
ಪಂಜಾಬ್: ಪಂಜಾಬ್ ಹಿರಿಯ ಐಪಿಎಸ್ ಅಧಿಕಾರಿ ಹರ್ಚರಣ್ ಸಿಂಗ್ ಭುಲ್ಲರ್ ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) 8 ಲಕ್ಷ ರೂ.ಲಂಚ ಪ್ರಕರಣದಲ್ಲಿ ರೈಡ್ ಮಾಡಿ ಬಂಧಿಸಲಾಗಿತ್ತು. ಬಳಿಕ ಮನೆ ಪರಿಶೀಲನೆ ಮಾಡಿದಾಗ ತನಿಖಾಧಿಕಾಗಳು ಬೆಚ್ಚಿ ಬಿದಿದ್ದಾರೆ.

ಪರಿಶೀಲನೆ ವೇಳೆ ಬರೋಬ್ಬರಿ 5 ಕೋಟಿ ರೂ. ನಗದು, ಆಡಿ & ಮರ್ಸಿಡಿಸ್ ಕಾರು, 22 ಐಷಾರಾಮಿ ವಾಚ್‌ಗಳು, 1.5 ಕೆ.ಜಿ ಚಿನ್ನದ ಆಭರಣಗಳು ಸೇರಿ ಆಸ್ತಿ ದಾಖಲೆಗಳನ್ನು ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ. ಇದೀಗ ಈ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿದೆ.

ಭುಲ್ಲರ್, ಪಂಜಾಬ್‌ನ ರೋಪರ್ ಶ್ರೇಣಿಯಲ್ಲಿ ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ಆಗಿ ನೇಮಕಗೊಂಡ ಹಿರಿಯ ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿಯಾಗಿದ್ದಾರೆ.

ಪಂಜಾಬ್‌ನ ಫತೇಘರ್ ಸಾಹಿಬ್‌ನಲ್ಲಿರುವ ಆಕಾಶ್ ಬಟ್ಟಾ ಎಂಬ ಸ್ಕ್ಯಾಪ್ ವ್ಯಾಪಾರಿ ಐದು ದಿನಗಳ ಹಿಂದೆ ಸಲ್ಲಿಸಿದ ಲಿಖಿತ ದೂರಿನ ಮೇರೆಗೆ ಗುರುವಾರ ಸಿಬಿಐ ಈ ಪ್ರಕರಣವನ್ನು ದಾಖಲಿಸಿದೆ. ದೂರುದಾರರ ಪ್ರಕಾರ, ಡಿಐಜಿ ಅವರು ಆರಂಭಿಕ ಲಂಚವಾಗಿ 8 ಲಕ್ಷ ರೂ.ಗಳನ್ನು ಪಾವತಿಸದಿದ್ದರೆ ಮತ್ತು ನಂತರ ಮಾಸಿಕ ಪಾವತಿಗಳನ್ನು ಮಾಡದಿದ್ದರೆ ತಮ್ಮನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಬಟ್ಟಾ ಆರೋಪಿಸಿದ್ದಾರೆ.

ಬಂಧಿತ ಭುಲ್ಲರ್ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ ನಡೆಸಿದಾಗ ತನಿಖಾ ಸಂಸ್ಥೆ ಸುಮಾರು 5 ಕೋಟಿ ರೂ. ನಗದು ವಶಪಡಿಸಿಕೊಂಡಿದೆ. ಇದಲ್ಲದೆ, ಅಧಿಕಾರಿಗಳು ಪಂಜಾಬ್‌ನಲ್ಲಿ ಸುಮಾರು 1.5 ಕೆಜಿ ಆಭರಣಗಳು, ಆಸ್ತಿ ದಾಖಲೆಗಳು ಮತ್ತು ಇತರ ಆಸ್ತಿಗಳನ್ನು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ ಎರಡು ಐಷಾರಾಮಿ ವಾಹನಗಳ (ಮರ್ಸಿಡಿಸ್ ಮತ್ತು ಆಡಿ) ಕೀಲಿಗಳು, 22 ಐಷಾರಾಮಿ ಕೈಗಡಿಯಾರಗಳು, ಲಾಕರ್ ಕೀಗಳು, 40 ಲೀಟರ್ ಆಮದು ಮಾಡಿಕೊಂಡ ಮದ್ಯ ಮತ್ತು ಒಂದು ಡಬಲ್ ಬ್ಯಾರೆಲ್ ಗನ್, ಒಂದು ಪಿಸ್ತೂಲ್, ಒಂದು ರಿವಾಲ್ವರ್ ಮತ್ತು ಒಂದು ಏರ್‌ಗನ್ ಸೇರಿದಂತೆ ಬಂದೂಕುಗಳು ಸೇರಿವೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
