಲಿ ಅಭಿಲಾಷ್ ಮನೆಗೆ ಹೋಗುತ್ತಿದ್ದಾಗ, ನಂದೀಶ್ ಮತ್ತು ಆತನ ಜೊತೆಯಲ್ಲಿ ಬಂದು ಇನ್ನಿಬ್ಬರು, ನಮ್ಮನ್ನು ನಿಲ್ಲಿಸಲು ಕೇಳಿದಾಗ ನಾವು ನಿಲ್ಲಿಸದೆ ಹಾಗೆಯೇ ಹೋಗುತ್ತಿದ್ದಾಗ ನಂದೀಶ್ ನನ್ನನ್ನು ಕೆಟ್ಟ ಪದಗಳಿಂದ ನಿಂದಿಸಿ ನನಗೆ ಪರೀಕ್ಷೆಯಲ್ಲಿ ತೋರಿಸು ಎಂದು ಕೇಳಿದರೆ ತೋರಿಸಲಿಲ್ಲ. ನಿನಗೆ ತೋರಿಸುತ್ತೇನೆ ನೋಡು ಎಂದು ಬೈದುಕೊಂಡು ನಮ್ಮ ಹಿಂದೆಯೇ ಬಂದು ಬರುತ್ತಿದ್ದ ಸಮಯದಲ್ಲಿ ನಂದೀಶ್ ಯಾರಿಗೂ ಫೋನ್ ಮಾಡಿಕೊಂಡು ಆತನ ಜೊತೆಗೆ ಸುಮಾರು 10 ರಿಂದ 15 ಜನರನ್ನು ಸಂಜೆ ಸುಮಾರು 5:00 ಗಂಟೆಗೆ ಕನ್ನಂಪಲ್ಲಿ ಸರ್ಕಲ್ ಬಳಿಗೆ ಕರೆಸಿ ಕೊಂಡು ನಾವು ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಅಡ್ಡಗಟ್ಟಿ ಅಭಿಲಾಷೆಗೆ ಪಕ್ಕಕ್ಕೆ ತಳ್ಳಿ ನಂದೀಶ್ ನನಗೆ ಆತನ ಕೈಗೆ ಹಾಕಿಕೊಂಡಿದ್ದ ಕಡಗ ತೆಗೆದುಕೊಂಡು ನನ್ನ ತಲೆಯ ಹಿಂಭಾಗದ ಎಡ ಭಾಗಕ್ಕೆ ಹೊಡೆದು ಗಾಯ ಪಡಿಸಿದನು. ನಂತರ ಎಲ್ಲರೂ ಕೈಗಳಿಂದ ನನ್ನ ಮೈ ಮೇಲೆ ಹೊಡೆದು ಕಾಲುಗಳಿಂದ ಒದ್ದು ನೋವುಂಟು ಮಾಡಿದರು, ನಂತರ ಗುಂಪಿನಲ್ಲಿದ್ದ ಯಾರೋ ಒಬ್ಬ ಕಲ್ಲಿನಿಂದ ನನ್ನ ಎಡಕಣ್ಣಿನ ಕೆಳಗೆ ಹೊಡೆದು ಗಾಯಪಡಿಸಿದನು ಎಂದು ತಿಳಿಸಿದ್ದಾನೆ.

ಆಗ ಅಡ್ಡ ಬಂದ ಅಭಿಲಾಷೆಗೆ ಯಾರೋ ಒಬ್ಬರು ಅವರ ಕೈಯಲ್ಲಿದ್ದ ಕಡಗದಿಂದ ಬಲಗಣ್ಣಿನ ಬಳಿ ಹೊಡೆದು ರಕ್ತ ಗಾಯ ಪಡಿಸಿದನು, ಮತ್ತೆ ನಂದೀಶ್ ಮತ್ತು ಇತರರು ಅಭಿಲಾಶ್ ಬಲಕೈಗೆ ಮತ್ತು ಮೈಮೇಲೆ ಕೈಗಳಿಂದ ಹೊಡೆದು ಕಾಲುಗಳಿಂದ ಒದು ನೋವುಂಟು ಮಾಡಿದರು. ಆಗ ನಾನು ನಮ್ಮ ತಂದೆಗೆ ಅಭಿಲಾಷ್ ಫೋನ್ ನಿಂದ ಫೋನ್ ಮಾಡಿ ಗಲಾಟೆ ಬಗ್ಗೆ ತಿಳಿಸಿದಾಗ ನಮ್ಮ ತಂದೆ ಚಿಂತಾಮಣಿ ಶಂಕರಣ್ಯ ಫೋನ್ ನಂಬ‌ರ್ ಕೊಟ್ಟು ಅವರಿಗೆ ಫೋನ್ ಮಾಡಲು ತಿಳಿಸಿದರು. ಅದರಂತೆ ಶಂಕರಣ್ಯ ಅಲ್ಲಿಗೆ ಕೂಡಲೇ ಬಂದಾಗ ಶಂಕರಣ್ಯ ಅವರಿಗೆ ಏಕೆ ಗಲಾಟೆ ಮಾಡಿದ್ದು ಎಂದು ಕೇಳುತ್ತಿದ್ದಂತೆ ನಂದೀಶ್ ಹಾಗೂ ಇತರರು ಕಬ್ಬಿಣದ ರಾಡ್ ನಿಂದ ಮೈ ಮೇಲೆ ಹೊಡೆದು ಎಡ ಕೈಗೆ ಅದೇ ರಾಡ್ ನಿಂದ ಹೊಡೆದು ಗಾಯ ಪಡಿಸಿದರು. ನಂತರ ಗುಂಪಿನಲ್ಲಿದ್ದವರು ಎಲ್ಲರೂ ಸೇರಿಕೊಂಡು ಹೊಟ್ಟೆಗೆ, ಎಡ ಕೈಗೆ, ಮುಖದ ಮೇಲೆ, ಕೈಗಳಿಂದ ಹೊಡೆದು ಕಾಲುಗಳಿಂದ ಒದ್ದು ಊತದ ನೋವಿನ ಗಾಯಗಳನ್ನು ಪಡಿಸಿದರು. ನಮಗೆ ಪ್ರಾಣಬೆದರಿಕೆ ಹಾಕಿದರು ಅಷ್ಟರಲ್ಲಿ ಅಲ್ಲಿಯೇ ಇದ್ದ ಕನ್ನಂಪಲ್ಲಿ ಗ್ರಾಮದ ಮಂಜುನಾಥ್ ವೆಂಕಟೇಶಪ್ಪ ಮತ್ತು ರಘು ಬಂದು ಗಲಾಟೆ ಬಿಡಿಸಿದರು ಎಂದು ಹೇಳಿದ್ದಾರೆ.

ನಾನು ಪರೀಕ್ಷೆಯಲ್ಲಿ ನಂದೀಶನಿಗೆ ಉತ್ತರಗಳನ್ನು ತೋರಿಸಲಿಲ್ಲ ಎಂದು ದ್ವೇಷದಿಂದ ನಮ್ಮನ್ನು ಅಡ್ಡಗಟ್ಟಿ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿದ ನಂದೀಶ್ ಮತ್ತು ಗುಂಪು ಕಟ್ಟಿಕೊಂಡು ಬಂದಿದ್ದ ಇತರರು ಮೇಲೆ ಕಾನೂನು ರೀತಿಯ ಕ್ರಮ ಜರಗಿಸಬೇಕೆಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!