ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪತ್ರಕರ್ತ ಪ್ರದೀಪ್ ಕುಮಾರ್ ಆರ್ ಅವರು ಗ್ರಾಮೀಣಾಭಿವೃದ್ಧಿ ಮತ್ತು ಮಲ್ಟಿ ಮೀಡಿಯ ಎಂಬ ವಿಷಯದಲ್ಲಿ ಮಂಡಿಸಿದ ಮಹಾ ಪ್ರಬಂಧಕ್ಕೆ ಅಮೇರಿಕಾದ ಬೋಸ್ಟನ್ ಇಂಪೀರಿಯಲ್ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ.
ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮುನ್ನಡೆಸುವಲ್ಲಿ, ಸಮುದಾಯಗಳೊಂದಿಗೆ ಯುವಕರನ್ನು ಸಬಲೀಕರಣಗೊಳಿಸುವಲ್ಲಿ ಮತ್ತು ಸುಸ್ಥಿರ ಭಾರತದ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ತಮ್ಮ ಅವಿರತ ಪ್ರಯತ್ನಗಳ ಮೂಲಕ ತಮ್ಮನ್ನು ತಾವು ಗುರುತಿಸಿಕೊಂಡಿದ್ದರ ಪರಿಣಾಮವಾಗಿ ಈ ಪ್ರತಿಷ್ಠಿತ ಡಾಕ್ಟರೇಟ್ ಪದವಿಯನ್ನು ನೀಡಲಾಗಿದೆ.
ಮುಂದಿನ ತಿಂಗಳು ಏ.4 ರಂದು ಗೋವಾದಲ್ಲಿ ನಡೆಯಲಿರುವ ವಿಶ್ವ ವಿದ್ಯಾಲಯದ ಘಟಿಕೋತ್ಸವದಲ್ಲಿ ವಿತರಣೆಯಾಗುತ್ತದೆ. ಈ ಪದವಿಯನ್ನು ಪಡೆದಿರುವ ಡಾ. ಪ್ರದೀಪ್ ಕುಮಾರ್ ಆರ್ ಅವರಿಗೆ ದೊಡ್ಡಬಳ್ಳಾಪುರದ ಶಾಸಕರಾದ ಧೀರಜ್ ಮುನಿರಾಜ್, ಆರ್ಥಿಕ ತಜ್ಞರಾದ ಡಾ ಎಂ ಆರ್ ರಂಗನಾಥ, ಅವಧೂತ ಸ್ವಯಂ ಪೂರ್ಣಾನಂದ ಸ್ವಾಮೀಜಿ ಅವರು, ಗ್ಲೋಬಲ್ ಗ್ರೀನ್ ಎನರ್ಜಿ ಪ್ರವೈಟ್ ಲಿಮಿಟೆಡ್‌ನ ನಿರ್ದೇಶಕ ಡಾ.ಪ್ರವೀಣ್ ನಾಯಕ್, ಸಿ ಎಂ ಎನ್ ಐಟಿ ಪ್ರಾಂಶುಪಾಲ ಡಾ ಕುಮಾರ್, ಸನಾತನ ಸೇವಾ ಸಂಘ ಕರ್ನಾಟಕ ಘಟಕದ ಅದ್ಯಕ್ಷರಾದ ನಾರಾಯಣ, ನಿವೃತ್ತ ಮುಖ್ಯ ಪಶು ವೈದ್ಯಾದಿಕಾರಿ ಡಾ ವಿಶ್ವ ನಟೇಶ್, ಕುಮುಟಾದ ಶಂಕರ ನಾರಾಯಣ ದೇವಾಳದ ಪುರೋಹಿತ ಗುರುದಾಸ್ ಭಟ್ ಸೇರಿದಂತೆ ಅನೇಕ ಅಭಿಮಾನಿಗಳು ಶುಭ ಹಾರೈಸಿದ್ದಾರೆ.
ಒಡಿಶಾ: ಗುತ್ತಿಗೆದಾರರಿಂದ ಲಂಚ ಪಡೆಯುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಆಧಾರದ ಮೇಲೆ ಒಡಿಶಾ ವಿಜಿಲೆನ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ,…
ವಿಧಾನ ಪರಿಷತ್ತಿನ ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯ ಆಯ್ಕೆಗೆ ಚುನಾವಣೆ ನಡೆಯುತ್ತಿದೆ. ಈ ಚುನಾವಣೆಯಲ್ಲಿಯೂ ಹಣದ ಹೊಳೆ ಹರಿಯುತ್ತಿದೆ. ಇದು ಹೊಸದೇನು…
ನೂತನ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ ದಿನವೇ ಡಾ. ಸುಧಾ ಯಾದವ್ ಅವರು ಇಂಧನ ಮತ್ತು ಪ್ರವಾಸೋದ್ಯಮ ಸಚಿವರಾದ ಕೆ.ಜೆ. ಜಾರ್ಜ್…
ದೊಡ್ಡಬಳ್ಳಾಪುರ: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ನಡೆದ ತಾಲ್ಲೂಕು ಮಟ್ಟದ ಯುವ ಸಂಸತ್ತು ಅಣಕು ಸ್ಪರ್ಧೆಯಲ್ಲಿ ಶ್ರೀ ಕೊಂಗಾಡಿಯಪ್ಪ ಕಾನೂನು…
ದೊಡ್ಡಬಳ್ಳಾಪುರ: ತಾಲೂಕಿನ ನಾಗದೇನಹಳ್ಳಿ ಸಮೀಪದ ಗೀತಂ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ತಡರಾತ್ರಿ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್ ಕಟ್ಟಡದ ಆರನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ…
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮುಂಗಾರು ಮಳೆಯ ಏರುಪೇರಿನಿಂದ ಮಳೆಯಾಶ್ರಿತ ಕೃಷಿ ಸಂಕಷ್ಟಕ್ಕೆ ಸಿಲುಕಿದ್ದು, ಜಿಲ್ಲೆಯ ಪ್ರಮುಖ ಆಹಾರ ಬೆಳೆಯಾದ ರಾಗಿಯನ್ನು…