ಪಂದ್ಯಶ್ರೇಷ್ಠದ 4.15 ಲಕ್ಷ ರೂಪಾಯಿ ಬಹುಮಾನವನ್ನು ಗ್ರೌಂಡ್ ಸಿಬ್ಬಂದಿಗೆ ನೀಡಿದ ಸಿರಾಜ್!: ಭೇಷ್ ಎಂದ ನೆಟ್ಟಿಗರು

ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಎಲ್ಲಾ ಪಂದ್ಯಗಳಿಗೆ ಮಳೆ ಭೀತಿ ಎದುರಾಗಿತ್ತು ಹಾಗೆಯೇ ಕೆಲವು ಪಂದ್ಯಗಳು ಮಳೆಗೆ ಆಹುತಿಯಾಗುವ ಎಲ್ಲಾ ಲಕ್ಷಣಗಳು ಇದ್ದವು ಆದರೆ ಆ ಭೀತಿ ದೂರ ಮಾಡಿದ್ದು ಮೈದಾನದ ಸಿಬ್ಬಂದಿ.

ನಿಜವಾದ ಹೀರೋಗಳಾಗಿ ಮಿಂಚಿ ಎಲ್ಲರ ಗಮನ ಸೆಳೆದು ಪ್ರಶಂಸೆಗೆ ಪಾತ್ರರಾಗಿದ್ದ ಸಿಬ್ಬಂದಿ ಶ್ರಮದ ಫಲವಾಗಿ ಎಲ್ಲಾ ಪಂದ್ಯಗಳು ಸುಸೂತ್ರವಾಗಿ ನಡೆಯಲು ಸಾಧ್ಯವಾಯಿತು, ಪ್ರತೀ ದಿನ ಮಳೆಯಾಗುವ ಮುನ್ಸೂಚನೆ ಇದ್ದರೂ ಸಹ ಉತ್ತಮವಾಗಿ ಪಂದ್ಯ ನಡೆಸಲು ಶ್ರಮಿಸಿದ್ದಾರೆ.

ಫೈನಲ್ ಪಂದ್ಯದಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿದ ವೇಗಿ ಮೊಹಮ್ಮದ್ ಸಿರಾಜ್ ಅವರು ತಮಗೆ ಬಂದಿದ್ದ ಪಂದ್ಯಶ್ರೇಷ್ಠ ಪ್ರಶಸ್ತಿಯ ಮೊತ್ತವಾದ 4 .15ಲಕ್ಷ ರೂಪಾಯಿ ಬಹುಮಾನವನ್ನು ಸಿಬ್ಬಂದಿಗೆ ನೀಡುವ ಮೂಲಕ ಮಾನವೀಯತೆಯನ್ನು ಮೆರೆದಿದ್ದು ಪ್ರಶಂಸೆಗೆ ಪಾತ್ರರಾಗಿದ್ದಾರೆ.

Leave a Reply

Your email address will not be published. Required fields are marked *