ಪಂಚಾಯಿತಿಯನ್ನೂ ಸಹ ಗೆಲ್ಲಲು ಸಾಧ್ಯ ಇಲ್ಲದವರು ಹಾಗೂ ತಮ್ಮ ಗ್ರಾಮದಲ್ಲೇ ಹೆಚ್ಚಿನ ಮತ ಪಡೆಯಲು ಸಾಧ್ಯವಾಗದವರು ಬೇರೆಯವರ ಬಗ್ಗೆ ಟೀಕೆ ಮಾಡುವುದರಲ್ಲಿ ಅರ್ಥ ಇಲ್ಲ ಎಂದು ಹೆಸರನ್ನು ಹೇಳದೇ ಪರೋಕ್ಷವಾಗಿ ಜೆಡಿಎಸ್ ಮುಖಂಡ ಹರೀಶ್‌ಗೌಡ ಅವರನ್ನು ಕುಟುಕಿದ ಶಾಸಕ, ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಇಬ್ಬರ ಪರಿಶ್ರಮದಿಂದಲೇ ಕ್ಷೇತ್ರದಲ್ಲಿ ಹೆಚ್ಚಿನ ಮತಗಳನ್ನು ಪಡೆಯಲು ಸಾಧ್ಯವಾಗಿದೆ ಎಂದರು.
ಆದರೆ, ಹರೀಶ್‌ಗೌಡ ಅವರು ಮಾಜಿ ಆಗಿದ್ದರು ಕೂಡ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂದು ಹೇಳಿಕೊಂಡು ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕಾಗಿ ದುಡಿ- ಯುತ್ತಿರುವವರನ್ನು ಹಾಗೂ ಪಕ್ಷದ ಹಿರಿಯರನ್ನು ಮೂಲೆಗುಂಪು ಮಾಡಲು ಹೊರಟಿದ್ದಾರೆ ಎಂದು ಹೇಳಿದರು.
ಪಕ್ಷದ ಹಿರಿಯರ ಬಗ್ಗೆ ಮಾತಾಡುವಾಗ ಹುಷಾರ್…!
ತಾಲೂಕಿನಲ್ಲಿ ಪಕ್ಷ ಕಟ್ಟಿ ಬೆಳೆಸಿದ ಪಕ್ಷದ ಹಿರಿಯರನ್ನು ಗೌರವದಿಂದ ಕಾಣಬೇಕು. ಅವರ ಇಲ್ಲಸಲ್ಲದ ಆರೋಪಗಳನ್ನು ಹಾಕಿ ಇಷ್ಟಬಂದ ಹಾಗೇ ಮಾತನಾಡಬಾರದು. ಯಾರೂ ಏನೇ ಟೀಕೆ ಮಾಡಿದರು ಕೂಡ ಸಾರ್ವಜನಿಕ ಜೀವನದಲ್ಲಿ ಸೋಲು- ಗೆಲುವು ಸಾಮಾನ್ಯ. ಆದರೆ, ಅಭಿವೃದ್ಧಿ ಕೆಲಸ ಮೂಲಕ ಉತ್ತರ ನೀಡುತ್ತ ರಾಜಕಾರಣದಲ್ಲಿ ಇನ್ನೂ 50ವರ್ಷ ಕಾಲ ಇದ್ದೇ ಇರುತ್ತೇನೆ. ಮುಂದೆ ಈ ಎಲ್ಲಾ ಟೀಕೆಗಳಿಗೆ ಉತ್ತರ ನೀಡೇ ನೀಡುತ್ತೇನೆ ಎಂದರು.