ಪಕ್ಷಿಗಳಿಗೆ ನೂಲುಗಳ ಉರುಳು: ದೊಡ್ಡಬಳ್ಳಾಪುರದ ವಿವಿಧ ಕಡೆಗಳಲ್ಲಿ ಗಾಳಿಪಟದ ದಾರ, ಕಸದಲ್ಲಿ ನೂಲುಗಳಿಂದ ಪಕ್ಷಿಗಳ ಸಾವು: ನಗರ ಭಾಗದಲ್ಲಿ ಹೆಚ್ಚಿನ ಪಕ್ಷಿಗಳಿಗೆ ಸಮಸ್ಯೆ

ದೊಡ್ಡಬಳ್ಳಾಪುರದಲ್ಲಿ ಗಾಳಿಪಟದ ದಾರ, ವ್ಯರ್ಥವಾಗಿ ಎಸೆಯಲಾಗುವ ನೂಲುಗಳು ಪಕ್ಷಿಗಳಿಗೆ ಮಾರಕವಾಗಿ ಪರಿಣಮಿಸಿದೆ. ಸಾಕಷ್ಟು ಪಕ್ಷಿಗಳು ಇದರಿಂದ ಸಮಸ್ಯೆಗೆ ಸಿಲುಕುತ್ತಿದೆ.

ದೊಡ್ಡಬಳ್ಳಾಪುರದಲ್ಲಿ ಕೈಗಾರಿಕೆಗಳು ಬೆಳೆದಂತೆ ಮರಗಳ ಸಂಖ್ಯೆ, ಕೃಷಿವಲಯದ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದ ಪಕ್ಷಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬರುತ್ತಿದೆ. ಅದರಲ್ಲೂ ನಗರಭಾಗದಲ್ಲಿ ಪಕ್ಷಿಗಳ ಪ್ರಮಾಣದಲ್ಲಿ ಸಾಕಷ್ಟು ಕಡಿಮೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪಕ್ಷಿಗಳ ಸಂತತಿ ಉಳಿವಿಗೆ ಎಲ್ಲರೂ ಪ್ರಯತ್ನಿಸಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಅನುಪಯುಕ್ತವಾದ ನೂಲುಗಳನ್ನು ಕೆರೆಯಂಗಳದಲ್ಲಿ , ಹರಿದ ಬಲೆಗಳನ್ನು ಕೆರೆಗಳ ಬಳಿ ಹಾಕುವುದರಿಂದ ಹಾಗೂ ಗಾಳಿಪಟ ಹಾರಿಸುವುದ ಪರಿಣಾಮವಾಗಿ ಪಕ್ಷಿಗಳಿಗೆ ಸಮಸ್ಯೆಯಾಗುತ್ತಿದೆ. ಇಂತಹ ನೂಲುಗಳು ಪಕ್ಷಿಗಳ ಕಾಲು, ರೆಕ್ಕೆ, ಕೊಕ್ಕಿಗೆ ಸಿಲುಕಿ ಸಮಸ್ಯೆಗೆ ಗುರಿಯಾಗಿರುವ ಕೆಲವೆಡೆ ಸಾವನಪ್ಪಿರುವ ಘಟನೆಗಳು ನಡೆದಿದೆ. ಇದರ ಬಗ್ಗೆ ಇನ್ನಾದರೂ ಎಚ್ಚೆತ್ತುಕೊಂಡು ಪಕ್ಷಿಗಳ ಸಂತತಿಯ ಉಳಿವಿಗಾಗಿ ಎಲ್ಲರೂ ಕೆಲಸ ಮಾಡಬೇಕಿದೆ.

ನೂಲುಗಳ ಸಂಕಷ್ಟ
ಗಾಳಿಪಟದ ದಾರಗಳು ಸಿಲುಕಿ ಮನುಷ್ಯರಿಗೆ ಸಮಸ್ಯೆಯಾದ ಸಾಕಷ್ಟು ಉದಾಹರಣೆ ಇವೆ. ಇದೇ ರೀತಿಯಲ್ಲಿ ಗಾಳಿಪಟ ದಾರಕ್ಕೆ ಸಿಲುಕಿ ಪಕ್ಷಿಗಳ ಕತ್ತು , ರೆಕ್ಕೆಗಳು ಕತ್ತರಿಸಿ ಹೋಗಿ ಅವುಗಳ ಸಾವನಪ್ಪಿರುವ ಅನೇಕ ಘಟನೆಗಳಿವೆ. ಇನ್ನೂ ಮೀನಿನ ಬಲೆಯ ಚೂರುಗಳು, ಸೀರೆಗಳ ಅನುಪಯುಕ್ತ ನೂಲುಗಳು ಈ ಪಕ್ಷಿಗಳ ಕಾಲು, ಕೊಕ್ಕು, ರೆಕ್ಕೆಗೆ ಸಿಲುಕಿ ಅವುಗಳು ಹಾರಲಾರದೆ, ಆಹಾರ ಸೇವಿಸಲಾಗದೆ ಪರದಾಡುವ ಪರಿಸ್ಥಿತಿಯಿದೆ. ಕೆಲವು ದಿನಗಳವರೆಗೆ ಇದು ತೆಗೆಯಲಾಗದಿದ್ದಾಗ ಅವುಗಳು ಸಾವನಪ್ಪಿರುವ ಉದಾಹರಣೆಗಳನ್ನು ಕೂಡ ಕಾಣಬಹುದಾಗಿದೆ.

ಏನಾಗಬೇಕು?
* ಗಾಳಿಪಟ ಹಾರಿಸುವ ಅಪಾಯದ ಬಗ್ಗೆ ಅರಿವು
* ಪಕ್ಷಿಗಳ ಮಹತ್ವದ ಬಗ್ಗೆ ಜಾಗೃತಿ
* ನೂಲುಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು.
* ಹರಿದ ಬಲೆಗಳನ್ನು ಕೆರೆಯಂತಹ ಜಲಮೂಲಗಳಿಗೆ ಹಾಕುವುದಕ್ಕೆ ಕಡಿವಾಣ ಹಾಕಬೇಕು.

ದೊಡ್ಡಬಳ್ಳಾಪುರ ನಗರದಲ್ಲಿ ಸಾಕಷ್ಟು ಪಕ್ಷಿಗಳು ಗಾಳಿಪಟದ ದಾರ, ನೂಲಿನಿಂದ ಸಾವನಪ್ಪುತ್ತಿವೆ. ಇದರಿಂದ ಸಾಕಷ್ಟು ಪಕ್ಷಿಗಳು ಮರೆಯಾಗುತ್ತಿದ್ದು, ಅವುಗಳ ರಕ್ಷಣೆಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕಿದೆ- ಚಿದಾನಂದಮೂರ್ತಿ ಆಧ್ಯಕ್ಷ, ಯುವಸಂಚಲನ ಸಂಘಟನೆ.

Leave a Reply

Your email address will not be published. Required fields are marked *

error: Content is protected !!