ಇವರದ್ದು ಆರತಿಗೊಬ್ಬ ಕೀರ್ತಿಗೊಬ್ಬ ಎಂಬಂತೆ ಇಬ್ಬರು ಮಕ್ಕಳನ್ನು ಪಡೆದಿದ್ದ ಕುಟುಂಬ. ತಂದೆ ಶ್ರೀನಿವಾಸ ರಾವ್ ಪತ್ನಿ ವೆಂಕೂಬಾಯಿ ಮಕ್ಕಳಿಗೆ ಉತ್ತಮ ವಿದ್ಯಾಬ್ಯಾಸ ಕೊಡಿಸಿ ಚೆನ್ನಾಗಿ ಸಾಕಿ ಸಲುಹಿ, ಎದೆ ಎತ್ತರಕ್ಕೆ ಬೆಳೆಸಿದ್ದರು. ಎಸ್ಎಸ್ಎಲ್ಎಸಿ ಓದಿ ಮುಂದೆ ಉತ್ತಮ ಶಿಕ್ಷಣ ಪಡೆಯುವ ದಾರಿಯಲ್ಲಿದ್ದ ವಿದ್ಯಾರ್ಥಿಗಳ ವಿಧಿಯಾಟದ ಲಿಖಿತವೇ ಬೇರೆಯಾಗಿ, ತಂದೆ ತಾಯಿಯ ಕನಸುಗಳು ನುಚ್ಚು ನೂರಾಗಿದೆ. ಮೊದಲ ಮಗ ಗಗನ್ ದುರಾದೃಷ್ಟವಾಶಾತ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದರೆ, ಎರಡನೇ ಮಗ ಧನುಷ್ ರಾವ್ ಪಟಾಕಿ ಸಿಡಿದು ಕೊನೆಯುಸಿರೆಳೆದಿದ್ದಾನೆ.
ಹೌದು ದೊಡ್ಡಬಳ್ಳಾಪುರ ನಗರದ ಮುತ್ತೂರಿನಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಪವರ್ ಲಿಫ್ಟರ್ ವಾಹನದ ಇಂಜಿನ್ ಮೇಲೆ ಇಟ್ಟಿದ್ದ ಪಟಾಕಿಗಳು ಸಿಡಿದು ಸಾವನ್ನಪ್ಪಿದ ಮುತ್ತೂರಿನ ಬಾಲಕ ಧನುಷ್ ರಾವ್ ತಂದೆ ತಾಯಿಯ ದುಃಖವನ್ನು ದೇವರ ಬಲ್ಲ.
ತಂದೆ ಶ್ರೀನಿವಾಸರಾವ್ ಪ್ರತಿದಿನ ಕೂಲಿ ಕೆಲಸ ಮಾಡಿ, ತಾಯಿ ವೆಂಕೂಬಾಯಿ ಗಾರ್ಮೆಂಟ್ಸ್ ನಲ್ಲಿ ದುಡಿದು ಎದೆ ಎತ್ತರಕ್ಕೆ ಬೆಳದ ಮಕ್ಕಳನ್ನ ವಿಧಿಯಾಟದಲ್ಲಿ ಕಳೆದುಕೊಂಡಿದ್ದಾರೆ.
ಇಬ್ಬರು ಗಂಡು ಮಕ್ಕಳಿದ್ದ ಸುಂದರ ಕುಟುಂಬದಲ್ಲಿ ವಿಧಿಯಾಟಗಳು ಜೀವನದ ಸಂತೋಷವನ್ನೆ ಕಸಿದುಕೊಂಡಿವೆ. ಶ್ರೀನಿವಾಸ ದಂಪತಿಗೆ ಇಬ್ಬರು ಗಂಡು ಮಕ್ಕಳು ಮೊದಲ ಮಗ ಗಗನ್ ಕಳೆದ ವರ್ಷ ಕೆರೆಯಲ್ಲಿ ಆಟ ಆಡುವಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಎಸ್ಎಸ್ಎಲ್ ಸಿ ಓದುತ್ತಿದ್ದ ಹುಡುಗನ ಕಳೆದುಕೊಂಡು ನೋವಿನಲ್ಲಿದ್ದ ಕುಂಟಬಕ್ಕೆ ಈ ವರ್ಷ ಗಣೇಶ ಹಬ್ಬ ಮತ್ತೊಂದು ಆಘಾತವನ್ನ ತಂದೊಡ್ಡಿದೆ.
ಮನೆಯ ಬಳಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯ ಮೂರು ದಿನಗಳ ವಿಸರ್ಜನಾ ಮೆರವಣಿಗೆಯಲ್ಲಿ ಖುಷಿಯಿಂದ ಕುಣಿದು ಕುಪ್ಪಳಿಸುತ್ತಿದ್ದ ಸಂತೋಷದಿಂದ್ದ ಎರಡನೇ ಮಗ ಧನುಶ್ ರಾವ್ ಮೇಲೆ ಪಟಾಕಿ ಸಿಡಿದು ಬಾರದ ಲೋಕಕ್ಕೆ ಹೋಗಿದ್ದಾನೆ.
ಮಗನ ಸಾವಿನ ಸುದ್ದಿ ಕೇಳಿ ಕುಸಿದು ಬಿದ್ದ ತಾಯಿ:
ಎರಡನೇ ಮಗನ ಸಾವಿನ ಸುದ್ದಿ ಕೇಳುತ್ತಿದ್ದಂತೆ ತಾಯಿ ವೆಂಕೂಬಾಯಿ ಕುಸಿದು ಬಿದ್ದಿದ್ದಾರೆ. ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ ಬಳಿಕ ಚೇತರಿಕೆ ಕಂಡಿದ್ದಾರೆ. ಕುಟುಂಬಸ್ಥರ ನೋವು ಹೇಳತೀರದ್ದಾಗಿತ್ತು.
ಒಟ್ಟಿನಲ್ಲಿ ಯಾರೋ ಮಾಡಿದ ತಪ್ಪಿನಿಂದಾಗಿ ಮತ್ಯಾರೋ ಅಮಾಯಕ ಮುಗ್ಧ ಜೀವಗಳ ಬಲಿಯಾಗಿವೆ. ವಿಧಿ ಎಷ್ಟು ಕ್ರೂರಿ ಎಂದರೆ…..ಪಾಪ ಆ ಪೋಷಕರಿಗೆ ಎಂದೆಂದಿಗೂ ಮರೆಯಲಾರದ ದುಃಖವನ್ನು ತಂದೊಡ್ಡಿದೆ.