ಪಂಪ್ ಸೆಟ್ ಗಳಿಗೆ ಹಗಲಿನಲ್ಲಿ ವಿದ್ಯುತ್ ನೀಡಲು ಮನವಿ

ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ಹೋಬಳಿ ಕೇಂದ್ರದ  ರೈತರು ತಮ್ಮ ನೀರಾವರಿ ಬೆಳೆಗೆ ರಾತ್ರಿ ವೇಳೆಯಲ್ಲಿ ವಿದ್ಯುತ್ ನೀಡುತ್ತಿರುವುದರ ವಿರುದ್ಧ ಬೇಸತ್ತು ಹಗಲಿನಲ್ಲಿ ವಿದ್ಯುತ್ ನೀಡಲು ಮನವಿ ಸಲ್ಲಿಸಿದರು.

ಪ್ರಸ್ತುತ ರೈತರ ಪಂಪ್ಸೆಟ್ ಗಳಿಗೆ ತಡೆರಹಿತವಾಗಿ 5 ಗಂಟೆಗಳ ಕಾಲ ರಾತ್ರಿ ವೇಳೆಯಲ್ಲಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಆದರೆ ರಾತ್ರಿಯ ಸಮಯದಲ್ಲಿ ಬೆಳೆಗಳಿಗೆ ನೀರು ಹರಿಸಲು ಆಗುತ್ತಿಲ್ಲ, ಮತ್ತು ಇತ್ತೀಚೆಗೆ ಚಿರತೆಗಳ ಕಾಟ ಹೆಚ್ಚಾಗುತ್ತಿರುವುದರಿಂದ ತೋಟಗಳ ಕಡೆ ಹೋಗಲು ಭಯಭೀತರಾಗಿದ್ದೇವೆ ಎಂದು ರೈತರು ತಮ್ಮ ಅಳಲನ್ನ ತೋಡಿಕೊಂಡರು.

ಹಗಲಿನಲ್ಲಿ  5 ಗಂಟೆ ನಿರಂತರ ಕರೆಂಟ್ ನೀಡಲು ಸಾಧ್ಯವಾಗದಿದ್ದರೆ, 5 ಗಂಟೆಗಳ ಕಾಲ ಕೊಡುತ್ತಿರುವ ವಿದ್ಯುತ್ತನ್ನು ಬೆಳಗ್ಗೆ 3:00 ಗಂಟೆ ಕಾಲ ರಾತ್ರಿ 2 ಗಂಟೆಗಳ ಕಾಲ ರಾತ್ರಿ ಕೊಡುವಂತೆ ಮತ್ತೆ 6:00 ಗಂಟೆ ಕೊಡುವ ಸಿಂಗಲ್  ಕರೆಂಟ್ ಕೊಡುವುದು ತೆಗೆಯುವುದು ಮಾಡುತ್ತಿದ್ದೀರಾ ಸಿಂಗಲ್  ಕರೆಂಟ್ ಅನ್ನು  ನಿರಂತರವಾಗಿ ಕೊಡಬೇಕು ಎಂದು ರೈತರು ತೂಬಗೆರೆ  ಬೆಸ್ಕಾಂ ಜೆ‌.ಇ ರೇಣುಕಾರಾಧ್ಯ ರವರಿಗೆ ಮನವಿ ಮಾಡಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ದೇವೇಂದ್ರ ಸ್ವಾಮಿ, ಹಾಲಿನ ಡೈರಿ ಸದಸ್ಯ ಅವಲಪ್ಪ, ಫ್ಲೋರಿಕಲ್ಚರ್ ರೈತ ಸುನಿಲ್, ಪಿಳ್ಳಿ ವೆಂಕಟೇಶ್, ಮಂಜುನಾಥ್ ಸೇರಿದಂತೆ‌ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *