ದೇವನಹಳ್ಳಿ: ಪಡಿತರ ವಿತರಕರು ಕೆಲ ಸಮಸ್ಯೆಗಳನ್ನು ತಿಳಿಸಿದ್ದಾರೆ. ಮುಖ್ಯಮಂತ್ರಿಗಳಿಗೆ ತಿಳಿಸಿ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸರಕಾರಿ ಪಡಿತರ ವಿತರಕರ ಸಂಘದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರದಲ್ಲಿ ಮಾತನಾಡಿದ ಅವರು, ನಾನು ಸಚಿವನಾದ ಮೇಲೆ ಪಡಿತರ ವಿತರಕರಿಗೆ ಸ್ವಲ್ಪಮಟ್ಟಿಗೆ ಸಹಾಯ ಮಾಡಲು ಸಾಧ್ಯವಾಗಿದೆ. ಮತ್ತಷ್ಟು ಹೆಚ್ಚಿನ ಬೇಡಿಕೆಯನ್ನು ರಾಜ್ಯಾಧ್ಯಕ್ಷ ಕೇಳಿದ್ದಾರೆ. ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಕಡಿಮೆ ಇದೆ ಎಂದು ತಿಳಿಸಿದ್ದಾರೆ. ಜನ ಕೂಡ ಸಕ್ಕರೆ, ಬೇಳೆ ಬೇಕು ಎಂದು ಕೇಳಿದ್ದಾರೆ. ಅದರ ಪ್ರಸ್ತಾವನೆ ಸರಕಾರದ ಮುಂದಿದೆ. ಅದನ್ನು ಕೊಡುವ ಚಿಂತನೆ ಇದೆ. ವಿತರಕರು ಗ್ರಾಹಕರು ಮೆಚ್ಚುವಂತೆ ಕೆಲಸ ಮಾಡಿ ಎಲ್ಲರು ವಿದ್ಯಾವಂತರಿರುವುದಿಲ್ಲ. ಆಹಾರ ವಿತರಣೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಿ ನಿಮ್ಮ ಕಷ್ಟಸುಕಗಳಿಗೆ ಸ್ಪಂದಿಸುತ್ತೇವೆ. ಗ್ರಾಕರಿಂದ ಯಾವುದೇ ದೂರು ಬರದಂತೆ ವಿತರಣೆ ಮಾಡಿ. ಗುಣಮಟ್ಟದ ರಾಗಿ ಜೋಳ ಶುದ್ದೀಕರಿಸಿ ನೀಡಲು ಅಧಿಕಾರಿಗಳೊಂದಿಗೆ ಸಭೆ ಮಾಡಿ ಕ್ರಮವಹಿಸಲಾಗಿದೆ. ವಿತರಕರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಸರಕಾರಿ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಕೃಷ್ಣಪ್ಪ ಮಾತನಾಡಿ ಉಚಿತ ಭಾಗ್ಯಗಳಲ್ಲಿ ಮಹತ್ವಕಾಂಕ್ಷಿ ಯೋಜನೆಯಾದ ಅನ್ನ ಭಾಗ್ಯ ಯೋಜನೆಯನ್ನು ಸಮಾಜದ ಯಾವ ವ್ಯಕ್ತಿಯು ಸಹ ಹಸಿವಿನಿಂದ ಇರಬಾರದೆಂಬ ಸರ್ಕಾರದ ಯೋಜನೆಯನ್ನು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ನ್ಯಾಯಬೆಲೆ ಅಂಗಡಿ ಮಾಲೀಕರು ಮತ್ತು ವಿ.