ಕನ್ನಡ ಅಧ್ಯಾಪಕರುಗಳು ಬೇರೆ ವಿಷಯಗಳ ಅಧ್ಯಾಪಕರುಗಳಿಗೆ ಹೋಲಿಕೆ ಮಾಡಿದರೆ ಮಾದರಿ ಎನ್ನಬಹುದು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಮುನಿನಾರಾಯಣಪ್ಪ ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊಸಕೋಟೆ ಹಾಗೂ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕನ್ನಡ ಅಧ್ಯಾಪಕರ ಒಕ್ಕೂಟದ ಸಹಯೋಗದಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರೊಫೆಸರ್ ತಿಮ್ಮರಾಯಪ್ಪ ಅವರು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಪರೀಕ್ಷಾ ಮಂಡಳಿಯ ಅಧ್ಯಕ್ಷರಾಗಿ 3 ವರ್ಷಗಳ ಕಾಲ ಪ್ರಶ್ನೆ ಪತ್ರಿಕೆ ತಯಾರಿ, ಮೌಲ್ಯಮಾಪನ ಕಾರ್ಯಗಳನ್ನು ಸಕಾಲಕ್ಕೆ ನೆರವೇರಿಸಿ , ಇವರು ಹಿರಿಯರಲ್ಲಿ ಹಿರಿಯರಾಗಿ, ಕಿರಿಯರಲ್ಲಿ ಕಿರಿಯರಾಗಿ ಅಜಾತಶತ್ರುವಾಗಿ ತಮ್ಮ ಸೇವೆಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ, ಸದ್ಯ ಪರೀಕ್ಷಾ ಮಂಡಳಿಯ ಸದಸ್ಯರಾಗಿ ಮುಂದುವರಿದಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಡಾ. ಚೆಲುವನಾರಾಯಣ, ಡಾ.ಈರಣ್ಣ,ಡಾ. ಅಂಜನೇಯರೆಡ್ಡಿ, ಡಾ.ಅಶ್ವಥ್ ನಾರಾಯಣ್, ಡಾ. ವಿಜಯೇಂದ್ರ, ಡಾ. ಕೃಷ್ಣಪ್ಪ,ಡಾ.ಎಂ ಚಿಕ್ಕಣ್ಣ, ಪ್ರವೀಣ್, ಕುಬೇರಗೌಡ, ಶೆಟ್ಟಿನಾಯಕ, ನಾಗೇಶ್, ದೇವರಾಜ ಎಂ ಸೇರಿದಂತೆ ಮತ್ತಿತರರು ಹಾಜರಿದ್ದರು.