ಸ್ವಚ್ಛ ನಗರಸಭೆ ಖ್ಯಾತಿಯ ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯ ದೇವರಾಜನಗರ ವಾರ್ಡ್ ಕಸದ ರಾಶಿಗಳಿಂದ ಗಬ್ಬೆದು ನಾರುತ್ತಿರುವ ಕುರಿತು ಪಬ್ಲಿಕ್ ಮಿರ್ಚಿ ವರದಿ ಮಾಡಿ ನಗರಸಭೆ ಪೌರಾಯುಕ್ತರ ಗಮನಕ್ಕೆ ತರಲಾಗಿತ್ತು. ಇದಕ್ಕೆ ಸ್ಪಂಧಿಸಿದ ಪೌರಾಯುಕ್ತರು ಕೂಡಲೇ ಸ್ವಚ್ಛತಾ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿ ಕಸದ ರಾಶಿಯನ್ನು ತೆರವುಗೊಳಿಸಿದ್ದಾರೆ. ಇದಕ್ಕೆ ವಾರ್ಡ್ ನ ನಿವಾಸಿಗಳು ನಗರಸಭೆ ಪೌರಾಯುಕ್ತರು ಹಾಗೂ ಸ್ವಚ್ಛತಾ ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದ್ದಾರೆ.
ವಾರ್ಡ್ ನಲ್ಲಿರುವ ಅಂಗನವಾಡಿ ಪಕ್ಕದಲ್ಲಿ ಕಸದರಾಶಿ ಇತ್ತು, ಅಂಗನಾಡಿಗೆ ಬರುವ ಮಕ್ಕಳು ಮುಗು ಮುಚ್ಚಿಕೊಂಡು ಶಾಲೆಯಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿತ್ತು. ಎಚ್ಚೆತ್ತ ನಗರಸಭೆ ಕಸದ ರಾಶಿಯನ್ನು ತೆರವುಗೊಳಿಸಲಾಗಿದೆ.