ಎಸ್.ಎಸ್.ಎನ್. ಕಾರ್ಯದರ್ಶಿಗಳು ಹಲವು ನ್ಯಾಯಯುತ ಬೇಡಿಕೆಗಳಾದ ನ್ಯಾಯಬೆಲೆ ಅಂಗಡಿಗಳನ್ನು ನಿರ್ವಹಿಸುತ್ತಿರುವ ನಮಗೆ ಕ್ವಿಂಟಾಲಿಗೆ 50 ರೂಪಾಯಿ ನೀಡುತ್ತಿದ್ದು ಕ್ವಿಂಟಾಲಿಗೆ ಕಮಿಷನ್ 300 ಗಳಿಗೆ ಏರಿಸಬೇಕು, ಅಹಾರ ಭದ್ರಾತಾ ಯೋಜನೆಯಿಂದ ವಂಚಿತರಾಗುತ್ತಿರುವ ಒಬ್ಬರು ಇಬ್ಬರು ವಯಸ್ಸಾದವರು, ಅಂಗವಿಕಲರು, ರೋಗಿಗಳಿಗೆ ಆಹಾರ ಧಾನ್ಯ ತೆಗೆದು ಕೊಳ್ಳಲು ಕಾರ್ಡುಗಳಿಗೆ ವಿನಾಯಿತಿ ನೀಡಬೇಕು ಅಥವಾ ಓ.ಟಿ.ಪಿ ಮುಖಾಂತರ ಆಹಾರ ಧಾನ್ಯ ನೀಡಲು ಅವಕಾಶ ನೀಡಬೇಕು, ಇ ಕೆ.ವೈ.ಸಿ ಮಾಡಿದ ಹಣ 5 ವರ್ಷಗಳಿಂದ ಬಾಕಿ ಇದ್ದು ಈ ಹಣವನ್ನು ಬಿಡುಗಡೆ ಮಾಡಿಸಿ ಕೊಡಬೇಕು. ಸರ್ವರ್ ಸಮಸ್ಯೆ ಸರಿ ಪಡಿಸಿ ಕೊಡಬೇಕು. ವಿತರಣೆ ಸಮಯದಲ್ಲಿ ದಾಸ್ತಾನು ಮುಗಿದ ನಂತರ ವಿತರಣೆ ಮಾಡಲು ಅಗದಂತೆ ಸಾಫ್ಟ್ವೇರ್ ಆಫ್‌ಡೇಟ್ ಮಾಡಬೇಕು. ಸಗಟು ಮಳಿಗೆಯಲ್ಲಿ ಎಲೆಟ್ರಾನಿಕ್ ಯಂತ್ರ ಇಟ್ಟು ಅಲ್ಲೆ ತೂಕ ಮಾಡಿ ಕೊಡಬೇಕು ಎಂದು ಸಗಟು ಮಳಿಗೆಯವರಿಗೆ ನಿರ್ದೇಶನ ನೀಡಬೇಕು. ಪ್ರತಿ ತಿಂಗಳು ವಿತರಣೆ ಮುಗಿದ ನಂತರ ಆಯಾ ತಿಂಗಳ ಕಮೀಷನ್ ಹಣವನ್ನು ಡಿ.ಬಿ.ಟಿ ಮುಖಾಂತರ ಅಯಾ ತಿಂಗಳಲ್ಲೇ ನೀಡಬೇಕು ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಿ ಕೊಡಬೇಕೆಂದು ಮನವಿ ಮಾಡಿದರು.
ಇದೇ ವೇಳೆ 5ನೇ ಹಣಕಾಸು ಆಯೋಗದಾ ಅಧ್ಯಕ್ಷ ನಾರಾಯಣಸ್ವಾಮಿ, ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ರಾಜಣ್ಣ, ತಾಲೂಕು ಅಧ್ಯಕ್ಷ ಸಿ.ಜಗನ್ನಾಥ್, ಸರಕಾರಿ ಪಡಿತರ ವಿತರಕರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ, ತಾಲೂಕು ಅಧ್ಯಕ್ಷ ಸಿ.ಎಸ್.ರಾಜಣ್ಣ, ವೆಂಕಟೇಶಪ್ಪ, ಸಂಘದ ಪದಾಧಿಕಾರಿಗಳು ತಾಲೂಕಿನ ಮುಖಂಡರು ಇದ್ದರು.