ಆಮ್ಲಜನಕ ನೀಡುವ ಸಸಿಗಳನ್ನು ನೆಡಬೇಕು, ಪರಿಸರ ನಾಶಕ್ಕೆ ನಾವೆಂದೂ ಕಾರಣರಾಗಬಾರದು. ಪರಿಸರ ಉಳಿದರೆ ಮಾತ್ರ ನಾವು ಉಳಿಯಲು ಸಾಧ್ಯ ಎಂದು ರುಡ್ ಸೆಟ್ ಸಂಸ್ಥೆ ನಿರ್ದೇಶಕ ಜೆ.ಆನಂದ್ ತಿಳಿಸಿದರು.
ಇಂದು ವಿಶ್ವ ಪರಿಸರದ ದಿನದ ಅಂಗವಾಗಿ ನೆಲಮಂಗಲ ತಾಲ್ಲೂಕಿನ ಅರಿಶಿನಕುಂಟೆಯಲ್ಲಿರುವ ರುಡ್‌ಸೆಟ್ ಸಂಸ್ಥೆಯಲ್ಲಿ ಸಸಿಯನ್ನು ನೆಟ್ಟು, ನೀರೆರೆದು ಪರಿಸರ ದಿನ ಆಚರಣೆ ಮಾಡಿ ಮಾತನಾಡಿದ ಅವರು, ಪರಿಸರದ ಸಬಲತೆಗಾಗಿ ಗಿಡಮರಗಳನ್ನು ನೆಟ್ಟು, ಪೋಷಿಸಿ, ಕಡಿಯದೆ ಸಂರಕ್ಷಿಸಬೇಕು ಎಂದರು.
‘ಹಸಿರೇ ಉಸಿರು, ಕಾಡು ಬೆಳಿಸಿ, ನಾಡು ಉಳಿಸಿ, ವೃಕ್ಷ ಮಾತೆಯ ಪೋಷಣೆಗೆ ಎಲ್ಲರೂ ಕೈಜೋಡಿಸೋಣ, ಭೂಮಿಯ ತಾಪಮಾನ ತಗ್ಗಿಸೋಣ’.
‘ಜವಾಬ್ಧಾರಿಯುತ ನಾಗರೀಕರಾದ ನಾವು
ಪರಿಸರ ದಿನಾಚರಣೆಯ ಅಂಗವಾಗಿ ಇಂದು ಪ್ರಮಾಣೀಕರಿಸುವುದೇನೆಂದರೆ, ಪರಿಸರದ ಸಬಲತೆಗಾಗಿ ಗಿಡಮರಗಳನ್ನು ನೆಟ್ಟು, ಪೋಷಿಸಿ, ಕಡಿಯದೆ ಸಂರಕ್ಷಿಸುತ್ತೇವೆ. ಅಂತೇಯೇ ಪರಿಸರದ ನಾಶಕ್ಕೆ ಕಾರಣವಾಗುವ ಯಾವುದೇ ಕೃತ್ಯಗಳಲ್ಲಿ ಭಾಗಿಯಾಗದೇ ಪರಿಸರ ರಕ್ಷಣೆಗೆ ಕೈಜೋಡಿಸುತ್ತೇವೆಂದು’ ಈ ಮೂಲಕ ಪ್ರಮಾಣ ಮಾಡುತ್ತಿದ್ದೇವೆ ಎಂದು ಪರಿಸರ ಸಂರಕ್ಷಣೆ ಕುರಿತ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಾಯಿತು.
ಈ ಸಂದರ್ಭದಲ್ಲಿ ಸಿಸಿ ಟಿವಿ ಕ್ಯಾಮೆರಾ ತರಬೇತಿಯ ಪ್ರಶಿಕ್ಷಣಾರ್ಥಿಗಳು, ಅತಿಥಿ ಉಪನ್ಯಾಸಕ ಗುರುರಾಜ್ ಹಾಗೂ ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.